»   » ಪೊಲೀಸ್ ಠಾಣೆ ಮೆಟ್ಟಿಲೇರಿದ ಮುದ್ದು ಮುಖದ ಶ್ರಾವ್ಯ

ಪೊಲೀಸ್ ಠಾಣೆ ಮೆಟ್ಟಿಲೇರಿದ ಮುದ್ದು ಮುಖದ ಶ್ರಾವ್ಯ

Posted By:
Subscribe to Filmibeat Kannada

ನಿರ್ದೇಶಕ ಎನ್‌.ಓಂ ಪ್ರಕಾಶ್‌ ರಾವ್ ಅವರ ಪುತ್ರಿ ಶ್ರಾವ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೌದು, ಅನಾಮಧೇಯ ನಂಬರ್‌ಗಳಿಂದ ಅವರಿಗೆ ಅಶ್ಲೀಲ ಎಸ್‌ಎಂಎಸ್ ಮತ್ತು ವಾಟ್ಸಪ್ ಸಂದೇಶಗಳು ಬರುತ್ತಿದ್ದು ಈ ಕುರಿತು ವಿಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.

'ರೋಜ್', 'ಕಟ್ಟೆ' ಸಿನಿಮಾಗಳಲ್ಲಿ ನಟಿಸಿರುವ ಶ್ರಾವ್ಯಗೆ ಕೆಲವು ದಿನಗಳಿಂದ ಅಶ್ಲೀಲ ಎಸ್‌ಎಂಎಸ್ ಮತ್ತು ವಾಟ್ಸಪ್ ಸಂದೇಶಗಳು ಬರುತ್ತಿವೆ. ಮೇ 20ರ ಬುಧವಾರ ಸಂಜೆ ಶ್ರಾವ್ಯ ಈ ಕುರಿತು ಬೆಂಗಳೂರಿನ ವಿಜಯನಗರ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Shravya

ದೂರಿನಲ್ಲೇನಿದೆ? : 'ಕೆಲ ದಿನಗಳಿಂದ ನನ್ನ ಮೊಬೈಲ್‌ಗೆ ಅನಾಮಧೇಯ ವ್ಯಕ್ತಿಯಿಂದ ಅಶ್ಲೀಲ ಎಸ್‌ಎಂಎಸ್ ಮತ್ತು ವಾಟ್ಸಪ್ ಸಂದೇಶಗಳು ಬರುತ್ತಿವೆ. ಇದರಿಂದ ನನ್ನ ಗೌರವಕ್ಕೆ ಧಕ್ಕೆ ಬಂದಿದೆ. ಆರೋಪಿಯನ್ನು ಹುಡುಕಿ, ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ದೂರಿನಲ್ಲಿ ಶ್ರಾವ್ಯ ಮನವಿ ಮಾಡಿದ್ದಾರೆ. [ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರಾವ್ಯಾ]

ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದಾರೆ. ಅನಾಮಧೇಯ ನಂಬರ್‌ಗೆ ಬಂದ ಕರೆಗಳ ಮಾಹಿತಿಗಳನ್ನು ಪೊಲೀಸರು ಕಲೆಹಾಕಲು ಆರಂಭಿಸಿದ್ದಾರೆ.[ಶ್ರಾವ್ಯ ಚಿತ್ರಪಟಗಳು]

'ಲೂಸುಗಳು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಕ್ಯೂಟ್ ಬೆಡಗಿ ಶ್ರಾವ್ಯಾ ತಮ್ಮ ಮುದ್ದಾದ ಮುಖ ಮತ್ತು ಛಲದಿಂದ ಗುರುತಿಸಿಕೊಂಡವರು. ಶ್ರಾವ್ಯ ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತು ರೇಖಾ ದಾಸ್ ಪುತ್ರಿ.

'ರೋಜ್' ಚಿತ್ರದ ಬಳಿಕ ಶ್ರಾವ್ಯಾ ಬ್ಯುಸಿಯಾಗಿದ್ದು 'ಬಜಾರ್', ಸಂತೋಷ್ ನಿರ್ದೇಶನದ 'ದಾದಾ ಈಸ್ ಬ್ಯಾಕ್' 'ಹುಚ್ಚ 2', 'ದರ್ಬಾರ್' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

English summary
Kannada actress Shravya lodge a complaint in vijayanagar police station Bengaluru on Wednesday, May 20, 2015. In his complaint Shravya said, she is receiving vulgar SMS and what's up message form unknown number form past few days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada