For Quick Alerts
  ALLOW NOTIFICATIONS  
  For Daily Alerts

  ವಾಲ್ ಆಫ್ ಫೇಮ್: ಇತಿ ಆಚಾರ್ಯ, ಕಾಕ್ರೋಚ್ ಸುಧಿ ಉತ್ತಮ ನಟಿ, ನಟ

  |

  ಬೆಂಗಳೂರಿನ ಶಾಂಗ್ರೀಲಾ ಹೋಟೆಲ್‌ನಲ್ಲಿ ನಡೆದ 'ವಾಲ್ ಆಫ್ ಫೇಮ್' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 50 ಸಾಧಕರು ಒಂದು ಕಡೆ ಸೇರಿದ್ದರು. ನಂದಿನಿ ನಾಗರಾಜ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 40ಕ್ಕು ಹೆಚ್ಚು ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಿ ಗುರುತಿಸಿಕೊಂಡಿದ್ದ ಗಣ್ಯರನ್ನು ಗೌರವಿಸಿ ಪ್ರಶಸ್ತಿ ನೀಡಲಾಯಿತು.

  ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಇತಿ ಆಚಾರ್ಯ ಪಡೆದರೆ, ಅತ್ಯುತ್ತಮ ನಟ ಪ್ರಶಸ್ತಿ ಕಾಕ್ರೋಚ ಸುಧಿ ಅವರಿಗೆ ಕೊಡಲಾಯಿತು. ಧನಲಕ್ಷ್ಮಿ ಅವರಿಗೆ ಸ್ವಾವಲಂಬಿ ಮಹಿಳೆ ಪ್ರಶಸ್ತಿ ದೊರೆತಿತು.

  ಮೋಟಿವೇಶನ್ ಸ್ಪೀಕರ್ ವಿಸ್ಮಯಾ: ಜೀವನದಲ್ಲಿ ಉತ್ಸಾಹವೇ ಇಲ್ಲದೆ ಬದುಕು ಬೇಡ, ಇನ್ನು ಸಾವೇ ಗತಿ ಎಂದುಕೊಂಡಿದ್ದ ಲಕ್ಷಾಂತರ ಜನರ ಮನಪರಿವರ್ತನೆ ಮಾಡಿರುವ ಮೋಟಿವೇಶನ್ ಸ್ಪೀಕರ್ ವಿಸ್ಮಯಾ ಗೌಡ ಅವರಿಗೂ ವಾಲ್ ಆಫ್ ಫೇಮ್ ಪ್ರಶಸ್ತಿ ಧಕ್ಕಿದೆ.

  ಅತ್ಯುತ್ತಮ ಆಂಕರ್ ಆಗಿ ನಿರಂಜನ್ ದೇಶಪಾಂಡೆ, ಇಂಟರ್ನ್ಯಾಷನಲ್ ಅಥ್ಲೀಟ್ ರೋಷನ್, ಬೆಸ್ಟ್ ವೆಡ್ಡಿಂಗ್ ಡೆಸ್ಟಿನೇಷನ್ ಅರುಣ್, ಟ್ರೆಂಡ್ ಸೆಟ್ಟರ್ ಶಿಲ್ಪಾ, ಅತ್ಯುತ್ತಮ ಸಮಾಜ ಸೇವೆ ಜಯರಾಜ್, ಇನ್ನೋವೇಶನ್ ಸಂಗೀತಗಾರ ಅನೀಶ್, ಉತ್ತಮ ಅರ್ ಜೆ ಪಟಾಕಿ ಶೃತಿ, ಸಮಾಜ ಸೇವೆಯಲ್ಲಿ ನಟಿ ಕಾರುಣ್ಯ ರಾಮ್, ಉತ್ತಮ ಮೊಡೆಲ್ ಪ್ರಿಯಾಂಕ ಗಿರೀಶ್, ಫಿಟ್ನೆಸ್ ಸ್ಪೂರ್ತಿ ವನಿತಾ ಅಶೋಕ್, ಉತ್ತಮ ವೈದ್ಯರು ಗಣೇಶ್ , ಫ್ಯಾಷನ್ ಐಕಾನ್ ಶ್ವೇತ ಮೌರ್ಯ ಪಡೆದುಕೊಂಡಿದ್ದಾರೆ.

  ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್, ನಟಿ ಶೃತಿ ಹರಿಹರನ್, ಇತಿ ಆಚಾರ್ಯ, ಕಾರುಣ್ಯ ರಾಮ್, ಆಂಕರ್ ನಿರಂಜನ್ ದೇಶಪಾಂಡೆ, ಶಾನ್ವಿ ಶ್ರೀವಾಸ್ತವ್, ಅಗ್ನಿ ಶ್ರೀಧರ್, ಐಪಿಎಸ್ ಭಾಸ್ಕರ್ ರಾವ್ , ಆಯೋಜಕಿ ನಂದಿನಿ ನಾಗರಾಜ್ ಇದ್ದರು.

  ನಟ ಡಾಲಿ ಧನಂಜಯ್ ಮಾತನಾಡಿ, ಸಾಧಕರಿಗೆ ಸನ್ಮಾನ ಸಿಕ್ಕರೆ ಅವರಿಗೆ ಕೆಲಸ ಮಾಡಲು ಇನ್ನಷ್ಟು ಉತ್ಸಾಹ ಸಿಗಲಿದೆ. ನಮ್ಮ ಸಿನಿಮಾ 'ಹೆಡ್ ಬುಷ್ ' ಅಕ್ಟೋಬರ್ 21 ಕ್ಕೆ ಬಿಡುಗಡೆಯಾಗಲಿದೆ. ಎಲ್ಲರೂ ಸಿನಿಮಾ ನೋಡಿ' ಎಂದರು.

  ಅಗ್ನಿ ಶ್ರೀಧರ್ ಮಾತನಾಡಿ, ಹೆಡ್ ಬುಷ್ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ. ಕಷ್ಟ ಪಟ್ಟು ಈ ಸಿನಿಮಾ ಮಾಡಿದ್ದೇವೆ. ಧನಂಜಯ್ ಈ ಸಿನಿಮಾ ಮಾಡಲು ನನಗೆ ಧೈರ್ಯ ಕೊಟ್ಟರು. ಚೆನ್ನಾಗಿ ಮೂಡಿಬಂದಿದೆ ಎಂದರು.

  ಅಯೋಜಕಿ ನಂದಿನಿ ನಾಗರಾಜ್ ಮಾತನಾಡಿ, ಈ ವರ್ಷ 50 ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ಮುಂದಿನ ವರ್ಷ ಇನ್ನಷ್ಟು ಸಾಧಕರಿಗೆ ಸನ್ಮಾನ ಮಾಡಲು ಅವಕಾಶ ಸಿಗಲಿದೆ. ಸಾಧಕರಿಗೆ ಧನ್ಯವಾದಗಳು ಎಂದರು.

  ಆಂಕರ್ ನಿರಂಜನ್ ದೇಶಪಾಂಡೆ, ನನ್ನ ಅಂಕರಿಂಗ್ ಸಾಧನೆಗೆ ಈ ಪ್ರಶಸ್ತಿ ಸಿಕ್ಕಿದ್ದು ಖುಷಿಯಾಯಿತು ಎಂದರು. ನಟಿ ಶೃತಿ ಹರಿಹರನ್ ಮಾತನಾಡಿ, ಹೆಚ್ಚು ಹೆಚ್ಚು ಸಾಧಕರನ್ನು ಇಲ್ಲಿ ನೋಡಿ ಖುಷಿಯಾಯಿತು ಎಂದರು. ನಟಿ ಕಾರುಣ್ಯ ರಾಮ್, ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲು ಈ ಪ್ರಶಸ್ತಿ ಸ್ಫೂರ್ತಿಯಾಗಿದೆ ಎಂದರು.

  English summary
  Wall Of Fame award distribution: Iti Acharya gets best heroine award. Best anchor award goes to Niranjan Deshpande.
  Tuesday, October 11, 2022, 10:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X