»   » ಥ್ರಿಲ್ ನೀಡುವ ಅಜೇಯ್ ರಾವ್ ಅಭಿನಯದ 'ಧೈರ್ಯಂ' ಟ್ರೈಲರ್, ನೀವೂ ನೋಡಿ..

ಥ್ರಿಲ್ ನೀಡುವ ಅಜೇಯ್ ರಾವ್ ಅಭಿನಯದ 'ಧೈರ್ಯಂ' ಟ್ರೈಲರ್, ನೀವೂ ನೋಡಿ..

Posted By:
Subscribe to Filmibeat Kannada

'ಕೃಷ್ಣ' ಅಜೇಯ್ ರಾವ್ ಅಭಿನಯದ 'ಧೈರ್ಯಂ' ಚಿತ್ರದ ಟ್ರೈಲರ್ ಇಂದು ಬೆಳಗ್ಗೆ 10.30 ರ ಸುಮಾರಿಗೆ ಬೆಂಗಳೂರಿನ ಎಸ್.ಆರ್.ವಿ ಥಿಯೇಟರ್ ನಲ್ಲಿ ಬಿಡುಗಡೆ ಮಾಡಲಾಯ್ತು.

ರೋಚಕವಾಗಿ ಮೂಡಿ ಬಂದಿರುವ 'ಧೈರ್ಯಂ' ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಲಿಸ್ಟ್ ಗೆ ಸೇರ್ಪಡೆ ಆಗಿದೆ. ಮಾಸ್ ಅಭಿಮಾನಿಗಳಂತೂ 'ಧೈರ್ಯಂ' ಟ್ರೈಲರ್ ನೋಡಿ ಶಿಳ್ಳೆ ಹೊಡೆದಿದ್ದಾರೆ.

ಮೈಂಡ್‌ ಗೇಮ್ ಮೂಲಕ ಪ್ರೇಕ್ಷಕರಿಗೆ ಬದುಕಿನ ಕಷ್ಟಗಳನ್ನು ಹೇಗೆ ಎದುರಿಸಬೇಕೆಂದು ಧೈರ್ಯ ತುಂಬುವ ಪಾತ್ರದಲ್ಲಿ ನಟ ಅಜಯ್ ರಾವ್ ಕಾಣಿಸಿಕೊಂಡಿದ್ದಾರೆ. ಇನ್ನೂ ಪೊಲೀಸ್ ಪಾತ್ರದಲ್ಲಿ ರವಿಶಂಕರ್ ಅಬ್ಬರಿಸಿದ್ದರೆ, ಟಿವಿ ನಿರೂಪಕಿಯಾಗಿದ್ದ ಅಧಿತಿ ಪ್ರಭುದೇವ್ ಮೊದಲಬಾರಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

Watch Ajai Rao starrer Kannada Movie 'Dhairyam' trailer

ವೃತ್ತಿಯಲ್ಲಿ ವೈದ್ಯರಾದ ಡಾ||ರಾಜು ರವರು 'ಧೈರ್ಯಂ' ಚಿತ್ರಕ್ಕೆ ಹಣ ಹೂಡಿ ನಿರ್ಮಾಪಕರಾಗಿದ್ದಾರೆ. 'ಮಳೆ' ಚಿತ್ರದ ನಿರ್ದೇಶಕ ಶಿವ ತೇಜಸ್ ಆಕ್ಷನ್ ಕಟ್ ಹೇಳಿದ್ದಾರೆ.

ಶೇಕರ್ ಚಂದ್ರ ಛಾಯಾಗ್ರಹಣ ಇರುವ 'ಧೈರ್ಯಂ' ಚಿತ್ರಕ್ಕೆ 'ಜಿಂಕೆಮರಿನಾ..' ಖ್ಯಾತಿಯ ಏಮಿಲ್ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗಷ್ಟೇ ವಿಧಾನ ಸೌಧದ ಮುಂದೆ 'ಧೈರ್ಯಂ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಜರುಗಿದ್ದು, ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.['ರೈತ, ಯೋಧ, ವಿದ್ಯಾರ್ಥಿ'ಯಿಂದ 'ಧೈರ್ಯಂ' ಆಡಿಯೋ ಬಿಡುಗಡೆ]

ಇದೀಗಷ್ಟೇ ಬಿಡುಗಡೆ ಆಗಿರುವ 'ಧೈರ್ಯಂ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿರಿ....

English summary
Kannada Actor Ajai Rao (Ajay Rao) starrer Kannada Movie 'Dhariyam' trailer is out. Watch the trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada