»   » ಸ್ಮಾರ್ಟ್ ಫೋನ್ ನಲ್ಲಿ ನೋಡಿ ಆನಂದಿಸಿ 'ಭಜರಂಗಿ'

ಸ್ಮಾರ್ಟ್ ಫೋನ್ ನಲ್ಲಿ ನೋಡಿ ಆನಂದಿಸಿ 'ಭಜರಂಗಿ'

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ' ಚಿತ್ರ 2013ರ ಬಾಕ್ಸ್ ಆಫೀಸ್ ಹಿಟ್ ಚಿತ್ರಗಳಲ್ಲಿ ಒಂದು. ಕೇವಲ 25 ದಿನಗಳಲ್ಲಿ 12.5 ಕೋಟಿ ಕಲೆ ಹಾಕುವ ಮೂಲಕ ಸ್ಯಾಂಡಲ್ ವುಡ್ ಚಿತ್ರಗಳು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಂತಹ ಚಿತ್ರ.

ಈ ಚಿತ್ರವನ್ನು ನೀವು ಥಿಯೇಟರ್ ನಲ್ಲಿ ನೋಡುವುದನ್ನು ಮಿಸ್ ಮಾಡಿಕೊಂಡಿದ್ದರೆ ನೋ ಪ್ರಾಬ್ಲಂ. ಇದೀಗ ನಿಮ್ಮ ಸ್ಮಾರ್ಟ್ ಫೊನ್ ನಲ್ಲೇ ನೋಡುವ ಅವಕಾಶ ಇಲ್ಲಿದೆ. ಇಲ್ಲಿನ ವಿಡಿಯೋವನ್ನು ಕ್ಲಿಕ್ಕಿಸಿ ಭಜರಂಗಿ ಸಂಪೂರ್ಣ ಚಿತ್ರವನ್ನು ಸವಿಯಿರಿ. ಆದರೆ ಫೋನ್ ನಲ್ಲಿ ಇಂಟರ್ ನೆಟ್ ಕನೆಕ್ಷನ್, ಡಾಟಾ ಇರಬೇಕಷ್ಟೆ. ['ಭಜರಂಗಿ' ಚಿತ್ರ ವಿಮರ್ಶೆ]


Watch Bhajarangi Kannada full movie

ಈ ಚಿತ್ರದ ವಿಶೇಷ ಎಂದರೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ ಚಿತ್ರ. ಇದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯ 105ನೇ ಚಿತ್ರ ಎಂದು ಅನ್ನಿಸುವುದೇ ಇಲ್ಲ. ಇನ್ನೂ ಮೊದಲ ಚಿತ್ರದಲ್ಲಿ ಅಭಿನಯಿಸಿದಷ್ಟೇ ಉತ್ಸಾಹವನ್ನು ಶಿವಣ್ಣನಲ್ಲಿ ಕಾಣಬಹುದು. ಮೂರು ಗಂಟೆಗಳು ಹೇಗೆ ಸರಿಯಿತು ಎಂಬುದೇ ಗೊತ್ತಾಗಲ್ಲ.

ಇದಕ್ಕೆ ಕಾರಣವಾಗಿರುವುದು ಚಿತ್ರದ ನಿರ್ದೇಶಕ ಎ.ಹರ್ಷ. ಕಥೆ ಹಾಗೂ ನಿರೂಪಣೆ ಮೇಲಿನ ಹಿಡಿತ ಎಲ್ಲೂ ತಾಳತಪ್ಪದಂದೆ ಪ್ರೆಸೆಂಟ್ ಮಾಡಿದ್ದಾರೆ. ಚಿತ್ರದಲ್ಲಿ ಕಾಮಿಡಿ, ರೊಮ್ಯಾನ್ಸ್, ಆಕ್ಷನ್ ಎಲ್ಲವನ್ನೂ ಸಮವಾಗಿ ತೂಗಿಸಿಕೊಂಡು ಹೋಗಿದ್ದಾರೆ. ಅದಕ್ಕೆ ತಕ್ಕಂತೆ ಶಿವಣ್ಣ ಅಭಿನಯವೂ ಇರುವುದು ಚಿತ್ರವನ್ನು ಇನ್ನಷ್ಟು ಕಲರ್ ಫುಲ್ ಆಗಿಸಿದೆ. ಇಂದು ಶನಿವಾರ, ಹನುಮಂತನಿಗೆ ಪ್ರಿಯವಾದ ದಿನ. ಇನ್ನು ನೀವುಂಟು ಭಜರಂಗಿ ಉಂಟು. (ಫಿಲ್ಮಿಬೀಟ್ ಕನ್ನಡ)


English summary
Watch Bhajarangi 2013 Kannada Full Movie. The fantasy film starring Shivrajkumar and Aindrita Ray in the lead roles. Directed by choreographer-turned-director Harsha courtesy : Anand Audio.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada