For Quick Alerts
  ALLOW NOTIFICATIONS  
  For Daily Alerts

  'ನಾಗರಹಾವು' ಟ್ರೈಲರ್: ಸಿಂಹ ನಡಿಗೆಯ ಸದ್ದಿಗೆ ಸ್ಯಾಂಡಲ್ ವುಡ್ ಶೇಕ್

  By Harshitha
  |

  ಅಂತೂ ಅಭಿಮಾನಿಗಳ ಕನವರಿಕೆ ಈಡೇರಿದೆ. ಕೋಟ್ಯಾಂತರ ಸಿನಿ ಪ್ರಿಯರು ಕಾಯುತ್ತಿದ್ದ ಘಳಿಗೆ ಬಂದೇಬಿಟ್ಟಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ 'ನಾಗರಹಾವು' ಟ್ರೈಲರ್ ಬಿಡುಗಡೆ ಆಗಿದೆ.

  ಡಾ.ವಿಷ್ಣುವರ್ಧನ್ ನಮ್ಮನ್ನೆಲ್ಲ ಅಗಲಿ ಆರು ವರ್ಷಗಳು ಉರುಳಿವೆ. ತೆರೆಮೇಲೆ ವಿಷ್ಣುದಾದಾ ರವರನ್ನ ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಬಿಗ್ ಸರ್ ಪ್ರೈಸ್ ಕೊಡಲು ಮುಂದಾಗಿದ್ದು 'ನಾಗರಹಾವು' ಚಿತ್ರತಂಡ. 'ಅಭಿನಯ ಭಾರ್ಗವ' ಇಂದು ನಮ್ಮೊಂದಿಗೆ ಭೌತಿಕವಾಗಿ ಇಲ್ಲದೇ ಇದ್ದರೂ, ಅವರನ್ನ 'ಜೀವಂತ'ವಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಿದೆ 'ನಾಗರಹಾವು' ಟೀಮ್.

  ಡಾ.ವಿಷ್ಣುವರ್ಧನ್ ರವರ ಜನ್ಮದಿನೋತ್ಸವದ ಪ್ರಯುಕ್ತ ನಿನ್ನೆ (ಸೆಪ್ಟೆಂಬರ್ 18) ರಿಲೀಸ್ ಆಗಿರುವ ಟ್ರೈಲರ್ ನಲ್ಲಿ 'ಸಾಹಸ ಸಿಂಹ' ಅಕ್ಷರಶಃ ಘರ್ಜಿಸಿದ್ದಾರೆ. ಅವರನ್ನ ಕಣ್ಣಾರೆ ಕಂಡು ಅಭಿಮಾನಿಗಳು ಕೃತಾರ್ಥರಾಗಿದ್ದಾರೆ. ಮುಂದೆ ಓದಿ.....

  'ನಾಗರಹಾವು' ಆಗಿ ಡಾ.ವಿಷ್ಣುವರ್ಧನ್.!

  'ನಾಗರಹಾವು' ಆಗಿ ಡಾ.ವಿಷ್ಣುವರ್ಧನ್.!

  'ನಾಗರಹಾವು' ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ರವರದ್ದು ನಾಗರಹಾವಿನ ಪಾತ್ರ. ಹೀಗಾಗಿ, ಇಡೀ ಸಿನಿಮಾದ ಕಥೆ ಸುತ್ತುವುದು ವಿಷ್ಣು ಸುತ್ತಲೇ.! ಬೇಕಾದ್ರೆ, 'ನಾಗರಹಾವು' ಟ್ರೈಲರ್ ನ ಸೂಕ್ಷ್ಮವಾಗಿ ಗಮನಿಸಿ.... [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]

  ರೋಚಕ ಕಾಳಗ

  ರೋಚಕ ಕಾಳಗ

  'ನಾಗರಹಾವು' ಆಗಿ ದುಷ್ಟರೊಂದಿಗೆ ಡಾ.ವಿಷ್ಣುವರ್ಧನ್ ಸೆಣಸಾಡುವ ರೋಚಕ ದೃಶ್ಯಾವಳಿ 'ನಾಗರಹಾವು' ಟ್ರೈಲರ್ ನಲ್ಲಿ ಇದೆ. ಆ ದೃಶ್ಯ ನೋಡುವ ಪ್ರತಿಯೊಬ್ಬ ವಿಷ್ಣು ಅಭಿಮಾನಿಗೂ ರೋಮಾಂಚನ ಆಗದೇ ಇರಲ್ಲ. ['ನಾಗರಹಾವು' ಬಗ್ಗೆ 'ನಾಗಿಣಿ' ರಮ್ಯಾ ಉದುರಿಸಿದ ಮಾತಿನ ಮುತ್ತು]

  ತೆರೆಮೇಲೆ ವಿಷ್ಣು ಜೀವಂತ

  ತೆರೆಮೇಲೆ ವಿಷ್ಣು ಜೀವಂತ

  ಡಾ.ವಿಷ್ಣುವರ್ಧನ್ ನಿಜವಾಗಿಯೂ ನಟಿಸಿದ್ದಾರೇನೋ...ಎಂಬ ಫೀಲ್ 'ನಾಗರಹಾವು' ಟ್ರೈಲರ್ ವೀಕ್ಷಿಸಿದ ಪ್ರತಿಯೊಬ್ಬರಿಗೂ ಬರುವುದು ಸಹಜ. ಅಂತಹ 'ನೈಜ' ವಿಶ್ಯುವಲ್ ಎಫೆಕ್ಟ್ಸ್ ಮಾಡಿರುವ ತಂತ್ರಜ್ಞರಿಗೆ ಹ್ಯಾಟ್ಸ್ ಆಫ್. [ಬಿಂಕ ಬಿಟ್ಟು ಬಳುಕಿರುವ 'ನಾಗಿಣಿ' ರಮ್ಯಾ ವಿಡಿಯೋ-ಆಡಿಯೋ ಹಿಂಗಿದೆ..]

  ಭಾರತೀಯ ಇತಿಹಾಸದಲ್ಲೇ ಇದು ಪ್ರಥಮ

  ಭಾರತೀಯ ಇತಿಹಾಸದಲ್ಲೇ ಇದು ಪ್ರಥಮ

  ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರುವ ವ್ಯಕ್ತಿಯನ್ನ ತೆರೆಮೇಲೆ ತರುವ ಸಾಹಸಕ್ಕೆ ಕೈಹಾಕಿರುವುದು ಇದೇ ಮೊದಲು. ಹೆಡ್ ರೀಪ್ಲೇಸ್ಮೆಂಟ್ ತಂತ್ರಜ್ಞಾನದ ಮುಖಾಂತರ ಡಾ.ವಿಷ್ಣುವರ್ಧನ್ ರನ್ನ 'ನಾಗರಹಾವು' ಮೂಲಕ ಮತ್ತೆ ತೆರೆಮೇಲೆ ತರಲಾಗಿದೆ. ['ನಾಗರಹಾವು' ಚಿತ್ರದಲ್ಲಿ ದರ್ಶನ್: ಎಕ್ಸ್ ಕ್ಲೂಸಿವ್ ಡೀಟೇಲ್ಸ್ ಇಲ್ಲಿದೆ]

  'ಬಾಹುಬಲಿ' ಚಿತ್ರಕ್ಕೂ 'ಇವರದ್ದೇ' ಗ್ರಾಫಿಕ್ಸ್

  'ಬಾಹುಬಲಿ' ಚಿತ್ರಕ್ಕೂ 'ಇವರದ್ದೇ' ಗ್ರಾಫಿಕ್ಸ್

  ಇಡೀ ಭಾರತದಲ್ಲಿ ಸೆನ್ಸೇಷನ್ ಹುಟ್ಟುಹಾಕಿದ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರಕ್ಕೆ ವಿಶ್ಯುವಲ್ ಎಫೆಕ್ಟ್ಸ್/ಗ್ರಾಫಿಕ್ಸ್ ವರ್ಕ್ ಮಾಡಿದ್ದ 'ಮಕುಟ ವಿ.ಎಫ್.ಎಕ್ಸ್' ಸಂಸ್ಥೆ 'ನಾಗರಹಾವು' ಚಿತ್ರಕ್ಕೂ ಅದೇ ಕೆಲಸ ಮಾಡಿದೆ.

  'ನಾಗರಹಾವು' ಚಿತ್ರದಲ್ಲಿ ರಮ್ಯಾ 'ನಾಗಿಣಿ'

  'ನಾಗರಹಾವು' ಚಿತ್ರದಲ್ಲಿ ರಮ್ಯಾ 'ನಾಗಿಣಿ'

  ಅತ್ತ ಡಾ.ವಿಷ್ಣುವರ್ಧನ್ 'ನಾಗರಹಾವು' ಆಗಿದ್ದರೆ, ಇತ್ತ ರಮ್ಯಾ 'ನಾಗಿಣಿ'. ಬುಸುಗುಡುವ 'ನಾಗಿಣಿ' ಆಗಿ ರಮ್ಯಾ 'ನಾಗರಹಾವು' ಚಿತ್ರದಲ್ಲಿ ಅದ್ಭುತ ಪರ್ಫಾಮೆನ್ಸ್ ನೀಡಿದ್ದಾರೆ ಅನ್ನೋದಕ್ಕೆ ಈ ಟ್ರೈಲರ್ ಸಾಕ್ಷಿ.

  ರಮ್ಯಾಗೆ ಇದು ಚಾಲೆಂಜ್

  ರಮ್ಯಾಗೆ ಇದು ಚಾಲೆಂಜ್

  'ಸ್ಯಾಂಡಲ್ ವುಡ್ ಕ್ವೀನ್' ಆಗಿದ್ದ ರಮ್ಯಾ ಇದುವರೆಗೂ ಗ್ಲಾಮರ್ ಗೊಂಬೆ ಆಗಿ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೇ ಹೊರತು 'ನಾಗಿಣಿ' ಆಗಿ ಅಭಿನಯಿಸಿರಲಿಲ್ಲ. ಹೀಗಾಗಿ ರಮ್ಯಾ ಅವತಾರವನ್ನ ಕಂಡು ಅವರ ಅಭಿಮಾನಿಗಳೂ ಕೂಡ ಫಿದಾ ಆಗಿದ್ದಾರೆ.

  ಪ್ರಮುಖ ಪಾತ್ರದಲ್ಲಿ ಸಾಯಿ ಕುಮಾರ್

  ಪ್ರಮುಖ ಪಾತ್ರದಲ್ಲಿ ಸಾಯಿ ಕುಮಾರ್

  'ನಾಗರಹಾವು' ಚಿತ್ರದ ಪ್ರಮುಖ ಪಾತ್ರದಲ್ಲಿ ಸಾಯಿ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ.

  ಟೈಟಲ್ ಸಾಂಗ್ ನಲ್ಲಿ ದರ್ಶನ್

  ಟೈಟಲ್ ಸಾಂಗ್ ನಲ್ಲಿ ದರ್ಶನ್

  'ನಾಗರಹಾವು' ಚಿತ್ರದ ಟೈಟಲ್ ಸಾಂಗ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸ್ಟೆಪ್ ಹಾಕಿದ್ದಾರೆ. ಅದರ ಝಲಕ್ ಟ್ರೈಲರ್ ನಲ್ಲಿದೆ.

  ಇದು ಫ್ಯಾಂಟಸಿ ಸಿನಿಮಾ!

  ಇದು ಫ್ಯಾಂಟಸಿ ಸಿನಿಮಾ!

  'ಅರುಂಧತಿ' ಸೇರಿದಂತೆ ಅನೇಕ ಫ್ಯಾಂಟಸಿ ಸಿನಿಮಾಗಳನ್ನ ನಿರ್ದೇಶಿಸಿ ಖ್ಯಾತಿ ಗಳಿಸಿರುವ ಕೋಡಿ ರಾಮಕೃಷ್ಣ 'ನಾಗರಹಾವು' ಚಿತ್ರದ ನಿರ್ದೇಶಕ. 'ನಾಗರಹಾವು' ಕೂಡ ಫ್ಯಾಂಟಸಿ-ಎಪಿಕ್ ಸಿನಿಮಾ.

  'ನಾಗರಹಾವು' ನಿರ್ಮಾಣ

  'ನಾಗರಹಾವು' ನಿರ್ಮಾಣ

  ಪೆನ್ ಮೂವೀಸ್ ವತಿಯಿಂದ 'ನಾಗರಹಾವು' ಚಿತ್ರವನ್ನ ಸಾಜಿದ್ ಖುರೇಶಿ, ಸೊಹೈಲ್ ಅನ್ಸಾರಿ, ಧವಳ್ ಗಡ ನಿರ್ಮಿಸಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ಇದೆ.

  ದಿಗಂತ್ ಪತ್ತೆ ಇಲ್ಲ!

  ದಿಗಂತ್ ಪತ್ತೆ ಇಲ್ಲ!

  ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿರುವ 'ನಾಗರಹಾವು' ಟ್ರೈಲರ್ ನಲ್ಲಿ ದಿಗಂತ್ ಪತ್ತೆ ಇಲ್ಲ.

  ತೆಲುಗು-ತಮಿಳಿನಲ್ಲೂ ಬರಲಿದೆ!

  ತೆಲುಗು-ತಮಿಳಿನಲ್ಲೂ ಬರಲಿದೆ!

  ಡಾ.ವಿಷ್ಣುವರ್ಧನ್ ರವರ 201ನೇ ಸಿನಿಮಾ 'ನಾಗರಹಾವು', ತಮಿಳಿನಲ್ಲಿ 'ಶಿವನಾಗಂ' ಹಾಗೂ ತೆಲುಗಿನಲ್ಲಿ 'ನಾಗಾಭರಣಂ' ಹೆಸರಿನಲ್ಲಿ ತೆರೆಗೆ ಬರಲಿದೆ.

  ಅಕ್ಟೋಬರ್ ನಲ್ಲಿ ಬಿಡುಗಡೆ

  ಅಕ್ಟೋಬರ್ ನಲ್ಲಿ ಬಿಡುಗಡೆ

  ಇಷ್ಟೆಲ್ಲಾ ವಿಶೇಷತೆಗಳಿರುವ 'ನಾಗರಹಾವು' ಚಿತ್ರ ಅಕ್ಟೋಬರ್ ನಲ್ಲಿ ಬಿಡುಗಡೆ ಆಗಲಿದೆ.

  ಟ್ರೈಲರ್ ನೋಡಿ....

  ಟ್ರೈಲರ್ ನೋಡಿ....

  ವ್ಯಾಪಕ ಪ್ರಶಂಸೆ ಗಿಟ್ಟಿಸುತ್ತಿರುವ 'ನಾಗರಹಾವು' ಚಿತ್ರದ ಟ್ರೈಲರ್ ನ ನೀವಿನ್ನೂ ನೋಡಿಲ್ಲ ಅಂದ್ರೆ ಈ ಲಿಂಕ್ ಕ್ಲಿಕ್ ಮಾಡಿ ನೋಡಿ.....

  English summary
  For the First time in India, CGI Created version of Legendary Actor Dr.Vishuvardhan's 201st movie 'Nagarahavu' trailer is out and it looks dashing. Watch Kodi Ramakrishna directorial, Ramya starrer Fantasy-Epic Thriller 'Nagarahavu' trailer here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X