»   » ತಪ್ಪಿಗೆ ಶಿಕ್ಷೆ ಕೊಡೋಕೆ ಬರ್ತಾವ್ನೆ 'ಅರ್ಜುನ'

ತಪ್ಪಿಗೆ ಶಿಕ್ಷೆ ಕೊಡೋಕೆ ಬರ್ತಾವ್ನೆ 'ಅರ್ಜುನ'

Posted By:
Subscribe to Filmibeat Kannada

ಗಾಂಧಿನಗರದಲ್ಲಿ 'ಡೈನಾಮಿಕ್ ಪ್ರಿನ್ಸ್' ಎಂದೇ ಕರೆಯಲ್ಪಡುವ ಪ್ರಜ್ವಲ್ ದೇವರಾಜ್ ಅಭಿನಯದ 'ಮೃಗಶಿರ' ಚಿತ್ರ ಮಕಾಡೆ ಮಲಗಿದ ವಿಚಾರ ನಿಮಗೆ ಗೊತ್ತೆ ಇದೆ. ಆದ್ರೆ, ಹಳೇ ಸೋಲನ್ನ ಮರೆತು ಈಗ 'ಅರ್ಜುನ'ನಾಗಿ ಪುಟಿದೆದ್ದಿದ್ದಾರೆ ಪ್ರಜ್ವಲ್ ದೇವರಾಜ್.

ಅಪ್ಪ ದೇವರಾಜ್ - ಮಗ ಪ್ರಜ್ವಲ್ ಒಂದಾಗಿ ಕಾಣಿಸಿಕೊಂಡಿರುವ 'ಅರ್ಜುನ' ಚಿತ್ರದ ಟ್ರೈಲರ್ ಈಗ ಬಿಡುಗಡೆಗೊಂಡಿದೆ. ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. 'ಅರ್ಜುನ' ಟ್ರೈಲರ್ ಇಲ್ಲಿದೆ ನೋಡಿ...

Watch Kannada movie 'Arjuna' official trailer

'ಪ್ರತಿ ತಪ್ಪಿಗೂ ಶಿಕ್ಷೆ ಕೊಡಬೇಕು ಎನ್ನುವವನೇ ಅರ್ಜುನ', 'ನ್ಯಾಯ ಇದ್ರೆ ಮನುಷ್ಯನಾಗಿರಬೇಕು, ಅನ್ಯಾಯ ಆದ್ರೆ ರಾಕ್ಷಸನಾಗಬೇಕು'...ಇಂತಹ ಖಡಕ್ ಡೈಲಾಗ್ಸ್ ಇರುವ 'ಅರ್ಜುನ' ಟ್ರೈಲರ್ ಎಲ್ಲೆಡೆ ಸಖತ್ ಸೌಂಡ್ ಮಾಡ್ತಿದೆ.

ಇಲ್ಲಿವರೆಗೂ ಚಾಕಲೇಟ್ ಬಾಯ್ ನಂತೆ ಕಾಣಿಸಿಕೊಳ್ಳುತ್ತಿದ್ದ ಪ್ರಜ್ವಲ್, 'ಅರ್ಜುನ' ಮೂಲಕ ಮೊದಲ ಬಾರಿ ಡಿಫರೆಂಟ್ ಲುಕ್ ನಲ್ಲಿ ಮಿಂಚಿದ್ದಾರೆ. ಆರ್ಯ ಕ್ರಿಯೇಷನ್ಸ್, ಅಡಿಯಲ್ಲಿ ಮೂಡಿಬರುತ್ತಿರುವ 'ಅರ್ಜುನ' ಪಕ್ಕಾ ಆಕ್ಷನ್-ಥ್ರಿಲ್ಲರ್ ಕಥೆಗೆ ಪಿ.ಸಿ.ಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.

Watch Kannada movie 'Arjuna' official trailer

ಇನ್ನೂ 'ಅರ್ಜುನ'ನಿಗೆ ನಾಯಕಿಯಾಗಿ ಮಲ್ಲು ಕುಟ್ಟಿ ಭಾಮಾ ಇದ್ರೆ ವಿಶೇಷ ಪಾತ್ರದಲ್ಲಿ ಶೀತಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ದೇವರಾಜ್, ರಮೇಶ್ ಭಟ್ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿರುವ 'ಅರ್ಜುನ' ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ.

English summary
Kannada movie 'Arjuna' official trailer is released. 'Arjuna' features Kannada actor Prajwal devaraj, Actress Bhama, Sheethal Shetty and Devaraj in the lead roles. The movie is directed by P.C Shekar. Watch the trailer here
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada