»   » ಎಲ್ಲೋ ನನ್ 'ಡವ್' ಟೀಸರ್ ಔಟ್ ಕಣ್ಲಾ

ಎಲ್ಲೋ ನನ್ 'ಡವ್' ಟೀಸರ್ ಔಟ್ ಕಣ್ಲಾ

Posted By:
Subscribe to Filmibeat Kannada

ಡವ್' ಪದಕ್ಕೆ ಪಾರಿವಾಳ ಅನ್ನುವ ಅರ್ಥ ಇರಬಹುದು. ಆದ್ರೆ ಅದೇ 'ಡವ್' ನ ರಿಯಲ್ ಸ್ಟಾರ್ ಉಪೇಂದ್ರ ಬೇರೆ ಥರ ಅರ್ಥೈಸಿದ್ದರು. ಉಪ್ಪಿಗಿಂತ ಕೊಂಚ ಬೇರೆ ರೂಟ್ ಹಿಡಿದಿರುವ 'ಅಲೆಮಾರಿ' ಸಂತು, 'ಡವ್' ಸಿನಿಮಾ ಮಾಡಿದ್ದಾರೆ.

ಕನ್ನಡದ ಕಟ್ಟಾಳು, ನಟಸಾರ್ವಭೌಮ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ, ನಿರ್ಮಾಪಕ, ಸಾ.ರಾ.ಗೋವಿಂದು ಪುತ್ರ ಅನೂಪ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು ಇದೇ ಚಿತ್ರದಿಂದ.

ಅದಾಗಲೇ 'ಡವ್' ಸೆಟ್ಟೇರಿ ಎರಡು ವರ್ಷಗಳಾಯ್ತು. ಹೊಸಬರ ಸಿನಿಮಾ ಆದ್ರಿಂದ ಕೊಂಚ ಜಾಗ್ರತೆಯಿಂದ ತಿದ್ದಿ-ತೀಡಿ ಚಿತ್ರೀಕರಿಸುವ ಅನಿವಾರ್ಯವಿದ್ದರಿಂದ 'ಡವ್' ತಡವಾಗಿದೆ ಅಷ್ಟೆ. ಕೆಲ ದಿನಗಳ ಹಿಂದೆಯಷ್ಟೆ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಲಿ ಆಡಿಯೋ ಸಿಡಿಗಳನ್ನ ಮಾರುಕಟ್ಟೆಗೆ ತಂದ 'ಡವ್' ಚಿತ್ರತಂಡ, ಇದೀಗ ಟೀಸರ್ ರಿಲೀಸ್ ಮಾಡಿದೆ.

Post by Annup Sa Ra Govindu.

ಅದನ್ನ ಖುದ್ದು ಅನೂಪ್, ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬಿಡುಗಡೆ ಮಾಡಿದ್ದಾರೆ. 'ಡವ್' ಅನ್ನುವ ಟೈಟಲ್ ಇರುವ ಕಾರಣ, ಇದು ಪಕ್ಕಾ ಲವ್ ಸ್ಟೋರಿ ಅಂತ ನೀವು ಭಾವಿಸಿದರೆ, ಒಮ್ಮೆ ಈ ಟೀಸರ್ ನೋಡಿ. [ಪಿಯು ಸ್ಟೂಡೆಂಟ್ ಸಾರಾ ಗೋವಿಂದು ಮಗನ ಡವ್ ಕಹಾನಿ]

ಮೊದಲ ನೋಟಕ್ಕೆ ಕಂಪ್ಲೀಟ್ ಆಕ್ಷನ್ ಚಿತ್ರದಂತೆ ಕಾಣುವ 'ಡವ್'ನಲ್ಲಿ ಅನೂಪ್ ಪಕ್ಕಾ ಲೋಕಲ್ ಹುಡುಗನಾಗಿ ಮಿಂಚಿದ್ದಾರೆ. ಇನ್ನೂ ಅನೂಪ್ 'ಡವ್' ಆಗಿರುವುದು ಅದಿತಿ. ಇಬ್ಬರ ಲವ್ವಿ-ಡವ್ವಿಯಲ್ಲಿ ಸಿಕ್ಕಾಪಟ್ಟೆ ಆಕ್ಷನ್ ತಂದಿಟ್ಟು ಆಕ್ಷನ್ ಕಟ್ ಹೇಳಿದ್ದಾರೆ ನಿರ್ದೇಶಕ ಸಂತು.

Watch kannada movie Dove teaser

ಸ್ಟಂಟ್ಸ್ ಒಂದನ್ನ ಬಿಟ್ಟರೆ 'ಡವ್' ಚಿತ್ರದ ಕಥೆ, ಪಂಚಿಂಗ್ ಡೈಲಾಗ್ ಗಳು, 'ಡವ್' ಹಿಂದೆ ಬರುವ ದುಶ್ಮನಿಗಳು, ಎಲ್ಲವೂ ಗುಟ್ಟಾಗಿದೆ. ಬಿ.ಕೆ.ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹಾಕಿದ್ರೆ, ಅರ್ಜುನ್ ಜನ್ಯ ಮ್ಯೂಸಿಕ್ ನೀಡಿದ್ದಾರೆ. [ಇಲ್ಲಿ ಯಾರು 'ಡವ್' ಮಾಡ್ತಿದ್ದಾರೋ ಗೊತ್ತಿಲ್ಲ...]

'ಡವ್' ನೋಡ್ಬೇಕು ಅಂತ ಕಾಯ್ತಿದ್ದವರಿಗೆ ಡವ್ ದರ್ಶನವಾಗಿದೆ. ಅಲ್ಲಿಗೆ, ಬೆಳ್ಳಿಪರದೆ ಮೇಲೆ ಡವ್ ಹಾರೋಡೋಕೆ ಇನ್ನೂ ಕೆಲವೇ ದಿನಗಳು ಬಾಕಿ..(ಫಿಲ್ಮಿಬೀಟ್ ಕನ್ನಡ)

English summary
Producer Sa.Ra.Govindu's son Annup debut movie Dove Teaser is out. Santhu of 'Alemari' fame has directed the movie and the first look teaser is a treat for Action movie lovers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada