»   » 'ಕನಸು ಕಣ್ಣು ತೆರೆದಾಗ' ಚಿತ್ರದ ಟ್ರೈಲರ್ ಔಟ್

'ಕನಸು ಕಣ್ಣು ತೆರೆದಾಗ' ಚಿತ್ರದ ಟ್ರೈಲರ್ ಔಟ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ 'ರಂಗಿತರಂಗ' ಕಮಾಲ್ ಮಾಡಿದ್ದನ್ನು ನೀವೆಲ್ಲರೂ ನೋಡಿದ್ದೀರಾ, ಕೇಳಿದ್ದೀರಾ, ಅಲ್ವಾ. ಎಲ್ಲಾ ಹೊಸಬರನ್ನು ಹಾಕಿಕೊಂಡು ಮಾಡಿದ ಸಿನೆಮಾ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಅದೇನೆ ಇರಲಿ ಇದೀಗ ಅದೇ ಸಾಲಿಗೆ ಇನ್ನೊಂದು ಹೊಸ ಸಿನೆಮಾ ಸೇರ್ಪಡೆ ಆಗುತ್ತಿದೆ. ಕರಾವಳಿ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಸಂತೋಷ್ ಶೆಟ್ಟಿ ಕಟೀಲ್ ನಿರ್ದೇಶನ ಮಾಡುತ್ತಿರುವ 'ಕನಸು ಕಣ್ಣು ತೆರೆದಾಗ' ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ.

ಮೇಲ್ನೊಟಕ್ಕೆ ಪೂರ್ತಿ ಮಕ್ಕಳಿಗೆ ಸಂಬಂಧಪಟ್ಟಂತೆ ತೋರುವ 'ಕನಸು ಕಣ್ಣು ತೆರೆದಾಗ' ಚಿತ್ರದ ಬಿಡುಗಡೆಯಾಗಿರುವ ಟ್ರೈಲರ್ ನೀವೇ ನೋಡಿ.

Watch Kannada Movie 'Kanasu Kannu Teredaga' trailer

ಗಾನ ಸಿರಿ ಕ್ರಿಯೇಷನ್ಸ್, ಮಾಣಿಕ್ಯ ಕಂಬೈನ್ಸ್ ಅರ್ಪಿಸುವ 'ಕನಸು ಕಣ್ಣು ತೆರೆದಾಗ' ಚಿತ್ರದಲ್ಲಿ ನೀವು ಪ್ರೊಫೆಸರ್ 'ಹುಚ್ಚ' ಅನ್ನುವವರನ್ನು ಭೇಟಿ ಮಾಡಲಿದ್ದೀರಿ. ಎರಡು ಜನ ಹುಡುಗರ ಫ್ರೆಂಡ್ ಶಿಪ್ ಕಥೆಯನ್ನಾಧರಿಸಿದ ಚಿತ್ರದಲ್ಲಿ ಎಲ್ಲಾ ಹೊಸೊಬ್ಬರೇ ಇದ್ದಾರೆ.

'ಕನಸು ಕಾಣೋದಕ್ಕೂ ಒಂದು ಮಿತಿ ಇರಬೇಕು ಕಣೋ' 'ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಇಂತಹ ಅವಮಾನಗಳನ್ನು ಸಹಿಸಲೇಬೇಕು' ಹೀಗೆ ಪಂಚ್ ಡೈಲಾಗ್ ಇರುವ 'ಕನಸು ಕಣ್ಣು ತೆರೆದಾಗ' ಚಿತ್ರಕ್ಕೆ ಯಶವಂತ್ ಉಡುಪಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಸ್ವಲ್ಪ ಡ್ರಾಮಾ, ಕಾಮಿಡಿ, ಆಕ್ಷನ್ ಇರುವ 'ಕನಸು ಕಣ್ಣು ತೆರೆದಾಗ' ಚಿತ್ರದಲ್ಲಿ ಗಂಗಾಧರ್ ಬೆಳ್ಳಾರೆ, ತಮನ್ನಾ ಶೆಟ್ಟಿ, ಬಾಲ ನಟರಾದ ಜಗದೀಶ, ಟಿ ಮತ್ತು ಪವನ್ ಬೆಳ್ಳಾರೆ, ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. 'ರಂಗಿತರಂಗ' ಹಿಟ್ ಆದಂತೆ 'ಕನಸು ಕಣ್ಣು ತೆರೆದಾಗ' ಚಿತ್ರನೂ ಕಮಾಲ್ ಮಾಡುತ್ತಾ ಅನ್ನೋದನ್ನ ನೋಡಲು, ಚಿತ್ರ ತೆರೆಗೆ ಬರುವವರೆಗೂ ನೀವು ಕಾಯಲೇ ಬೇಕು.

English summary
Kannada Actor Gangadhar Bellare, Chidanand Kamath, Jagadish, Pranav Actress Thamanna Shetty, starrer Kannada movie 'Kanasu Kannu Teredaga' official trailer is released. Watch directorial Santhosh Shetty 'Kanasu Kannu Teredaga' trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada