For Quick Alerts
  ALLOW NOTIFICATIONS  
  For Daily Alerts

  'ಕಿರಿಕ್ ಪಾರ್ಟಿ' ಟ್ರೈಲರ್ ನೋಡಿ, ಕಾಲೇಜು ದಿನದತ್ತ ಜಾರಿ ಹೋಗಿ

  By Suneetha
  |

  'ಉಳಿದವರು ಕಂಡಂತೆ' ಚಿತ್ರದ ಮೂಲಕ ತಾವೊಬ್ಬ ವಿಭಿನ್ನ ನಟನ ಜೊತೆಗೆ ನಿರ್ದೇಶಕ ಕೂಡ ಹೌದು ಅಂತ ತೋರಿಸಿಕೊಟ್ಟ ನಟ ರಕ್ಷಿತ್ ಶೆಟ್ಟಿ ಅವರು, 'ಕಿರಿಕ್ ಪಾರ್ಟಿ' ಮಾಡೋ ಸಂಗತಿ ಎಲ್ಲರಿಗೂ ತಿಳಿದೇ ಇದೆ.

  'ಕಿರಿಕ್ ಪಾರ್ಟಿ' ಸಿನಿಮಾ ಶುರುವಾಗಿದ್ದೊಂದು ಗೊತ್ತು, ಆದ್ರೆ ಶೂಟಿಂಗ್ ಯಾವಾಗ ಮುಕ್ತಾಯ ಆಯ್ತು ಅಂತ ಯಾರಿಗೂ ಗೊತ್ತಾಗಲಿಲ್ಲ. ಬಹಳ ಹರಿ-ಬಿರಿಯಾಗಿ ಶೂಟಿಂಗ್ ಮುಗಿಸಿದ ನಿರ್ದೇಶಕ ರಿಶಬ್ ಶೆಟ್ಟಿ ಅವರು, ಇಂದು (ಅಕ್ಟೋಬರ್ 27) ಚಿತ್ರದ ಟ್ರೈಲರ್ ಕೂಡ ಬಿಡುಗಡೆ ಮಾಡಿದ್ದಾರೆ.[ಶೆಟ್ರ ಸ್ಫೂರ್ತಿಯಾಗಿರೋ 'ಈ' ನಟನಿಂದ 'ಕಿರಿಕ್ ಪಾರ್ಟಿ' ಟ್ರೈಲರ್ ರಿಲೀಸ್]

  ರಕ್ಷಿತ್ ಶೆಟ್ಟಿ ಅವರ ಫೇವರಿಟ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಕೈಯಿಂದ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.

  ಈ ಟ್ರೈಲರ್ ನೋಡುತ್ತಿದ್ದರೆ, ಖಂಡಿತವಾಗ್ಲೂ ಹಲವರಿಗೆ ತಮ್ಮ ಕಾಲೇಜು ಜೀವನದ ದಿನಗಳು ನೆನಪಾಗದೇ ಇರಲ್ಲ. ಕಾಲೇಜು ದಿನಗಳಲ್ಲಿ ಮಾಡಿದ ತರ್ಲೆಗಳು, ಹಾಸ್ಟೇಲ್ ಜೀವನ ಇತ್ಯಾದಿಗಳನ್ನು 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ರಸವತ್ತಾಗಿ ಬಣ್ಣಿಸಿದ್ದಾರೆ ನಿರ್ದೇಶಕ ರಿಶಬ್ ಶೆಟ್ಟಿ ಅವರು.

  Watch Kannada Movie 'Kirik Party' Official Trailer

  ಇನ್ನು ಈ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಲುಕ್ ಕೂಡ ಬದಲಾಗಿದೆ. ಗಡ್ಡ-ಮೀಸೆ ಬೋಳಿಸಿ ಒಳ್ಳೆ ಚಾಕಲೇಟು ಹೀರೋ ತರ ಕಾಣಿಸುತ್ತಾರೆ ಶೆಟ್ರು. ಯಾವುದೇ ಜಬರ್ದಸ್ತ್ ಫೈಟ್ ಇಲ್ಲದೆ ಬರೀ ಕಾಮಿಡಿಯಾಗಿರೋ 'ಕಿರಿಕ್ ಪಾರ್ಟಿ' ಟ್ರೈಲರ್ ನೋಡುತ್ತಿದ್ದರೆ, ಪಕ್ಕಾ ಈಗಿನ ಯುವಜನತೆಯ ಮನಸ್ಥಿತಿಗೆ ತಕ್ಕಂತೆ ಸಿನಿಮಾ ಮಾಡಿದಂತಿದೆ.

  ನಟಿ ರಶ್ಮಿಕ ಮಂದಣ್ಣ ಮತ್ತು ನಟಿ ಸಂಯುಕ್ತ ಹೆಗಡೆ ಅವರು ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದು, ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.[ಮೊದಲ ಹಂತದ ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿ ಶೆಟ್ರ 'ಕಿರಿಕ್' ಬಳಗ]

  ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಸ್ಕ್ರೀನ್ ನಲ್ಲಿ ರಾರಾಜಿಸಲಿರುವ 'ಕಿರಿಕ್ ಪಾರ್ಟಿ' ಚಿತ್ರದ, ಟ್ರೈಲರ್ ಝಲಕ್ ಸದ್ಯಕ್ಕೆ ನೋಡಿ ಎಂಜಾಯ್ ಮಾಡಿ...

  English summary
  Watch Kannada Movie 'Kirik Party' Official Trailer. The movie feature Kannada Actor Rakshit Shetty, Actress Rashmika Mandanna, Actress Samyuktha Hedge, Aravind Iyer, Dhananjay Ranjan, Chandan Achar, Ashwin Rao Pallaki, Pramod Shetty, Shankar Murthy. The movie is directed by Rishab Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X