»   » ರಕ್ಷಿತ್ ಶೆಟ್ಟಿಯ 'ತಿರಬೋಕಿ ಜೀವನ' ಸಖತ್ ವೈರಲ್

ರಕ್ಷಿತ್ ಶೆಟ್ಟಿಯ 'ತಿರಬೋಕಿ ಜೀವನ' ಸಖತ್ ವೈರಲ್

Written By:
Subscribe to Filmibeat Kannada

ಸದ್ಯ, ಸ್ಯಾಂಡಲ್ ವುಡ್ ನಲ್ಲಿ ಎಲ್ಲೇ ನೋಡಿದ್ರೂ, ರಕ್ಷಿತ್ ಶೆಟ್ಟಿ ಅವರ 'ತಿರಬೋಕಿ ಜೀವನ'ದ್ದೇ ಸೌಂಡ್. ಅರೇ 'ತಿರಬೋಕಿ ಜೀವನ' ಅಂದಾಕ್ಷಣ ಬೇರೆ ಏನೋ ಕಲ್ಪನೆ ಮಾಡಿಕೊಳ್ಳಬೇಡಿ. ಯಾಕಂದ್ರೆ, ಇದು ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಹೊಸ ಚಿತ್ರದ ಹೊಸ ಹಾಡು.

ಹೌದು, ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ 'ಕಿರಿಕ್ ಪಾರ್ಟಿ' ಚಿತ್ರದ ಮೊದಲ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈಗ ಹಾಡು, ಸೂಪರ್ ಹಿಟ್ ಆಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.['ಕಿರಿಕ್ ಪಾರ್ಟಿ' ಮಾಡ್ತಾರೆ ರಿಶಬ್ ಮತ್ತು ರಕ್ಷಿತ್ ಶೆಟ್ಟಿ.!]

Watch Kannada Movie Kirik Party's Thirboki Jeevana Song

'ತಿರಬೋಕಿ ಜೀವನ ನಮ್ದು ಅಲ್ಲ, ಖಾಲಿ ಕೂತು ಬೋರಾಗಿದೆ' ಎಂಬ ಡಿಫ್ರೆಂಟ್ ಸಾಹಿತ್ಯ ಹೊಂದಿರುವ ಈ ಹಾಡನ್ನ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಬರೆದಿದ್ದು, ಅಜನೀಶ್ ಲೋಕನಾಥ್ ಹಾಡಿದ್ದಾರೆ. ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಹಾಗೂ ಅವರ ಸ್ನೇಹಿರ ಗ್ಯಾಂಗ್, ಕಾಲೇಜ್ ನಿಂದ ಸಸ್ಪೆಂಡ್ ಆದಾಗ ಈ ಹಾಡನ್ನ ಬಳಸಲಾಗಿದೆ.[ಶೆಟ್ರ ಸ್ಫೂರ್ತಿಯಾಗಿರೋ 'ಈ' ನಟನಿಂದ 'ಕಿರಿಕ್ ಪಾರ್ಟಿ' ಟ್ರೈಲರ್ ರಿಲೀಸ್]

Watch Kannada Movie Kirik Party's Thirboki Jeevana Song

ರಿಲೀಸ್ ಆದ ಎರಡೇ ದಿನಗಳಲ್ಲಿ ಆನ್ ಲೈನ್ ನಲ್ಲಿ 1 ಲಕ್ಷ ವೀವರ್ಸ್ ಈ ಹಾಡನ್ನ ನೋಡಿದ್ದರು. ಈಗ ಆ ಸಂಖ್ಯೆ 1.5 ಲಕ್ಷ ದಾಟಿದೆ.

Watch Kannada Movie Kirik Party's Thirboki Jeevana Song

ಅಂದ್ಹಾಗೆ, 'ಕಿರಿಕ್ ಪಾರ್ಟಿ' ಚಿತ್ರಕ್ಕೆ ರಿ‍ಷಿಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ನಟ ರಕ್ಷಿತ್ ಶೆಟ್ಟಿ ಅವರೇ ಚಿತ್ರಕ್ಕೆ ಕಥೆ ಬರೆದು, 'ಪರಂವಾ ಸ್ಟುಡಿಯೋಸ್' ಮೂಲಕ ನಿರ್ಮಾಣ ಕೂಡ ಮಾಡಿದ್ದಾರೆ. ಇನ್ನೂ ಅಜನೀಷ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.['ಕಿರಿಕ್ ಪಾರ್ಟಿ' ಟ್ರೈಲರ್ ನೋಡಿ, ಕಾಲೇಜು ದಿನದತ್ತ ಜಾರಿ ಹೋಗಿ]

Watch Kannada Movie Kirik Party's Thirboki Jeevana Song

ಹಾಸನದ ಮಲ್ನಾಡ್ ಕಾಲೇಜಿನಲ್ಲಿ, ಕಾಲೇಜು ಭಾಗದ ಶೂಟಿಂಗ್ ಮಾಡಲಾಗಿದೆ. ನವ ನಟಿಯರಾದ ನಟಿ ರಶ್ಮಿಕ ಮಂದಣ್ಣ ಮತ್ತು ನಟಿ ಸಂಯುಕ್ತ ಹೆಗಡೆ ಅವರು ಇದೇ ಮೊದಲ ಬಾರಿಗೆ ನಟ ರಕ್ಷಿತ್ ಶೆಟ್ಟಿ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ. ನಟ ಅಚ್ಯುತ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

'ಕಿರಿಕ್ ಪಾರ್ಟಿ' ಚಿತ್ರದ 'ತಿರಬೋಕಿ' ಹಾಡನ್ನ ನೊಡಿಲ್ವಾ? ಈ ಲಿಂಕ್ ಕ್ಲಿಕ್ ಮಾಡಿ ಹಾಡು ನೋಡಿ.....

English summary
Watch Kannada Movie 'Kirik Party's New song 'Thirboki Jeevana'. it's trending in social media. The movie feature Kannada Actor Rakshit Shetty, Actress Rashmika Mandanna, Actress Samyuktha Hedge. The movie is directed by Rishab Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada