»   » ಟೀಸರ್: ವ್ಹಾ.! ನಮ್ ಕಿಚ್ಚ ಅವ್ರುದ್ದು ಅದೇನ್ ಸ್ಟೈಲ್ ಅಂತೀರಾ

ಟೀಸರ್: ವ್ಹಾ.! ನಮ್ ಕಿಚ್ಚ ಅವ್ರುದ್ದು ಅದೇನ್ ಸ್ಟೈಲ್ ಅಂತೀರಾ

Posted By:
Subscribe to Filmibeat Kannada

ಅಭಿಮಾನಿಗಳು ಕಾಯುತ್ತಿದ್ದ ಕುತೂಹಲದ ಕ್ಷಣಕ್ಕೆ ಇದೀಗ ತೆರೆ ಬಿದ್ದಿದೆ. ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕೋಟಿಗೊಬ್ಬ 2' ಎರಡನೇ ಟೀಸರ್ ಬಿಡುಗಡೆ ಆಗಿದೆ.

ಬಿಡುಗಡೆ ಆದ ಕೆಲವೇ ಕ್ಷಣದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಜನರ ವೀಕ್ಷಣೆಗೆ ಒಳಪಟ್ಟ 'ಕೋಟಿಗೊಬ್ಬ 2' ಈಗಾಗಲೇ ಬಹಳ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಕನ್ನಡದಲ್ಲಿ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾ ತಮಿಳಿನಲ್ಲಿ 'ಮುಡಿಂಜ ಇವನ ಪುಡಿ' ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ. ಕಾಲಿವುಡ್ ನಲ್ಲೂ ಟೀಸರ್ ತೆರೆಕಂಡಿದೆ.[ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಜುಲೈನಲ್ಲಿ ಡಬಲ್ ಧಮಾಕಾ]


Watch Kannada Movie 'Kotigobba 2' Official Teaser

ವಾವ್ ಈ ಟೀಸರ್ ನಲ್ಲಿ ಸುದೀಪ್ ಅವರ ಸ್ಟೈಲ್ ಎಷ್ಟು ಸಖತ್ ಆಗಿದೆ ಅಂತೀರಾ?. ಸ್ಟೈಲಿಷ್ ವಾಕ್ ಅಂಡ್ ಸ್ಟೈಲಿಷ್ ಲುಕ್, ವಿಭಿನ್ನ ಡೈಲಾಗ್ ಡೆಲಿವರಿ, ಜಬರ್ದಸ್ತ್ ಫೈಟಿಂಗ್ ನಲ್ಲಿ ಮಿಂಚುವ ಮೂಲಕ ಸುದೀಪ್ ತಮ್ಮ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದ್ದಾರೆ.


ಮಾತ್ರವಲ್ಲದೇ ನಿತ್ಯಾ ಮೆನನ್ ಅವರ ಜೊತೆ ರೋಮ್ಯಾಂಟಿಕ್ ಸೀನ್ ನಲ್ಲಿ ಕೂಡ ಕಿಚ್ಚ ಸುದೀಪ್ ಅವರು ಅಭಿಮಾನಿಗಳಿಗೆ ತುಂಬಾ ಹಿಡಿಸುತ್ತಾರೆ. ಇದೆಲ್ಲದರ ಜೊತೆ ಖಡಕ್ ಪೊಲೀಸರ್ ಆಪೀಸರ್ ಆಗಿ ಸಕಲಕಲಾವಲ್ಲಭ 'ಆರ್ಮುಗಂ' ರವಿಶಂಕರ್ ಅವರು ಸುದೀಪ್ ಅವರ ಜೊತೆ ಸಾಥ್ ಕೊಟ್ಟಿರೋದು ಐಸ್ ಕ್ರೀಂ ಜೊತೆ ಚೆರ್ರಿ ಇಟ್ಟಂಗಿದೆ.[ಎಕ್ಸ್ ಕ್ಲೂಸಿವ್: 'ಕೋಟಿಗೊಬ್ಬ-2' ಚಿತ್ರದ ಬೊಂಬಾಟ್ ಫೋಟೋಗಳು]


Watch Kannada Movie 'Kotigobba 2' Official Teaser

ಇನ್ನು ನಿಮ್ಮೆಲ್ಲರನ್ನು ನಗೆಗಡಲಲ್ಲಿ ಮುಳುಗಿಸಲು ಕಾಮಿಡಿ ನಟ ಚಿಕ್ಕು ಮತ್ತು ಸಾಧು ಅವರು ಇದ್ದು, ಇವರಿಬ್ಬರ ಕಾಂಬಿನೇಷನ್ ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ. ಒಟ್ನಲ್ಲಿ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರು ಈ ತಿಂಗಳ ಅಂತ್ಯಕ್ಕೆ ಒಂದೊಳ್ಳೆ ಕೌಟುಂಬಿಕ ಮನರಂಜನೆಯುಳ್ಳ ಸೂಪರ್ ಸಿನಿಮಾವನ್ನು ತೆರೆಗೆ ತರಲಿದ್ದಾರೆ.


ರಾಂಬಾಬು ಪ್ರೊಡಕ್ಷನ್ಸ್ ಅಡಿಯಲ್ಲಿ ಸೂರಪ್ಪ ಬಾಬು ಅವರು ಬಂಡವಾಳ ಹೂಡಿರುವ 'ಕೋಟಿಗೊಬ್ಬ 2' ಚಿತ್ರದ ಕಲರ್ ಫುಲ್ ಟೀಸರ್ ಇಲ್ಲಿದೆ ನೋಡಿ.....


Watch Kannada Movie 'Kotigobba 2' Official Teaser

English summary
Watch Kannada Movie 'Kotigobba 2' Official Teaser. Kannada Actor Sudeep, Actress Nithya menen, Actor Ravishankar in the lead role. The movie is directed by KS Ravikumar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada