For Quick Alerts
  ALLOW NOTIFICATIONS  
  For Daily Alerts

  ವಿಭಿನ್ನ ಪ್ರಯೋಗವುಳ್ಳ 'ಮಡಮಕ್ಕಿ' ಟ್ರೈಲರ್, ತಪ್ಪದೇ ನೋಡಿ

  By Suneetha
  |

  ಸಾಮಾನ್ಯವಾಗಿ ಹಿಮ್ಮುಖವಾಗಿ ಚಲಿಸುವ ದೃಶ್ಯಗಳನ್ನು ಹೆಚ್ಚಾಗಿ ಹಾಲಿವುಡ್ ಸಿನಿಮಾಗಳಲ್ಲಿ ತೋರಿಸಲಾಗುತ್ತದೆ. ಹಾಲಿವುಡ್ ನಲ್ಲಿ 'ಕ್ಯಾಪ್ಟನ್ ಅಮೆರಿಕ-ಸಿವಿಲ್ ವಾರ್' ಎಂಬ ಚಿತ್ರದ ಟ್ರೈಲರ್ ಅನ್ನು ರಿವರ್ಸ್ ತೋರಿಸಿ ಚಿತ್ರತಂಡ ಖ್ಯಾತಿ ಗಳಿಸಿತ್ತು. ಇದೀಗ ಆ ಟ್ರೆಂಡ್ ನಮ್ಮ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದೆ.

  ಹೌದು ಕನ್ನಡದಲ್ಲೊಂದು ವಿಭಿನ್ನ ಪ್ರಯೋಗವುಳ್ಳ 'ಮಡಮಕ್ಕಿ' ಎಂಬ ಸಿನಿಮಾವೊಂದು ತೆರೆ ಮೇಲೆ ಬರಲು ಸಜ್ಜಾಗಿದೆ. ಇದೀಗ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಬಹಳ ವಿಭಿನ್ನವಾಗಿರುವ ಟ್ರೈಲರ್ ಸಿನಿಪ್ರೀಯರಲ್ಲಿ ತುಂಬಾ ಕುತೂಹಲ ಹುಟ್ಟು ಹಾಕಿದೆ.

  ಚಿತ್ರದ ಎಲ್ಲಾ ದೃಶ್ಯಗಳು ರಿವರ್ಸ್ ಹೋಗುತ್ತಿದ್ದು, ಟ್ರೈಲರ್ ಅಂತ್ಯದಿಂದ ಶುರುವಾಗುತ್ತಿದೆ. ಸಾಮಾನ್ಯವಾಗಿ ಎಲ್ಲಾ ಟ್ರೈಲರ್ ಗಳಲ್ಲಿ ಕಮಿಂಗ್ ಸೂನ್ ಅಂತ ಅಂತ್ಯದಲ್ಲಿ ಬಂದರೆ 'ಮಡಮಕ್ಕಿ' ಚಿತ್ರದ ಟ್ರೈಲರ್ ನಲ್ಲಿ ಮಾತ್ರ ಆರಂಭದಿಂದ ಕಮಿಂಗ್ ಸೂನ್ ಅಂತ ಆರಂಭವಾಗಿದೆ.

  ಆ ನಂತರದ ಎಲ್ಲಾ ದೃಶ್ಯಗಳು ರಿವರ್ಸ್ ಚಲಿಸುತ್ತದೆ. ಅಂದಹಾಗೆ ಬರೀ ಈ ಟ್ರೈಲರ್ ಮಾತ್ರವಲ್ಲದೇ ಇಡೀ ಸಿನಿಮಾ ಕೂಡ ಹಿಮ್ಮುಖವಾಗಿ ಚಲಿಸುತ್ತದೆ ಎಂದು ಹೇಳಲಾಗುತ್ತಿದೆ. ಅದು ನಿಜಾನೋ ಅಥವಾ ಪಬ್ಲಿಸಿಟಿ ಗಿಮಿಕ್ಕೋ ಅನ್ನೋದು ಚಿತ್ರ ಬಿಡುಗಡೆ ಆಗುವಾಗಲೇ ತಿಳಿದು ಬರಲಿದೆ.

  ಸದ್ಯಕ್ಕೆ ಚಿತ್ರದ ಟ್ರೈಲರ್ ಮಾತ್ರ ಹಿಮ್ಮುಖವಾಗಿ ಚಲಿಸುವ ಮೂಲಕ ಭಾರಿ ಕುತೂಹಲ ಸೃಷ್ಟಿ ಮಾಡಿದೆ. ಈಗಾಗಲೇ ಅನೂಪ್ ಸಿಳೀನ್ ಮ್ಯೂಸಿಕ್ ಕಂಪೋಸ್ ಮಾಡಿರುವ ಚಿತ್ರದ ಆಡಿಯೋ ಬಿಡುಗಡೆ ಆಗಿದ್ದು, ಹಾಡುಗಳು ಕೂಡ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

  ಮುಂಬೈ ಮತ್ತು ಮಂಗಳೂರು ಅಂಡರ್ ವರ್ಲ್ಡ್ ಕುರಿತಾದ ಚಿತ್ರದಲ್ಲಿ ನಟ ತನುಷ್ ಮತ್ತು ನಟಿ ನಿಖಿತಾ ನಾರಾಯಣ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಡೈಲಾಗ್ ಕಿಂಗ್ ಸಾಯಿಕುಮಾರ್, ದೀಪಿಕಾ ಕಾಮಯ್ಯ, ತಾರಾ, ಮುನಿ ಮತ್ತು ಸಂದೀಪ್ ಮತ್ತಿತ್ತರರು ಪ್ರಮುಖ ಪಾತ್ರ ವಹಿಸಿದ್ದಾರೆ.

  ಅದೇನೇ ಇರಲಿ ಸದ್ಯಕ್ಕೆ ವಿನಯ್ ಪ್ರೀತಮ್ ನಿರ್ದೇಶನದ 'ಮಡಮಕ್ಕಿ' ಚಿತ್ರದ ರಿವರ್ಸ್ ಗೇರ್ ನಲ್ಲಿ ಚಲಿಸುವ ಕುತೂಹಲಕಾರಿ ಟ್ರೈಲರ್ ಒಮ್ಮೆ ನೋಡಿ ಎಂಜಾಯ್ ಮಾಡಿ...

  English summary
  Watch Kannada Movie 'Madamakki' Official Trailer. Kannada Actor Tanush, Actress Nikitha Narayan, Actress Deepika Kamaish, Actor Sai Kumar in the lead role. The movie is directed by Vinay Preetham.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X