»   » 'ಮುದ್ದು ಮನಸೇ' ಚಿತ್ರದ ಮುದ್ದಾದ ಟ್ರೈಲರ್ ನೋಡಿ

'ಮುದ್ದು ಮನಸೇ' ಚಿತ್ರದ ಮುದ್ದಾದ ಟ್ರೈಲರ್ ನೋಡಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಇದೀಗ ಮತ್ತೊಂದು ಚಿತ್ರ ತೆರೆಗೆ ಬರಲು ಸಿಧ್ದವಾಗಿದೆ. ರೋಮ್ಯಾಂಟಿಕ್, ಆಕ್ಷನ್ ಜೊತೆಗೆ ತ್ರಿಕೋನ ಪ್ರೇಮಕಥೆ ಹೊಂದಿರುವ 'ಮುದ್ದು ಮನಸೇ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಅರುಣ್ ಗೌಡ, ನಿತ್ಯಾ ರಾಮ್, ಐಶ್ವರ್ಯಾ ನಾಗ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಮುದ್ದು ಮನಸೇ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ..


Watch Kannada movie 'Muddu Manase' official trailer

ಎಮ್.ಎಮ್.ಎಸ್ ಮೂವೀಸ್ ಅರ್ಪಿಸುವ 'ಮುದ್ದು ಮನಸೇ' ಚಿತ್ರದಲ್ಲಿ ಲವ್, ಫ್ಯಾಮಿಲಿ ಸೆಂಟಿಮೆಂಟ್, ಹಾಗೂ ಪಕ್ಕಾ ಆಕ್ಷನ್ ಸೀನ್ ಗಳಿದ್ದು, ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವ ಚಿತ್ರದ ನಾಯಕ ಸುರೇಶ್ ಅಲಿಯಾಸ್ ಅರುಣ್ ಗೌಡ ಇಬ್ಬರು ನಾಯಕಿಯರ ನಡುವೆ ಡ್ಯುಯೆಟ್ ಹಾಡಿದ್ದಾರೆ.


ಮೂರು ಮುದ್ದಾದ ಮನಸ್ಸುಗಳ ನಡುವೆ ನಡೆಯುವ ಕಥೆಯೇ 'ಮುದ್ದು ಮನಸೇ'. ಈ ಚಿತ್ರದಲ್ಲಿ ನಾಯಕ ಅರುಣ್ ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿಯ ಶೇಡ್ ನಲ್ಲಿ ಅರುಣ್ ಗೆ ನಿತ್ಯಾ ರಾಮ್ ನಾಯಕಿಯಾದರೆ ಸಿಟಿ ಯಲ್ಲಿ ಗಂಡು ಬೀರಿ ನಾಯಕಿ ಐಶ್ವರ್ಯ ಜೊತೆಯಾಗುತ್ತಾರೆ.


ವಿಶೇಷವಾಗಿ 'ಮುದ್ದು ಮನಸೇ' ಚಿತ್ರದ ನಾಯಕ ಅರುಣ್ ಗೌಡ ಅವರು ತಮ್ಮ ಮೊದಲ ಚಿತ್ರಕ್ಕಾಗಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರಿಂದ ಶುಭಾಶಯ ಬೇರೆ ಹೇಳಿಸಿಕೊಂಡ ಸಂಭ್ರಮದಲ್ಲಿದ್ದಾರೆ.


Watch Kannada movie 'Muddu Manase' official trailer

ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಲೀಡ್ ನಲ್ಲಿರುವ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಹಾಗೂ ಐಶ್ವರ್ಯ ನಾಗ್ ಅರುಣ್ ಗೆ ಜೋಡಿಯಾಗಿದ್ದಾರೆ. ನಿರ್ದೇಶಕ ಅನಂತ್ ಶೈನಿ ಅವರು ಚಿತ್ರಕ್ಕೆ ಆಕ್ಷನ್- ಕಟ್ ಹೇಳಿದ್ದಾರೆ. ವಿನೀತ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.


ವಿಶೇಷವಾಗಿ ಸುಂದರ ತಾಣಗಳಲ್ಲಿನ ಚಿತ್ರೀಕರಣದ ಜೊತೆಗೆ ಬ್ಯೂಟಿಫುಲ್ ಹಾಡುಗಳು 'ಮುದ್ದು ಮನಸೇ' ಟ್ರೈಲರ್ ನ ಹೈಲೈಟ್. ಮಾತ್ರವಲ್ಲದೇ ರಾಯಲ್ ಎನ್ ಫೀಲ್ಡ್ ಏರಿ ಬರುವ ಗಂಡು ಬೀರಿ ಐಶ್ವರ್ಯ ನಾಗ್ ಸ್ಟೈಲ್ ಹಾಗೂ ಸಖತ್ ಕಿಕ್ ಕೋಡೋ ಡೈಲಾಗ್ಸ್ ಟ್ರೈಲರ್ ನ ಮತ್ತೊಂದು ಹೈಲೈಟ್.


ಒಟ್ನಲ್ಲಿ ಇಡೀ ಟ್ರೈಲರ್ ತುಂಬಾ ರವಿಶಂಕರ್ ಧ್ವನಿಯಲ್ಲಿ ಸಖತ್ ಡೈಲಾಗ್ಸ್, ಹಾಡುಗಳ ಜೊತೆ ಲವ್ ಸೆಂಟಿಮೆಂಟ್ ಇರುವ 'ಮುದ್ದು ಮನಸೇ' ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 7ಕ್ಕೆ ಈ ಚಿತ್ರ ತೆರೆ ಕಾಣಬೇಕಿತ್ತು ಆದರೆ ಆರ್ ಚಂದ್ರು ಅವರ 'ಮಳೆ' ಚಿತ್ರದ ಗಡಿಬಿಡಿಯಿಂದ ಕೊಂಚ ಲೇಟ್ ಆಗ್ತಿದೆ.

English summary
Kannada Movie 'Muddu Manase' official trailer is released. 'Muddu Manase' features Kannada actor Arun Gowda, Kannada Actress Nithya Ram, Kannada Actress Aishwarya Nag in the lead role. The movie is directed by Ananth Shine.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada