»   » ಪ್ರೀತಿ, ರಹಸ್ಯಗಳ ಸಸ್ಪೆನ್ಸ್ ಥ್ರಿಲ್ಲರ್ 'ಪ್ರಿಯಾಂಕ'

ಪ್ರೀತಿ, ರಹಸ್ಯಗಳ ಸಸ್ಪೆನ್ಸ್ ಥ್ರಿಲ್ಲರ್ 'ಪ್ರಿಯಾಂಕ'

Posted By:
Subscribe to Filmibeat Kannada

ಸದ್ಯಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2' ಬಿಡುಗಡೆಗೆ ಮುಂಚೆನೇ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡ್ತಾ ಇದೆ ಅನ್ನೋದು ನಿಮಗೆಲ್ಲಾ ಗೊತ್ತಿರೋ ವಿಚಾರ ತಾನೇ. ಇದೀಗ ಈ ಸದ್ದು-ಗದ್ದಲದ ನಡುವೆಯೂ ಪ್ರಿಯಾಂಕ ಉಪೇಂದ್ರ ಅವರ ಹೊಸ 'ಪ್ರಿಯಾಂಕ' ಚಿತ್ರದ ಟ್ರೈಲರ್ ಸೈಲೆಂಟಾಗಿ ಬಿಡುಗಡೆಯಾಗಿದೆ.

ಎ.ಮೋಹನ್ ಅರ್ಪಿಸುವ ಭರ್ಜರಿ ಥ್ರಿಲ್ಲರ್, ಮಿಸ್ಟರಿ ಕಥಾ ಹಂದರದ ಜೊತೆಗೆ ಪ್ರಿಯಾಂಕ ಉಪೇಂದ್ರ, ತೇಜಸ್, ಪ್ರಕಾಶ್ ರೈ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ 'ಪ್ರಿಯಾಂಕ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ..

Watch Kannada movie 'Priyanka' official trailer

ಪ್ರೀತಿ ಅನ್ನೋದು ಪ್ರೀತಿಸಲು ಮಾತ್ರವಲ್ಲ ಇನ್ನೊಬ್ಬರನ್ನು ಕೊಲ್ಲುವುದನ್ನು ಹೇಳಿಕೊಡುತ್ತದೆ, ಮನಸ್ಸು ಅನ್ನೋದು ಮರ್ಕಟ ಅನ್ನೋದನ್ನ ಸಸ್ಪೆನ್ಸ್ ಚಿತ್ರ 'ಪ್ರಿಯಾಂಕ' ಹೇಳಹೊರಟಿದೆ.

'ಒಗ್ಗರಣೆ' ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ತೇಜಸ್ ಮತ್ತು ಪ್ರಕಾಶ್ ರೈ 'ಪ್ರಿಯಾಂಕ' ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಮಿಸ್ಟರಿ ಕಥೆ ಹೊಂದಿರುವ 'ಪ್ರಿಯಾಂಕ' ಚಿತ್ರದ ಟ್ರೈಲರ್ ಪ್ರೇಕ್ಷಕರಿಗೆ ಭಾರಿ ಕುತೂಹಲ ಹುಟ್ಟಿಸುವಂತಿದೆ.

ದಿನೇಶ್ ಬಾಬು ಆಕ್ಷನ್-ಕಟ್ ಹೇಳುತ್ತಿರುವ 'ಪ್ರಿಯಾಂಕ' ಚಿತ್ರದ ಟ್ರೈಲರ್ ನಲ್ಲಿ ಪ್ರೀತಿ, ಸ್ನೇಹ, ರಹಸ್ಯ, ಪ್ರಶ್ನೆಗಳ ಮೇಲೆ ಪ್ರಶ್ನೆಯ ಜೊತೆಗೆ ಪೊಲೀಸರ ವಿಚಾರಣೆ ಹೈಲೈಟ್ ಆಗುತ್ತಿದೆ. ಒಟ್ಟಿನಲ್ಲಿ ಇದೊಂಥರಾ ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಕೋಡೋ ಚಿತ್ರ ಅಂದ್ರು ತಪ್ಪಾಗ್ಲಿಕ್ಕಿಲ್ಲಾ.

ಬಹುಭಾಷಾ ನಟ ಪ್ರಕಾಶ್ ರೈ ಇಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಉತ್ತರ ಕರ್ನಾಟಕ ಕಡೆಯ ಭಾಷೆಯಲ್ಲಿ ಮಾತನಾಡಿ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ. ವಿಶೇಷವಾಗಿ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅವರೇ ಮುಖ್ಯ ಸಬ್ಜೆಕ್ಟ್ ಆಗಿರುವುದರಿಂದ ಮತ್ತೊಮ್ಮೆ ಗ್ಲಾಮರ್ ಬೊಂಬೆಯಾಗಿ 'ಪ್ರಿಯಾಂಕ' ಚಿತ್ರದಲ್ಲಿ ಮಿಂಚಿದ್ದಾರೆ.

ಒಟ್ನಲ್ಲಿ ಹೇಳಬೇಕೆಂದರೆ ಇತ್ತೀಚೆಗೆ ತೆರೆ ಮೇಲೆ ಬರುತ್ತಿರುವ ಸುಮಾರು ಮಿಸ್ಟರಿ, ಥ್ರಿಲ್ಲರ್ ಚಿತ್ರಗಳ ನಡುವೆ ಇದು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾ ಅನ್ನೋದನ್ನ ನೋಡಲು ಚಿತ್ರ ತೆರೆ ಕಾಣುವವರೆಗೆ ಕಾಯಲೇಬೇಕಿದೆ.

English summary
Kannada Movie 'Priyanka' official trailer is released. 'Priyanka' features Kannada actor Tejus, Kannada Actress Priyanka Upendra, Actor Prakash Rrai in the lead role. The movie is directed by Dinesh Baboo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada