»   » ಟ್ರೈಲರ್ : ಕನ್ನಡದ 'ರಾಮ್ ಲೀಲಾ' ಪಕ್ಕಾ ಎಂಟರ್ ಟೇನರ್

ಟ್ರೈಲರ್ : ಕನ್ನಡದ 'ರಾಮ್ ಲೀಲಾ' ಪಕ್ಕಾ ಎಂಟರ್ ಟೇನರ್

Posted By:
Subscribe to Filmibeat Kannada

ನಟ ಚಿರಂಜೀವಿ ಸರ್ಜಾ ಮತ್ತು ಬೇಬಿ ಡಾಲ್ ಅಮೂಲ್ಯ ನಟಿಸಿರುವ ಚಿತ್ರ 'ರಾಮ್ ಲೀಲಾ'. ಶೀರ್ಷಿಕೆ ಕೇಳಿದ ಕೂಡಲೆ ಇದು ಥೇಟ್ ಬಾಲಿವುಡ್ ನ ಕಾರ್ಬನ್ ಕಾಪಿ ಅಂತ ಊಹಿಸಿಕೊಳ್ಳಬೇಡಿ.

ಸ್ಯಾಂಡಲ್ ವುಡ್ ನೇಟಿವಿಟಿಗೆ ತಕ್ಕಂತೆ ರೆಡಿಯಾಗಿರುವ 'ರಾಮ್ ಲೀಲಾ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಕನ್ನಡದ 'ರಾಮ್ ಲೀಲಾ' ಹೇಗಿದ್ದಾರೆ ಅಂತ ನೀವೇ ನಿಮ್ಮ ಕಣ್ಣಾರೆ ನೋಡಿ....

ಲವ್ವರ್ ಬಾಯ್ ಆಗಿದ್ದರೂ, ಸ್ವಲ್ಪ ರಫ್ ಅಂಡ್ ಟಫ್ ಆಗಿರುವ ಚಿರಂಜೀವಿ ಸರ್ಜಾ, ಜಂಬದ ಕೋಳಿಯಾಗಿ ಅಲ್ಟ್ರಾ ಗ್ಲಾಮರಸ್ ಲುಕ್ ನಲ್ಲಿ ಅಮೂಲ್ಯ. ಇವರಿಬ್ಬರ ನಡುವಿನ ಲವ್ವಿ-ಡವ್ವಿ ಕಹಾನಿ 'ರಾಮ್ ಲೀಲಾ'. ಇಬ್ಬರ ಲವ್ ಸ್ಟೋರಿಯಲ್ಲಿ ಕಾಮಿಡಿ ಕಚಗುಳಿ ಇಡುವುದಕ್ಕೆ ಸಾಧು ಕೋಕಿಲ, ಚಿಕ್ಕಣ್ಣ ಇದ್ದಾರೆ.

ram-leela

ತೆಲುಗಿನ ಸೂಪರ್ ಹಿಟ್ 'ಲೌಕ್ಯಂ' ಚಿತ್ರದ ರೀಮೇಕ್ ಈ 'ರಾಮ್ ಲೀಲಾ'. ಆದರೂ, ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಆಕ್ಷನ್ ಕಟ್ ಹೇಳಿದ್ದಾರೆ ವಿಜಯ್ ಕಿರಣ್. ಎಲ್ಲೂ ಚೌಕಾಸಿ ಮಾಡದೆ ಸಿನಿಮಾನ ರಿಚ್ ಆಗಿ ರೆಡಿ ಮಾಡಿದ್ದಾರೆ ನಿರ್ಮಾಪಕ ಸೌಂದರ್ಯ ಜಗದೀಶ್. ['ರಾಮ್ ಲೀಲಾ' ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್]

'ರಾಮ್ ಲೀಲಾ' ಚಿತ್ರದ ಟ್ರೈಲರ್ ನೋಡಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಭೇಷ್' ಅಂದಿದ್ದಾರೆ. 'ರಾಮ್ ಲೀಲಾ' ಟ್ರೈಲರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

English summary
Kannada Actor Chiranjeevi Sarja and Kannada Actress Amulya starrer Kannada Movie 'Ramleela' trailer is out. Watch Vijay Kiran directorial 'Game' trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada