»   » ವಾವ್! 'ರಥಾವರ' ಶ್ರೀಮುರಳಿ ವಾಯ್ಸ್ ನಲ್ಲಿ, ಈ ಹಾಡು ಕೇಳಿದ್ರಾ?

ವಾವ್! 'ರಥಾವರ' ಶ್ರೀಮುರಳಿ ವಾಯ್ಸ್ ನಲ್ಲಿ, ಈ ಹಾಡು ಕೇಳಿದ್ರಾ?

Posted By:
Subscribe to Filmibeat Kannada

'ಹುಡುಗಿ ಕಣ್ಣು ಲೋಡೇಡ್ ಗನ್ನು, 'ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು' ಅಂತ ರೋರಿಂಗ್ ಸ್ಟಾರ್ 'ಉಗ್ರಂ' ಶ್ರೀಮುರಳಿ ಅವರು ಸಖತ್ತಾಗಿ ಹಾಡ್ತಾವ್ರೆ ಕಣ್ರೀ.

ಹೌದು ಇತ್ತೀಚೆಗೆ ಸ್ಟಾರ್ ನಟರೂ, ಸಿಂಗರ್ ಆಗೋದು ಮಾಮೂಲಿ ಅಂತಿರುವ ಈ ಕಾಲದಲ್ಲಿ ನಟ ಶ್ರೀಮುರಳಿ ಅವರೂ ಒಂದು ಕೈ ನೋಡೇ ಬಿಡೋಣ ಅಂತ ಇದೇ ಮೊದಲ ಬಾರಿಗೆ ತಮ್ಮ 'ರಥಾವರ' ಚಿತ್ರಕ್ಕೆ ಸಖತ್ ಹಾಡೊಂದನ್ನು ಹಾಡಿದ್ದಾರೆ.


Watch Kannada movie 'Rathaavara' Song Teaser Sung by Sri Murali

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಸುದೀಪ್ ಅವರೆಲ್ಲರೂ ಇದೀಗ ನಟನೆಯ ಜೊತೆಗೆ ಸಿಂಗರ್ ಕೂಡ ಆಗಿದ್ದಾರೆ. ಇದೀಗ ಇವರೆಲ್ಲರ ಸಾಲಿಗೆ ಹೊಸ ಸೇರ್ಪಡೆ ನಮ್ಮ 'ಉಗ್ರಂ' ಯಶಸ್ಸಿನ ನಟ ಶ್ರೀಮುರಳಿ ಅವರು.[ದಸರಾ ಉಡುಗೊರೆ : ಶ್ರೀಮುರಳಿ 'ರಥಾವರ' ಟೀಸರ್ ಔಟ್]


'ಉಗ್ರಂ' ಚಿತ್ರದ ಭರ್ಜರಿ ಯಶಸ್ಸಿನಲ್ಲಿರುವ ನಟ ಶ್ರೀಮುರಳಿ ಅವರು ಇದೇ ಮೊದಲ ಬಾರಿಗೆ ಸಖತ್ತಾಗಿರೋ ಟಮಟೆ ಸಾಂಗ್ ಒಂದಕ್ಕೆ ಧ್ವನಿಯಾಗಿದ್ದಾರೆ. 'ಹುಡುಗಿ ಕಣ್ಣು ಲೋಡೇಡ್ ಗನ್ನು, 'ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು', 'ಎದೆಯ ಡೋಲು, ಆಗಿದೆ ಹೋಲು, ಆದ್ರೂ ಹಾಕ್ತಾತೈತೆ ತಾಳ ಕೇಳು' ಅಂತ ಟಮಟೆ ಬಡಿತಕ್ಕೆ ತಮ್ಮ ಬ್ಯೂಟಿಫುಲ್ ವಾಯ್ಸ್ ನೀಡಿದ್ದಾರೆ.


ನಾಗಚಂದ್ರ ಅರ್ಪಿಸುವ, ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಆಕ್ಷನ್-ಕಟ್ ಹೇಳಿರುವ 'ರಥಾವರ' ಚಿತ್ರದ ಶ್ರೀಮುರಳಿ ಅವರ ಗಾನದ ಒಂದು ಸಣ್ಣ ಝಲಕ್ ನ ವಿಡಿಯೋ ಇಲ್ಲಿದೆ ನೋಡಿ...[ಕುಂಬಳಕಾಯಿ ಒಡೆದ 'ರಥಾವರ' ಚಿತ್ರತಂಡ]


Watch Kannada movie 'Rathaavara' Song Teaser Sung by Sri Murali

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ, ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ ಅವರು ಇದೇ ಮೊದಲ ಬಾರಿಗೆ ಶ್ರೀಮುರಳಿ ಅವರೊಂದಿಗೆ ಡ್ಯುಯೆಟ್ ಹಾಡಿದ್ದಾರೆ. ನಟ ಶ್ರೀಮುರಳಿ ಅವರು 'ಉಗ್ರಂ' ಚಿತ್ರದಲ್ಲಿ ಕಾಣಿಸಿಕೊಂಡಂತೆ 'ರಥಾವರ' ಚಿತ್ರದಲ್ಲೂ ಖಡಕ್ ಹಾಗೂ ಸ್ಟೈಲಿಷ್ ಆಗಿ ಮಿಂಚಿದ್ದಾರೆ ಅನ್ನೋದನ್ನ ಈಗಾಗಲೇ ರಿಲೀಸ್ ಆಗಿರುವ ಟೀಸರ್ ಹಾಗೂ ಪೋಸ್ಟರ್ ಗಳು ಹೇಳುತ್ತಿದೆ.


ಇನ್ನು ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ನವೆಂಬರ್ 5 ರಂದು ಬಹುನಿರೀಕ್ಷಿತ 'ರಥಾವರ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಚಿತ್ರ ತೆರೆ ಮೇಲೆ ಭರ್ಜರಿಯಾಗಿ ಅಪ್ಪಳಿಸಲಿದೆ.

English summary
Watch Kannada movie 'Rathaavara' Song Teaser Sung by Kannada Actor Sri Murali. Starring Actor Sri Murali, Actress Rachita Ram and others. The movie is directed by Chandrashekar Bandiyappa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada