»   » ವಿಡಿಯೋ: ತಲೆಮೇಲೆ ಕೂದಲು ಇಲ್ಲದವರು ನೋಡಲೇಬೇಕಾದ 'ಒಂದು ಮೊಟ್ಟೆಯ ಕಥೆ'

ವಿಡಿಯೋ: ತಲೆಮೇಲೆ ಕೂದಲು ಇಲ್ಲದವರು ನೋಡಲೇಬೇಕಾದ 'ಒಂದು ಮೊಟ್ಟೆಯ ಕಥೆ'

Posted By:
Subscribe to Filmibeat Kannada

'ಲೂಸಿಯಾ', 'ಯು ಟರ್ನ್' ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದ ನಿರ್ದೇಶಕ ಪವನ್ ಕುಮಾರ್ ನಿರ್ಮಾಣದ 'ಒಂದು ಮೊಟ್ಟೆಯ ಕಥೆ' ಚಿತ್ರ ಪೋಸ್ಟರ್ ನಿಂದಲೇ ಸಿನಿ ಪ್ರೇಮಿಗಳಲ್ಲಿ ಹಲವು ಕುತೂಹಲಗಳನ್ನು ಹುಟ್ಟುಹಾಕಿತ್ತು. ಚಿತ್ರತಂಡವೀಗ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದೆ.[ವಿಡಿಯೋ: 'ಲೂಸಿಯಾ' ಪವನ್ ಗೆ ಕ್ಯಾನ್ಸರ್ ಗಿಂತ ಕೆಟ್ಟ ಕಾಯಿಲೆ ಇದೆ.!]

ತಲೆ ಮೇಲೆ ಕೂದಲು ಇಲ್ಲದವರ ಬಗ್ಗೆ ಸಖತ್ ಸದ್ದು ಮಾಡುವ ಚಿತ್ರಕಥೆಯನ್ನು ಹೊಂದಿರುವ 'ಒಂದು ಮೊಟ್ಟೆಯ ಕಥೆ' ಟ್ರೈಲರ್ ಸಿನಿ ಪ್ರೇಮಿಗಳಿಗೆ ಕಂಪ್ಲೀಟ್ ಮನರಂಜನೆ ನೀಡುವ ಭರವಸೆ ಮೂಡಿಸಿದೆ. ಪವನ್ ಕುಮಾರ್ ಮತ್ತು ಸುಹಾನ್ ಪ್ರಸಾದ್ ನಿರ್ಮಾಣ ಮಾಡಿರುವ ಸಿನಿಮಾವನ್ನು ಮಂಗಳೂರು ಸುತ್ತಮುತ್ತಲಲ್ಲಿ, ಅಲ್ಲಿನ ಭಾಷಾ ಶೈಲಿಯಲ್ಲಿಯೇ ಚಿತ್ರೀಕರಿಸಲಾಗಿದೆ. ರಾಜ್ ಬಿ.ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಚಿತ್ರ ಮೇಕಿಂಗ್ ದೃಷ್ಟಿಯಿಂದಲೂ ಸೊಗಸಾಗಿ ಮೂಡಿಬಂದಿರುವುದು ಟ್ರೈಲರ್ ನಿಂದ ತಿಳಿದಿದೆ.

Watch 'Ondu Motteya Kathe' Trailer

'ಒಂದು ಮೊಟ್ಟೆಯ ಕಥೆ'ಯ ಇನ್ನೊಂದು ವಿಶೇಷ ಅಂದ್ರೆ ಚಿತ್ರವು ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಗೆ ಅಧಿಕೃತವಾಗಿ ಆಯ್ಕೆ ಆಗಿದ್ದು, ಮೇ 6 ರಂದು ನ್ಯೂಯಾರ್ಕ್ ನಲ್ಲಿ ಪ್ರಥಮ ಪ್ರದರ್ಶನ ಕಾಣುತ್ತಿದೆ. ಅಲ್ಲದೇ 2017 ರ ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಕ್ಕೆ ಅವಕಾಶ ಗಿಟ್ಟಿಸಿಕೊಂಡಿದೆ.[ಟಾಲಿವುಡ್, ಕಾಲಿವುಡ್ ನಲ್ಲಿ ಆಕ್ಷನ್ ಕಟ್ ಹೇಳಲಿದ್ದಾರೆ ಪವನ್ ಕುಮಾರ್]

Watch 'Ondu Motteya Kathe' Trailer

ಅಂದಹಾಗೆ ಪವನ್ ಕುಮಾರ್ ರವರು 'ಲೂಸಿಯಾ' ಮತ್ತು ಯು ಟರ್ನ್' ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ತೊಡಗಿದ್ದರು. 'ಒಂದು ಮೊಟ್ಟೆಯ ಕಥೆ' ನ್ಯೂಯಾರ್ಕ್ ನಲ್ಲಿ ಪ್ರೀಮಿಯರ್ ಆಗುವುದರ ಮೂಲಕ ಪವನ್ ಕುಮಾರ್ ನಿರ್ಮಾಣದ ಮೂರು ಚಿತ್ರಗಳು ಹ್ಯಾಟ್ರಿಕ್ ವರ್ಲ್ಡ್ ಪ್ರೀಮಿಯರ್ ಆದಂತಾಗುತ್ತದೆ. ಈ ಹಿಂದೆ 'ಲೂಸಿಯಾ' ಲಂಡನ್ ನಲ್ಲಿ, 'ಯು ಟರ್ನ್' ನ್ಯೂಯಾರ್ಕ್ ನಲ್ಲಿ ಪ್ರಥಮ ಪ್ರದರ್ಶನವಾಗಿದ್ದವು.

'ಒಂದು ಮೊಟ್ಟೆಯ ಕಥೆ' ಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ

English summary
Pawan Kumar and Suhan Prasad produced, Raj B Shetty directorial 'Ondu Motteya Kathe' trailer released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada