»   » ಚಾರ್ಮಿ 'ಜ್ಯೋತಿ ಲಕ್ಷ್ಮಿ' ಅವತಾರದ ವಿಡಿಯೋ ಔಟ್

ಚಾರ್ಮಿ 'ಜ್ಯೋತಿ ಲಕ್ಷ್ಮಿ' ಅವತಾರದ ವಿಡಿಯೋ ಔಟ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಭಾರಿ ನಿರೀಕ್ಷೆ ಹುಟ್ಟಿಸಿರುವ ಜ್ಯೋತಿ ಲಕ್ಷ್ಮಿ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

ಪುರುಷ ಪ್ರಧಾನ ಸಿನಿಮಾ ರಂಗದಲ್ಲಿ ಮಹಿಳೆಯರ ಸ್ಥಾನ ಮಾನವನ್ನು ಪ್ರಶ್ನಿಸುವ ಡ್ಯಾನ್ಸರ್ ಜ್ಯೋತಿ ಲಕ್ಷ್ಮಿ ಅವತಾರದಲ್ಲಿ ಚಾರ್ಮಿ ಕೌರ್ ಸಕತ್ ಸ್ಟೆಪ್ಸ್ ಹಾಕಿದ್ದಾರೆ. ಈ ಚಿತ್ರ ಪೂರ್ತಿ ಆ ಕಾಲದ ಐಟಂ ಡ್ಯಾನ್ಸರ್ ಜ್ಯೋತಿ ಲಕ್ಷ್ಮಿ ಅವರ ಕಥೆಯನ್ನೇ ಆಧಾರವಾಗಿಟ್ಟುಕೊಂಡು ಮಾಡಿಲ್ಲ. ಆಕೆ ಜೀವನದ ಕೆಲವು ಪ್ರಮುಖ ಘಟನೆಗಳನ್ನು ಇಲ್ಲಿ ಚಿತ್ರಕಥೆಗೆ ಬಳಸಿಕೊಳ್ಳಲಾಗಿದೆ.

Watch Puri Jagannath Jyothi Lakshmi Movie Trailer Charmy Kaur

ಇದು ಐಟಂ ಡ್ಯಾನ್ಸರ್ ಕಥೆಗಿಂತ ಸೆಕ್ಸ್ ವರ್ಕರ್ ಯೊಬ್ಬಳ ಆತ್ಮಕಥೆ ಎನ್ನಬಹುದು ಎಂಬ ಸುದ್ದಿ ಬಂದಿದೆ. ಚಾರ್ಮಿ ಕೌರ್, ಬ್ರಹ್ಮಾನಂದಂ, ಸತ್ಯ, ಭದ್ರಂ ಮುಂತಾದವರು ತಾರಾಗಣದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶನವಿದೆ. ಸುನಿಲ್ ಕಶ್ಯಪ್ ಸಂಗೀತವಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. [ಕಪ್ಪು ಬಿಳುಪಿನಲ್ಲಿ ಕಾಡುವ ಸಿಲ್ಕ್ ಸ್ಮಿತಾ ಚಿತ್ರಗಳು]

ಚಿತ್ರದ ಟ್ರೈಲರ್ ಇಲ್ಲಿ ನೋಡಿ


ಫಸ್ಟ್ ಲುಕ್ ಹೀಗಿದೆ

ಟೆಂಪರ್ ಚಿತ್ರದ ಯಶಸ್ಸಿನ ನಂತರ ಬ್ರೇಕ್ ತೆಗೆದುಕೊಳ್ಳದೆ ಜ್ಯೋತಿ ಲಕ್ಷ್ಮಿ ಚಿತ್ರೀಕರಣ ಮುಗಿಸಿರುವ ಪುರಿ ಜಗನ್ನಾಥ್ ಅವರು ತಮ್ಮ ಗುರು ರಾಮ್ ಗೋಪಾಲ್ ವರ್ಮಾರಂತೆ ಸರಣಿ ಚಿತ್ರಗಳನ್ನು ನೀಡಲು ಮುಂದಾಗಿದ್ದಾರೆ. ನಿತಿನ್ ರೆಡ್ಡಿಗಾಗಿ ಒಂದು ಸಿನಿಮಾ ನಂತರ ಮೆಗಾ ಸ್ಟಾರ್ ಚಿರಂಜೀವಿ ಅವರ ವೃತ್ತಿ ಬದುಕಿನ 150ನೇ ಚಿತ್ರವನ್ನು ಜಗನ್ನಾಥ್ ನಿರ್ದೇಶಿಸಲಿದ್ದಾರೆ.

English summary
Puri Jagannadh's Jyothi Lakshmi Theatrical Trailer released. Starring Charmy Kaur, Brahmanandam, Satya, Bhadram etc. This Movie is directed by Puri Jagannadh Produced by Swetha Lana, Varun, Teja, CV Rao under CK Entertainments and Sree Subha Swetha films Banner. Music is Composed by Sunil Kashyap.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada