»   » ನಟಿ ರಾಧಿಕಾ ಪಂಡಿತ್ 'ಪ್ಲಸ್' ಪಾಯಿಂಟ್ ಏನು ಗೊತ್ತಾ..?

ನಟಿ ರಾಧಿಕಾ ಪಂಡಿತ್ 'ಪ್ಲಸ್' ಪಾಯಿಂಟ್ ಏನು ಗೊತ್ತಾ..?

Posted By:
Subscribe to Filmibeat Kannada

'ತಪ್ಪು' ಅಂದುಕೊಂಡರೆ ಎಲ್ಲವೂ ತಪ್ಪು. ವಿವೇಚನೆ, ತಾಳ್ಮೆಯಿಂದ ಯೋಚನೆ ಮಾಡಿದರೆ ಎಲ್ಲವೂ 'ಸರಿ'ಯಾಗಿ ಕಾಣುತ್ತೆ. ಇಂತಹ ಮಾನಸಿಕ ಸ್ಥೈರ್ಯ, ನಮ್ಮೊಳಗಿರುವ ಆಂತರಿಕ ಶಕ್ತಿ ಕುರಿತಾದ ವಿಶಿಷ್ಟ ಚಿತ್ರವೇ '+' (ಪ್ಲಸ್ ಸಿಂಬಲ್).

ಸಮಾಜದಲ್ಲಿರುವ ತೊಡಕುಗಳನ್ನ ಸರಿ ಮಾಡುವ ದಿಟ್ಟ ವ್ಯಕ್ತಿಯ ಪಾತ್ರದಲ್ಲಿ ನಟ ಅನಂತ್ ನಾಗ್ ಕಾಣಿಸಿಕೊಳ್ಳುತ್ತಿದ್ದಾರೆ. ಅನಂತ್ ನಾಗ್ ಗೆ ನಟಿ ಸುಧಾರಾಣಿ ಜೋಡಿಯಾಗಿದ್ದಾರೆ. ಸಂಪೂರ್ಣ ಮನರಂಜನೆ ನೀಡುವ '+' ಸಿನಿಮಾದ ಮೂಲಕ ಇಬ್ಬರು ನಟರ ಪರಿಚಯ ಇದೇ ಗುರುವಾರ 'ವಾಸ್ತುಪ್ರಕಾರ' ಆಗಲಿದೆ. [ವಾವ್, ಅನಂತನಾಗ್ ಹೀರೋ ಅಟ್ ಅರುವತ್ತಾರು!]


Watch Radhika Pandit special teaser for Kannada movie Plus

ಸೆಟ್ಟೇರುವ ಮುನ್ನವೇ ವಿಭಿನ್ನ ಪ್ರಚಾರದಿಂದ ಸದ್ದು ಮಾಡುತ್ತಿರುವ '+' ಸಿನಿಮಾ ತಂಡದೊಂದಿಗೆ ಇದೀಗ 'ಸ್ಯಾಂಡಲ್ ವುಡ್ ಪ್ರಿನ್ಸೆಸ್' ರಾಧಿಕಾ ಪಂಡಿತ್ ಸೇರಿಕೊಂಡಿದ್ದಾರೆ.


ಹಾಗಂತ, '+' ಸಿನಿಮಾದಲ್ಲಿ ರಾಧಿಕಾ ಪಂಡಿತ್ ಆಕ್ಟ್ ಮಾಡ್ತಿದ್ದಾರೆ ಅಂತಲ್ಲ. ಸಿನಿಮಾದ ಕಾನ್ಸೆಪ್ಟ್ ಇರುವ ಸ್ಪೆಷಲ್ ಟೀಸರ್ ನಲ್ಲಿ ಕಾಣಿಸಿಕೊಂಡು '+'ಗೆ ವಿಶ್ ಮಾಡಿದ್ದಾರೆ. ಆ ಟೀಸರ್ ಇಲ್ಲಿದೆ ನೋಡಿ.....


Watch Radhika Pandit special teaser for Kannada movie Plus

ಪುಟ್ಟ ಕಂದಮ್ಮ ಮಾಡಿದ ತಪ್ಪುಗಳನ್ನ ಸರಿಮಾಡಿ ಅದ್ರಲ್ಲಿರುವ ಪಾಸಿಟೀವ್ ಅಂಶವನ್ನ ಎತ್ತಿಹಿಡಿಯುವ ರಾಧಿಕಾ ಪಂಡಿತ್ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. '+' ಸಿನಿಮಾದ ಕಾನ್ಸೆಪ್ಟ್ ಕೂಡ ಇದೇ. ['+' ಚಿತ್ರದ ಪ್ಲಸ್ ಪಾಯಿಂಟ್ ಔಟ್]


ಈಗಾಗಲೇ, 'ಪ್ಲಸ್' ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಭಾಶಯ ಕೋರಿರುವ ಟೀಸರ್ ಕೂಡ ಜನಪ್ರಿಯವಾಗಿದೆ. ಈಗ ರಾಧಿಕಾ ಪಂಡಿತ್ ಸರದಿ. ಮುಂದಕ್ಕೆ ಸೆಲೆಬ್ರಿಟಿಗಳ ಲಿಸ್ಟ್ ಇನ್ನೂ ದೊಡ್ಡದಿದೆ ಅನ್ನುತ್ತಾರೆ ನಿರ್ದೇಶಕ ಗಡ್ಡ ವಿಜಿ. [ಅನಂತ್ ಜೊತೆ 'ಬಿಗ್ ಬಾಸ್' ಶ್ವೇತಾ ಕುಚ್ ಕುಚ್]


'ದ್ಯಾವ್ರೇ' ಚಿತ್ರದ ಬಳಿಕ ಗಡ್ಡ ವಿಜಿ ನಿರ್ದೇಶನ ಮಾಡುತ್ತಿರುವ ಚಿತ್ರ '+'. ವಿಶಿಷ್ಟ ಕಥಾಹಂದರವಿರುವ '+' ಸಿನಿಮಾದ ಪಾತ್ರವರ್ಗದ ಬಗ್ಗೆ ಕೌತುಕಗಳು ಹೆಚ್ಚಿವೆ. ಸದ್ಯಕ್ಕೆ ಟಾಕಿ ಭಾಗದ ಶೂಟಿಂಗ್ ಕಂಪ್ಲೀಟ್ ಮಾಡಿರುವ '+' ಚಿತ್ರತಂಡ ಸಾಂಗ್ ಶೂಟಿಂಗ್ ಮಾಡಬೇಕಷ್ಟೆ. (ಫಿಲ್ಮಿಬೀಟ್ ಕನ್ನಡ)

English summary
Kannada Actress Radhika Pandit wishes for the team '+'. Radhika Pandit special teaser for Kannada movie Plus is out. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada