»   » ಪುನೀತ್ ಹಾಡಿರುವ 'ಅಧ್ಯಕ್ಷ' ಹಾಡಿನ ಪ್ರೊಮೋ

ಪುನೀತ್ ಹಾಡಿರುವ 'ಅಧ್ಯಕ್ಷ' ಹಾಡಿನ ಪ್ರೊಮೋ

Posted By:
Subscribe to Filmibeat Kannada

"ಯಾ ಅಲ್ಲಾ..ಎಲೆಕ್ಷನ್ ಮುಗ್ದಿಬಿಟ್ಟಿ...ರಿಜಲ್ಟ್ ಗೆ ಕಾಯ್ತೈತೆ ದೇಶಾನೆ...ಯಾರೇ ಗೆದ್ರು..ಏನೇ ಆದ್ರೂ 'ಅಧ್ಯಕ್ಷ' ನಾನೇನೆ" ಅಂತಿದ್ದಾರೆ ಶರಣ್. ಈಗವರು ಮತ್ತೊಂದು ಕಾಮಿಡಿ ಚಿತ್ರದ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಇಡಲು ಬರುತ್ತಿದ್ದಾರೆ. 'ವಿಕ್ಟರಿ' ಸಿಂಬಲ್ ಚಿತ್ರದ ಮೂಲಕ ಗೆಲುವಿನ ನಗೆ ಬೀರಿದ ನಂದ ಕಿಶೋರ್ ಈ ಬಾರಿಯೂ ಶರಣ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈಗಾಗಲೆ 'ಅಧ್ಯಕ್ಷ' ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದ್ದು ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಚಿತ್ರಕ್ಕಾಗಿ ಒಂದು ಹಾಡನ್ನೂ ಹಾಡಿದ್ದಾರೆ. ಆ ಹಾಡಿನ ಪ್ರೊಮೋ ಬಿಡುಗಡೆಯಾಗಿದೆ. ತಮಿಳಿನ ಯಶಸ್ವಿ ಚಿತ್ರ 'ವರುತಪದತಾ ವಲಿಬಾರ್‌ ಸಂಘಂ' ಚಿತ್ರದ ರೀಮೇಕ್ ಇದು. [ಶರಣ್ 'V' ಚಿತ್ರ ವಿಮರ್ಶೆ: ಫುಲ್ ಕ್ವಾಟ್ರು ಕಾಮಿಡಿ]

Adyaksha still

ಶರಣ್ ಚಿತ್ರಗಳಲ್ಲಿ ಹಾಡುಗಳಿಗೆ ವಿಶೇಷ ಒತ್ತು ಇದ್ದೇ ಇರುತ್ತದೆ. ಅವರ ಖಾಲಿ ಕ್ವಾಟ್ರು ಬಾಟ್ಲಿಯಂತೆ ಲೈಫು ಹಾಗೂ ಜಯ ಜಯ ಜಾಕೆಟ್ಟು ಜಯನ್ ಗಂಡ ರಾಕೆಟ್ಟು ಎಂಬ ಹಾಡುಗಳು ಸಾಕಷ್ಟು ಜನರ ಬಾಯಲ್ಲಿ ಇಂದಿಗೂ ನುಲಿದಾಡುತ್ತಿವೆ. ಅಧ್ಯಕ್ಷ ಚಿತ್ರದ ಮೇಲೂ ಅದೇ ರೀತಿಯ ನಿರೀಕ್ಷೆಗಳಿವೆ.

ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಚಿತ್ರ ಇದಾಗಿದ್ದು ಶರಣ್ ಜೊತೆಗಿನ ಮೂರನೇ ಚಿತ್ರವಾಗಿದೆ. ಹಾಡಿನ ವಿಡಿಯೋ ಯೂಟ್ಯೂಬ್ ನಲ್ಲಿ ನಿಧಾನಕ್ಕೆ ಟೇಕಾಫ್ ಆಗುತ್ತಿದೆ. ಸುಮಾರು 1 ನಿಮಿಷ 56 ಸೆಕೆಂಡ್ ಗಳ ಕಾಲಾವಧಿಯ ಈ ಹಾಡಿನ ಪ್ರೊಮೋಗೆ ಒಳ್ಳೆಯ ರೆಸ್ಪಾನ್ಸ್ ಕೂಡ ವ್ಯಕ್ತವಾಗುತ್ತಿದೆ. ಬಿ.ಕೆ.ಗಂಗಾಧರ್ ಹಾಗೂ ಬಿ.ಬಸವರಾಜ್ ನಿರ್ಮಿಸುತ್ತಿರುವ ಚಿತ್ರವಿದು.

ಪಾತ್ರವರ್ಗದಲ್ಲಿ ರವಿಶಂಕರ್, ಸಾಧುಕೋಕಿಲ, ಅವಿನಾಶ್, ಕೀರ್ತಿರಾಜ್, ಗಿರಿಜಾಲೋಕೇಶ್ ಸೇರಿದಂತೆ ಹಲವರಿದ್ದಾರೆ. ಮೇಲುಕೋಟೆ, ಶ್ರವಣಬೆಳಗೊಳ, ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ತಮಿಳಿನ 'ವಲಿಬಾರ್ ಸಂಘಂ' ಚಿತ್ರವನ್ನು ರು.7 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿತ್ತು. ಬಾಕ್ಸ್ ಆಫೀಸಲ್ಲಿ ಈ ಚಿತ್ರ ಸುಮಾರು ರು.30 ಕೋಟಿ ಕಲೆಕ್ಷನ್ ಮಾಡಿತ್ತು.

ಈಗ ಅದೇ ರೀತಿಯ ನಿರೀಕ್ಷೆಗಳು ಕನ್ನಡದ 'ಅಧ್ಯಕ್ಷ'ನ ಮೇಲಿವೆ. ಕಡಿಮೆ ಬಜೆಟ್ ನಲ್ಲಿ ಭರ್ಜರಿ ಫಸಲು ತೆಗೆಯುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಈಗಾಗಲೆ ಶರಣ್ ಪೂರ್ಣಪ್ರಮಾಣದ ನಾಯಕನಾಗಿ 'ರ್‍ಯಾಂಬೋ' ಹಾಗೂ 'ವಿಕ್ಟರಿ' ಮೂಲಕ ಗೆದ್ದಿದ್ದಾರೆ. ಈಗ ಹ್ಯಾಟ್ರಿಕ್ ಹೊಡೆಯುವ ತವಕ ಅವರದು. ಚಿತ್ರಕ್ಕೆ ನಾಯಕಿ ರಕ್ಷಾ. (ಏಜೆನ್ಸೀಸ್)

English summary
The makers have now released first song promo of the title track 'Adyaksha,' which is crooned by Power Star Puneet Rajkumar. The movie, which is the third combination of music composer Arjun Janya with lead actor Sharan is likely to musical hit of the year too.
Please Wait while comments are loading...