»   » ಕಿಚ್ಚನ ಬರ್ತ್ ಡೇ ಸ್ಪೆಷಲ್: ಫಸ್ಟ್ ಲುಕ್ ಟೀಸರ್ ಝಲಕ್

ಕಿಚ್ಚನ ಬರ್ತ್ ಡೇ ಸ್ಪೆಷಲ್: ಫಸ್ಟ್ ಲುಕ್ ಟೀಸರ್ ಝಲಕ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಅವರು ಇಂದು 42ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕಿಚ್ಚನ ಹುಟ್ಟುಹಬ್ಬದ ಸ್ಪೆಷಲ್ ಆಗಿ ಸುದೀಪ್ ಅವರ ಹೊಸ ಚಿತ್ರದ ಮೋಷನ್ ಪೋಸ್ಟರ್ ಜೊತೆಗೆ ಬರ್ತ್ ಡೇ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.

ನಿರ್ದೇಶಕ ಕೆ.ಎಸ್ ರವಿಕುಮಾರ್ ಆಕ್ಷನ್-ಕಟ್ ಹೇಳಿರುವ ರಾಂಬಾಬು ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಕಿಚ್ಚ ಸುದೀಪ್ ಅವರ ಹೊಸ ಚಿತ್ರದ ಬರ್ತ್ ಡೇ ಸ್ಪೆಷಲ್ ಆಗಿ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.

Watch Sudeep's New movie First Look Birthday Teaser

ನಿನ್ನೆ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಕಿಚ್ಚನ ಬರ್ತ್ ಡೇ ಸೆಲೆಬ್ರೇಷನ್ ಶುರು ಹಚ್ಚಿಕೊಂಡಿದ್ದು, ಈ ವರ್ಷ ಹೊಸದಾಗಿ 'ಕಿಚ್ಚೋತ್ಸವ 2015' ಅಂತ ಸ್ಪೆಷಲ್ ಬರ್ತ್ ಡೇ ಸಮಾರಂಭವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ['ಕಿಚ್ಚೋತ್ಸವ 2015' ಆರಂಭ ಅಭಿಮಾನಿಗಳಿಂದ ಸಂಭ್ರಮಾಚರಣೆ]

ಈಗಾಗಲೇ ಆರಂಭವಾಗಿರುವ 'ಕಿಚ್ಚೋತ್ಸವ 2015' ಸಂಭ್ರಮಾಚರಣೆಯಲ್ಲಿ ಅಭಿಮಾನಿಗಳು ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಸುದೀಪ್ ಅವರ ಬೃಹತ್ ಕಟೌಟ್ ಗಳನ್ನು ಅವರ ನಿವಾಸದ ಮುಂದೆ ಇರಿಸಿ ಭಾರಿ ಗಾತ್ರದ ಹೂಮಾಲೆಗಳನ್ನು ಹಾಕಿ ಅಭಿಮಾನಿ ಬಳಗದವರು ಸಂಭ್ರಮಿಸುತ್ತಿದ್ದಾರೆ.

ನಿರ್ದೇಶಕ ಕೆ.ಎಸ್ ರವಿಕುಮಾರ್, ನಿರ್ಮಾಪಕ ಸೂರಪ್ಪ ಬಾಬು, ಕಿಚ್ಚ ಸುದೀಪ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ, ಹಾಗೂ ರಾಕ್ ಲೈನ್ ವೆಂಕಟೇಶ್ ಅರ್ಪಿಸುವ ಹೊಸ ಚಿತ್ರ ಕನ್ನಡ ಹಾಗೂ ತಮಿಳಿನಲ್ಲಿ ಮೂಡಿಬರುತ್ತಿದೆ.[ಬರ್ತಡೆ ಬಾಯ್ ಕಿಚ್ಚ ಸುದೀಪ್ ಗೆ ಹೊಸ ಬಿರುದು]

ಇದೀಗ ತಮಿಳಿನ 'ಮುಡಿಂಜ ಇವನ ಪುಡಿ' (ಸಾಧ್ಯ ಆದ್ರೆ ಇವನನ್ನು ಹಿಡಿ) ಎನ್ನುವ ಸುದೀಪ್ ಅವರ ಬರ್ತ್ ಡೇ ಸ್ಪೆಷಲ್ ಟೀಸರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

'ಹಲೋ ಮಿಸ್ಟರ್ರ್..... ಮಿಸ್ಟರ್' ಎನ್ನುವ ಹಾಡಿನ ಮೂಲಕ ಗ್ರ್ಯಾಂಡ್ ಎಂಟ್ರಿ ಪಡೆದುಕೊಳ್ಳುವ ಕಿಚ್ಚ ಸುದೀಪ್ ಅವರು ಸಖತ್ ಸೈಲೀಷ್ ಆಗಿ ಕಾಣಿಸಿಕೊಂಡಿರೋದು ಟೀಸರ್ ನ ಹೈಲೈಟ್. ಜಬರ್ದಸ್ತ್ ಫೈಟ್ ನಲ್ಲಿ ಅಭಿನವ ಚಕ್ರವರ್ತಿ ಮಾಸ್ ಜೊತೆಗೆ ಕ್ಲಾಸ್ ಲುಕ್ ನಲ್ಲಿ ಮಿಂಚಿದ್ದಾರೆ.

ಬರ್ತ್ ಡೇ ಬಾಯ್ ಕಿಚ್ಚ ಸುದೀಪನ ಸ್ಪೆಷಲ್ ಸ್ಟೈಲ್ ನೋಡಲು ಈ ಟೀಸರ್ ನೋಡಿ

Watch Sudeep's New movie First Look Birthday Teaser

ಇನ್ನೂ ಚಿತ್ರದಲ್ಲಿ ಬಹುಭಾಷಾ ತಾರೆ ನಿತ್ಯಾ ಮೆನನ್ ಅವರು ಇದೇ ಮೊದಲ ಬಾರಿಗೆ ಕಿಚ್ಚನ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರ ಶೂಟಿಂಗ್ ಹಂತದಲ್ಲಿದ್ದು, ರಾಜಧಾನಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಚಿತ್ರೀಕರಣಕ್ಕಾಗಿ ಅದ್ದೂರಿ ಸೆಟ್ ಕೂಡ ನಿರ್ಮಾಣ ಮಾಡಲಾಗಿದೆ.[ಕಿಚ್ಚನಿಗೆ 'ಕೋಟಿಗೊಬ್ಬ 2' ತಂಡದಿಂದ ಅಚ್ಚರಿಯ ಗಿಫ್ಟ್]

ಅದೇನೆ ಇರಲಿ 'ಅನ್ನದಾತರ ಅನ್ನದಾತ' ಕಿಚ್ಚ ಸುದೀಪ್ ಅವರು ಇಂದು(ಸೆಪ್ಟೆಂಬರ್ 2) ಸಂಭ್ರಮದಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು

English summary
Watch Sudeep's New movie First Look Birthday Teaser. Wish you Happy Birthday Kiccha Sudeep - Kannada New Movie First Look, starring Sudeep, Nithya Menon and others. Directed by KS Ravikumar. Music composed by D Imman.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada