»   » ಮೂಢನಂಬಿಕೆ, ಅಸ್ವಚ್ಛತೆ ಕಿತ್ತೊಗೆಯಲು 'ಟೆಕ್ಕಿಗಳ' ಹೊಸ ಪ್ರಯತ್ನ

ಮೂಢನಂಬಿಕೆ, ಅಸ್ವಚ್ಛತೆ ಕಿತ್ತೊಗೆಯಲು 'ಟೆಕ್ಕಿಗಳ' ಹೊಸ ಪ್ರಯತ್ನ

Posted By:
Subscribe to Filmibeat Kannada

''ಕಾಲ ಬದಲಾಗಿದೆ. ಆಧುನಿಕತೆ ಆವರಿಸಿದೆ. ತಂತ್ರಜ್ಞಾನ ಅಭಿವೃದ್ದಿ ಆಗಿದೆ.....ಆದ್ರೆ, ಜನಗಳ ಆಚಾರ-ವಿಚಾರ-ನಂಬಿಕೆಗಳು ಮಾತ್ರ ಇನ್ನೂ ಬದಲಾಗಿಲ್ಲ. ಇವೆಲ್ಲ ಬದಲಾಗಬೇಕು ಅಂತಲ್ಲ. ಆದ್ರೆ, ಜನರ ನಂಬಿಕೆಯನ್ನ ಬಳಸಿಕೊಂಡು ಮೋಸ ಮಾಡುತ್ತಿರುವ ಕಪಟಿಗಳು ಹೆಚ್ಚಾಗುತ್ತಿದ್ದಾರೆ. ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಹೀಗಂತ, ಟೆಕ್ಕಿಗಳ ತಂಡವೊಂದು 'ಸುಳಿವು' ಎಂಬ ಕಿರುಚಿತ್ರವನ್ನ ನಿರ್ಮಾಣ ಮಾಡಿ, ಸಮಾಜದ ವಾಸ್ತವವನ್ನ ಎತ್ತಿಹಿಡಿಯಲು ಬರುತ್ತಿದೆ.

ಹೌದು, ಈ ಹಿಂದೆ 'ಚಿಲ್ಲರೆ' ಎಂಬ ಚಿತ್ರವನ್ನು ನಿರ್ಮಾಣ ಮಾಡಿ ಗಮನ ಸೆಳೆದಿದ್ದ ಐಟಿ ಉದ್ಯೋಗಿಗಳು, ಈಗ ತಮ್ಮ '1-TEAM' ಬ್ಯಾನರ್ ನಿಂದ ಎರಡನೇ ಸಿನಿಮಾ ಮಾಡಿದ್ದಾರೆ.

'1-TEAM' ಎರಡನೇ ಕಾಣಿಕೆ

'1-TEAM' ನಿರ್ಮಾಣ ಸಂಸ್ಥೆಯಿಂದ ಈಗಾಗಲೇ 'ಚಿಲ್ಲರೆ' ಎಂಬ ಕಿರುಚಿತ್ರವನ್ನ ನೀಡಿದ್ದ ಟೆಕ್ಕಿಗಳು ಈಗ 'ಸುಳಿವು' ಎಂಬ ಎರಡನೇ ಸಿನಿಮಾವನ್ನ ತಯಾರು ಮಾಡಿದ್ದಾರೆ. ಸದ್ಯ, 'ಸುಳಿವು' ಚಿತ್ರದ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ, ಈಗ ಪ್ರಿಮಿಯರ್ ಶೋ ಮಾಡಲು ಮುಂದಾಗಿದೆ.[ಟೆಕ್ಕಿಗಳ ಹೊಸ ಪ್ರಯತ್ನಕ್ಕೆ 'ಸಲಾಂ' ಎನ್ನಲೇಬೇಕು.!]

ಸಮಾಜದ ಸುತ್ತಾ ನಡೆಯುವ 'ಸುಳಿವು'

ಹಳ್ಳಿಯೊಂದರಲ್ಲಿ ಶುರುವಾಗುವ 'ಸುಳಿವು' ಕಥೆ, ಅಸಹಜ ಸಾವುಗಳಿಂದ ಹಲವು ತಿರುವು ಪಡೆಯುತ್ತೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗುತ್ತದೆ. ಈ ಸರಣೆ ಸಾವುಗಳಿಗೆ ಕಾರಣವೇನು? ಅಷ್ಟಕ್ಕೂ ಆ ಗ್ರಾಮದಲ್ಲಿ ಏನಾಗುತ್ತಿದೆ ಎಂಬುದು ಕುತೂಹಲಭರಿತವಾಗಿ ತೋರಿಸಲಾಗಿದೆ. ಇದರ ಜೊತೆಗೆ ಸಮಾಜದಲ್ಲಿನ ಮೌಢ್ಯ, ಅಸ್ವಚ್ಚತೆಯಿಂದ ಉಂಟಾಗುವ ಪರಿಣಾಮ ಭೀಕರವಾಗಿರಲಿದೆ ಎಂಬುದನ್ನ 'ಸುಳಿವು' ಚಿತ್ರತಂಡ ತೋರಿಸಲು ಪ್ರಯತ್ನಿಸುತ್ತಿದೆ.

ಸಂಪೂರ್ಣ ಐಟಿ ಉದ್ಯೋಗಿಗಳ ತಂಡ

ಪ್ರದೀಪ್ ಕುಮಾರ್ ಡಿ.ವಿ, ಅಖಿಲ್, ರಾಜ್, ಯೂಸಫ್, ಸಂದೀಪ್, ಜಯ್, ಸತೀಶ್ ಸೇರಿದಂತೆ ಹಲವರು 'ಸುಳಿವು' ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಆದಿತ್ಯ ಮತ್ತು ಆನಂದ್.ಜಿ ಜಂಟಿಯಾಗಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಆನಂದ್.ಜಿ ನಿರ್ದೇಶನದ ಜೊತೆಗೆ ಸಂಕಲನ, ಛಾಯಗ್ರಹಣ, ಹಿನ್ನೆಲೆ ಸಂಗೀತವನ್ನ ಕೂಡ ಒದಗಿಸಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಸೂಲದೇವನ ಹಳ್ಳಿ ಹಾಗೂ ಚಾಕಲಟ್ಟೆ ಗ್ರಾಮದಲ್ಲಿ ಸುಮಾರು 8 ದಿನಗಳ ಕಾಲ ಚಿತ್ರೀಕರಣ ಮಾಡಿದೆ.

'ಸುಳಿವು' ಟೀಸರ್ ನೋಡಿ

ಫೆಬ್ರವರಿ 19 ಕ್ಕೆ ಪ್ರದರ್ಶನ

ಇನ್ನೂ ಈ ಕಿರುಚಿತ್ರವನ್ನ ಎಲ್ಲ ಟೆಕ್ಕಿಗಳು ಸೇರಿ ಒಟ್ಟಾಗಿ ನಿರ್ಮಾಣ ಮಾಡಿದ್ದು, ಇದೇ ತಿಂಗಳು ಫೆಬ್ರವರಿ 19 ರಂದು ಪ್ರಿಮೀಯರ್ ಶೋ ಏರ್ಪಡಿಸಿದ್ದಾರೆ. ಬಸವನಗುಡಿಯ ಎನ್.ಆರ್.ಕಾಲೋನಿಯಲ್ಲಿರುವ 'ಪ್ರಭಾತಾ ಕಲಾಪೂರ್ಣಿಮ'ದಲ್ಲಿ ಭಾನುವಾರ ಬೆಳಿಗ್ಗೆ 10.30ಕ್ಕೆ 'ಸುಳಿವು' ಪ್ರದರ್ಶನ ನಡೆಯಲಿದೆ.


'ಸುಳಿವು' ಎರಡನೇ ಟೀಸರ್ ನೋಡಿ

English summary
Adhithya and Ananda G Directorial, Pradeep Kumar, Akhil, Raj Yousuf, Sandip, Jay, Sathish Starrer 'Sulivu' short movie Teaser is out. Watch the Teaser Here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada