»   » ಸುನಿಲ್ ರಾವ್ 'ಲೂಸ್' ಕಥೆಯ ಮೊದಲ ಎಪಿಸೋಡ್‌ಗೆ ಭರ್ಜರಿ ರೆಸ್ಪಾನ್ಸ್!

ಸುನಿಲ್ ರಾವ್ 'ಲೂಸ್' ಕಥೆಯ ಮೊದಲ ಎಪಿಸೋಡ್‌ಗೆ ಭರ್ಜರಿ ರೆಸ್ಪಾನ್ಸ್!

Posted By:
Subscribe to Filmibeat Kannada

'ಎಕ್ಸ್‌ ಕ್ಯೂಸ್ ಮಿ' ಖ್ಯಾತಿಯ ಸುನಿಲ್ ರಾವ್ ಮುಖ್ಯ ಭೂಮಿಕೆಯಲ್ಲಿ ಕನ್ನಡ ವೆಬ್‌ ಸೀರೀಸ್ ಬರುತ್ತಿರುವ ಬಗ್ಗೆ ಈ ಹಿಂದೆಯೇ ಹೇಳಿದ್ವಿ. ಟ್ರೈಲರ್ ನಿಂದ ನೆಟ್ಟಿಗರ ಗಮನ ಸೆಳೆದಿದ್ದ 'ಲೂಸ್ ಕನೆಕ್ಷನ್' ವೆಬ್ ಸೀರೀಸ್‌ನ ಮೊದಲ ಎಪಿಸೋಡ್ ಈಗ ಸಖತ್ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ. ಅಲ್ಲದೇ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ.

'ಲೂಸ್ ಕನೆಕ್ಷನ್'ನ ವಿಶೇಷತೆ ಏನು? ಬಿಡುಗಡೆ ಆಗಿರುವ ಮೊದಲ ಎಪಿಸೋಡ್ ಹೇಗಿದೆ? ಎಂಬಿತ್ಯಾದಿ ಮಾಹಿತಿ ಈ ಕೆಳಗಿನಂತಿದೆ..

ಲವ್ ಫೇಲ್ಯೂರ್ ಹುಡುಗನ ಲೂಸ್ ಕಥೆ

ಬಿಡುಗಡೆ ಆಗಿರುವ ಮೊದಲ ಎಪಿಸೋಡ್ ನೋಡಿದರೆ 'ಲೂಸ್ ಕನೆಕ್ಷನ್' ಕನ್ನಡ ವೆಬ್‌ಸೀರೀಸ್ ಲವ್ ಫೇಲ್ಯೂರ್ ಆದ ಹುಡುಗನ ಲೂಸ್ ಕಥೆಯೇ ಎಂದೇಳಬಹುದು. ಲವ್ ಬ್ರೇಕಪ್ ಆದ ನಂತರ ಒಬ್ಬ ಹುಡುಗ ಹೇಗೆ ವರ್ತಿಸುತ್ತಾನೆ ಅನ್ನೋದನ್ನ ಬಿಡುಗಡೆ ಆದ ಮೊದಲ ಎಪಿಸೋಡ್ ನಲ್ಲಿ ತೋರಿಸಿದ್ದಾರೆ ಅಷ್ಟೆ. ಆದ್ರೆ ಮನರಂಜನೆ ಈ ವೆಬ್‌ಸೀರೀಸ್‌ನ ಮೂಲ ಉದ್ದೇಶವಾಗಿರುವುದರಿಂದ ಅಭಿನಯದಲ್ಲಿ ಸಹಜತೆಗಿಂತ ಹೆಚ್ಚು ನಾಟಕೀಯತೆಯೇ ನಟನೆಯಲ್ಲಿ ಕಾಣುತ್ತದೆ.

'ಎಕ್ಸ್‌ ಕ್ಯೂಸ್ ಮಿ'ಯ ದೇವದಾಸ

'ಎಕ್ಸ್‌ ಕ್ಯೂಸ್‌ ಮಿ' ಚಿತ್ರದಲ್ಲಿ ಸುನಿಲ್ ಗೆ ಲವ್ ಫೇಲ್ಯೂರ್ ಆಗುತ್ತೆ. ಆದ್ರೆ ಆ ಚಿತ್ರದಲ್ಲಿ ಆತ ದೇವದಾಸನಾಗಿ ಗಡ್ಡ ಬಿಟ್ಟು ಕೊರಗುವ ದೃಶ್ಯಗಳು ಕಾಣಿಸುವುದಿಲ್ಲ. ಆ ದೃಶ್ಯಗಳನ್ನು 'ಲೂಸ್ ಕನೆಕ್ಷನ್'ನಲ್ಲಿ ನೋಡಬಹುದು. ಆ ರೀತಿ ಫೀಲ್ ಆಗಲು ಎಪಿಸೋಡ್‌ನ ಮೊದಲಿಗೆ 'ಎಕ್ಸ್‌ ಕ್ಯೂಸ್‌ ಮಿ' ಚಿತ್ರದ ಕ್ಲೈಮ್ಯಾಕ್ಸ್ ತೋರಿಸಿದ್ದಾರೆ. ಆದ್ರೆ ಸುನಿಲ್ ನೋಡಿ ಬೇಸರ ಆಗುವುದಕ್ಕಿಂತ ಹೆಚ್ಚಾಗಿ ಸಖತ್ ಮನರಂಜನೆ ಸಿಗುತ್ತೆ.

ಇತರೆ ವೆಬ್‌ ಸೀರೀಸ್‌ಗಳಿಗಿಂತ ಬೆಟರ್

ಕನ್ನಡದಲ್ಲಿ ಈ ಹಿಂದೆ ಬಂದ 'ಬೈಟು ಬೆಂಗಳೂರು', 'ಬೆಂಗಳೂರು ಕ್ವೀನ್ಸ್' ಮತ್ತು ಇತರೆ ಕನ್ನಡ ವೆಬ್‌ ಸೀರೀಸ್‌ಗಿಂತ 'ಲೂಸ್ ಕನೆಕ್ಷನ್' ಬೆಟರ್ ಮನರಂಜನೆ ನೀಡುತ್ತದೆ ಎಂದೇ ಹೇಳಬಹುದು. ಲವ್, ಬ್ರೇಕಪ್ ಮತ್ತು ಗೆಳೆತನದ ಸುತ್ತಲಿನ ಸನ್ನಿವೇಶಗಳೇ ಇಲ್ಲಿನ ಕಥೆಯಾಗಿದೆ. ಯೂತ್ಸ್‌ಗಳಿಗೆ ಕಚಗುಳಿ ಇಡುವ, ಹಾಗೆ ಲವ್ ಫೇಲ್ಯೂರ್ ಆದ ಹುಡುಗರಿಗೆ ಸಮಾಧಾನ ಮಾಡುವ ಒಂದಷ್ಟು ಡೈಲಾಗ್‌ಗಳು ಇವೆ. ಮೇಕಿಂಗ್ ಸಹ ಸೂಪರ್ ಆಗಿದೆ.

'ಲೂಸ್‌ ಕನೆಕ್ಷನ್' ಬಗ್ಗೆ

'ಲೂಸ್ ಕನೆಕ್ಷನ್‌'ನಲ್ಲಿ ಸುನಿಲ್ ರಾವ್ ಜೊತೆಗೆ ನಟಿ ಸಿಂಧೂ ಲೋಕನಾಥ್, ಅನುಪಮಾ ಗೌಡ, ವಿನಾಯಕ ಜೋಶಿ, ಆರ್ ಜೆ ವಿಕ್ಕಿ ಮತ್ತು ಮುಂತಾದವರು ಅಭಿನಯಿಸಿದ್ದಾರೆ. ಆರ್ ಜೆ ಪ್ರದೀಪ್ (ಸಕ್ಕತ್ ಸ್ಟುಡಿಯೋ) ಮತ್ತು ವಿವೇಕ್ ಆರಾಧ್ಯ ಹಾಗು ರವಿಶಂಕರ್ (ಪೆಂಟಪ್ರಿಮ್ ಸ್ಟುಡಿಯೋ) ನಿರ್ಮಾಣ ಮಾಡಿದ್ದು, ಕತೆ ರಚಿಸಿ ಇಶ್ಮಾನ್ ಖಾನ್, ಹಸೀನ್ ಖಾನ್, ರಘು ಶಾಸ್ತ್ರಿ ಮೂವರು ನಿರ್ದೇಶನ ಮಾಡಿದ್ದಾರೆ. ಸುದ್ಧೋ ರಾಯ್ ರವರು ಸಂಗೀತ ನೀಡಿದ್ದಾರೆ. ಮಹೇಂದರ ಸದಾನಂದೇ ಮತ್ತು ಮಂಜೇಶ್ ಎನ್‌.ಕೆ ಛಾಯಾಗ್ರಹಣ ನಿರ್ವಹಣೆ ಮಾಡಿದ್ದಾರೆ. ಈಗ ಸದ್ಯ ಮೊದಲ ಎಪಿಸೋಡ್ ಅಷ್ಟೇ ಬಿಡುಗಡೆ ಆಗಿದ್ದು, ನೋಡಲು ಕ್ಲಿಕ್ ಮಾಡಿ

English summary
Sunil Roah starrer kannada web series 'Loose Conection' first episode released in 'SAKKATH STUDIO' youtube channel. Its out and out comedy web series, directed by Esham Khan, Haseen Khan, Raghu Shastry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada