»   » ಹೆಲೋ 'ಎಕ್ಸ್ ಕ್ಯೂಸ್ ಮಿ' ಸುನಿಲ್ ರಾವ್ 'ಲೂಸ್ ಕನೆಕ್ಷನ್' ಟ್ರೈಲರ್ ನೋಡಿ

ಹೆಲೋ 'ಎಕ್ಸ್ ಕ್ಯೂಸ್ ಮಿ' ಸುನಿಲ್ ರಾವ್ 'ಲೂಸ್ ಕನೆಕ್ಷನ್' ಟ್ರೈಲರ್ ನೋಡಿ

Posted By:
Subscribe to Filmibeat Kannada

'ಚಪ್ಪಾಳೆ', 'ಸಖ ಸಖಿ' ನಂತರ 'ಎಕ್ಸ್‌ ಕ್ಯೂಸ್ ಮಿ' ಖ್ಯಾತಿಯ ನಟ ಸುನಿಲ್ ರಾವ್ ಕನ್ನಡ ಚಿತ್ರಗಳ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ಅತಿ ವಿರಳ. ಇವರ ಅಭಿನಯಕ್ಕೆ ಮಾರುಹೋಗಿದ್ದ ಸಿನಿ ಪ್ರೇಮಿಗಳಲ್ಲಿ ಎಲ್ಲಪ್ಪಾ ಹೋಗ್ ಬಿಟ್ರು ಈ 'ಬಾ ಬಾರೋ ರಸಿಕ' ನಟ? ಅನ್ನೋ ಪ್ರಶ್ನೆ ಇದ್ದಿದ್ದೂ ನಿಜ.

ಅಂದಹಾಗೆ ಸುನಿಲ್ ರಾವ್ ಈಗ 'ಲೂಸ್ ಕನೆಕ್ಷನ್' ಎಂಬ ವೆಬ್‌ ಸೀರೀಸ್ ಮೂಲಕ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ. ಸುನಿಲ್ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಲೂಸ್ ಕನೆಕ್ಷನ್' ಎಂಬ ವೆಬ್‌ ಸೀರೀಸ್ ಮೂಡಿಬರುತ್ತಿದ್ದು, ಅದರ ಮೊದಲ ಎಪಿಸೋಡ್ ನ ಟ್ರೈಲರ್ ಬಿಡುಗಡೆ ಆಗಿದೆ. ವೆಬ್‌ ಸೀರೀಸ್ ನಲ್ಲಿ ಮೋನಿ ಪಾತ್ರದಲ್ಲಿ ಅಭಿನಯಿಸಿರುವ ಸುನಿಲ್ ರಾವ್ ವಿಭಿನ್ನ ಲುಕ್ ನಿಂದ ಗಮನಸೆಳೆದಿದ್ದಾರೆ. ಅವರ ಲವ್, ಲವ್ ಬ್ರೇಕಪ್, ಗೆಳೆತನಗಳ ನಡುವಿನ ತುಂಟಾಟಗಳನ್ನು 'ಲೂಸ್ ಕನೆಕ್ಷನ್' ವೆಬ್ ಸೀರೀಸ್ ನಲ್ಲಿ ಹೆಚ್ಚು ಕಡಿಮೆ ಲೂಸ್ ಲೂಸ್ ಆಗಿಯೇ ತೋರಿಸಲಾಗಿದೆ. ಆದ್ದರಿಂದ ಯೂಟ್ಯೂಬ್ ನಲ್ಲಿ 'SAKKATH STUDIO' ಚಾನೆಲ್ ಓಪನ್ ಮಾಡಿ ಸುನಿಲ್ ರಾವ್ ಅಭಿನಯ ಕಣ್ತುಂಬಿಕೊಳ್ಳುವ ಜೊತೆಗೆ ಸಖತ್ ಮನರಂಜನೆ ಪಡೆಯಬಹುದು.

watch Sunil Roah starrer Kannada web series 'Loose Connection' trailer

ಸುನಿಲ್ ರಾವ್ ಜೊತೆಗೆ 'ಲೂಸ್ ಕನೆಕ್ಷನ್'ನಲ್ಲಿ ಸಿಂಧೂ ಲೋಕನಾಥ್, ಅನುಪಮಾ ಗೌಡ, ವಿನಾಯಕ ಜೋಶಿ, ಆರ್‌ ಜೆ ವಿಕ್ಕಿ ಮತ್ತು ಮುಂತಾದವರು ಅಭಿನಯಿಸಿದ್ದಾರೆ. ಈ ಕನ್ನಡ ವೆಬ್‌ ಸೀರೀಸ್ ಅನ್ನು 'SAKKATH STUDIO' ಅಡಿಯಲ್ಲಿ ಆರ್‌ ಜೆ ಪ್ರದೀಪ್ ನಿರ್ಮಾಣ ಮಾಡಿದ್ದಾರೆ. 'ಲೂಸ್ ಕನೆಕ್ಷನ್' ಮೊದಲ ಎಪಿಸೋಡ್ ನ ಟ್ರೈಲರ್ ಉತ್ತಮ ರೆಸ್ಪಾನ್ಸ್ ಪಡೆದಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಐದನೇ ಸ್ಥಾನದಲ್ಲಿದೆ. ಈಗಾಗಲೇ 36 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಪಡೆದಿದೆ.

'ಲೂಸ್ ಕನೆಕ್ಷನ್' ವೆಬ್ ಸೀರೀಸ್ ನ ಮೊದಲ ಎಪಿಸೋಡ್ ಆಗಸ್ಟ್ 2 ರಂದು 'SAKKATH STUDIO' ಯೂಟ್ಯೂಬ್ ಚಾನೆಲ್ ನಲ್ಲಿ ಸಂಜೆ 6 ಗಂಟೆಗೆ ಬಿಡುಗಡೆ ಆಗಲಿದೆ. 'ಲೂಸ್ ಕನೆಕ್ಷನ್' ಮೊದಲ ಎಪಿಸೋಡ್ ಟ್ರೈಲರ್ ನೋಡಲು ಕ್ಲಿಕ್ ಮಾಡಿ

English summary
Sunil Roah starrer Kannada web series 'Loose Connection' trailer released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada