For Quick Alerts
  ALLOW NOTIFICATIONS  
  For Daily Alerts

  ರಜನಿ ಕೊಚಾಡಿಯನ್ ಟೀಸರ್ ಸೂಪರ್ !

  By Mahesh
  |

  ಸೂಪರ್ ಸ್ಟಾರ್ ರಜನಿಕಾಂತ್ ಅವರ ಕೊಚಾಡಿಯನ್ ಚಿತ್ರಕ್ಕೆ ಕುಂಬಳಕಾಯಿ ಒಡೆದ ಟೈಂ ಸರಿಯಿಲ್ಲ 2012ರಲ್ಲೇ ರಜನಿ ಅವರ ಮಹೋನ್ನತ ಚಿತ್ರ ಸೆಟ್ಟೇರಿದ್ದರೂ ಪೋಸ್ಟರ್ ಗಳು ಧೂಳು ಹಿಡಿಯುತ್ತಿದೆ ಎಂದು ಕೊರಗುವವರು, ಟೀಕೆ ಮಾಡುವವರ ಮುಂದೆ ಸೌಂದರ್ಯ ಅಶ್ವಿನ್ ಅವರು ಸೂಪರ್ ಸ್ಟಾರ್ ಅವರ ಕೊಚಾಡಿಯನ್ ಚಿತ್ರದ ಟೀಸರ್ ಬಿಟ್ಟು ಗೆದ್ದಿದ್ದಾರೆ.

  ಸೂಪರ್ ಸ್ಟಾರ್ ರಜನಿ ಅವರನ್ನು ಹೊಸ ಗೆಟಪ್, ಲುಕ್ ನಲ್ಲಿ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಚಿತ್ರದ ಬಿಡುಗಡೆ ಭಾಗ್ಯ ದೀಪಾವಳಿ ಹೊತ್ತಿಗೆ ಆಗುವ ನಿರೀಕ್ಷೆಯಿದೆ. ಗಣೇಶ ಹಬ್ಬದಂದು ರಿಲೀಸ್ ಆದ ಟೀಸರ್ ಯೂಟ್ಯೂಬ್ ನಲ್ಲಿ ಭರ್ಜರಿಯಾಗಿ ಓಡುತ್ತಿದೆ. ಈಗಾಗಲೇ 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

  Eros ಇಂಟರ್ ನ್ಯಾಷನಲ್ ಹೊರತಂದಿರುವ ಈ ಟೀಸರ್ ಎಲ್ಲರ ಗಮನ ಸೆಳೆಯುವಂತೆ ರೂಪಿಸುವಲ್ಲಿ ರಜನಿ ಅವರ ಪುತ್ರಿ ಸೌಂದರ್ಯ ಅವರ ಪರಿಶ್ರಮ ಎದ್ದು ಕಾಣುತ್ತದೆ. ಅದ್ಭುತ ಅನಿಮೇಷನ್ ತಂತ್ರಜ್ಞಾನವುಳ್ಳ ಕೊಚಾಡಿಯನ್ ಚಿತ್ರದ ಹೊಸ ಪೋಸ್ಟರ್ ಗಳು ಹುಟ್ಟಿಸಿದ ಕ್ರೇಜ್ ಈಗ ಟೀಸರ್ ಗೂ ಸಿಕ್ಕಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸೌಂದರ್ಯ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

  ಟ್ವಿಟ್ಟರ್ ಸಹಕಾರಿ

  ಟ್ವಿಟ್ಟರ್ ಸಹಕಾರಿ

  ಟ್ವಿಟ್ಟರ್ ನಲ್ಲಿ ರಜನಿಕಾಂತ್ ಅಭಿನಯದ ಕೊಚಾಡಿಯನ್ ಪೋಸ್ಟರ್ ಬಿಡುಗಡೆಯಾಗಿತ್ತು. ಅಲ್ಲದೆ ಚಿತ್ರದ ಕ್ರೇಜ್ ಉಳಿಸಿಕೊಳ್ಳುವಲ್ಲಿ ಟ್ವಿಟ್ಟರ್ ಸಹಕಾರಿಯಾಗಿದೆ.

  ಇದೊಂದು ಐತಿಹಾಸಿಕ ಚಿತ್ರವಾಗಿದೆ. ಪಾಂಡ್ಯ ಅರಸು ಕೊಚಾಡಿಯನ್ ರಣಧೀರನ್ ಸಾಹಸದ ಕಥೆ. ಚಿತ್ರದಲ್ಲಿ ರಜನಿ ಜೊತೆಗೆ ದೀಪಿಕಾ ಪಡುಕೋಣೆ, ಜಾಕಿ ಶ್ರಾಫ್, ಶರತ್ ಕುಮಾರ್, ಶೋಭನಾ, ಆದಿ ಹಾಗೂ ಇನ್ನಿತರ ಕಲಾವಿದರಿದ್ದಾರೆ.

  ನಟ ಸೂರ್ಯ ಟ್ವೀಟ್ಸ್

  ತಮಿಳಿನ ಜನಪ್ರಿಯ ನಟ ಸೂರ್ಯ ಅವರು ಟ್ವೀಟ್ ಮಾಡಿ ಸೌಂದರ್ಯ ಅವರಿಗೆ ಶುಭ ಹಾರೈಸಿದ್ದಾರೆ.

  ಅಭಿಷೇಕ್ ಬಚ್ಚನ್ ಟ್ವೀಟ್ಸ್

  ರಜನಿ ಕಾಂತ್ ಅವರ ಚಿತ್ರದ ಟೀಸರ್ ನೋಡಿ ಥ್ರಿಲ್ ಆಗಿರುವ ಅಭಿಷೇಕ್ ಬಚ್ಚನ್

  ತಂತ್ರಜ್ಞಾನ ಬಳಕೆ

  ತಂತ್ರಜ್ಞಾನ ಬಳಕೆ

  ಈ ಚಿತ್ರದ ಕಥೆಗೆ ತಂತ್ರಜ್ಞಾನ ಬಳಕೆ ಅಗತ್ಯವಿತ್ತು ಎಂದು ಸೌಂದರ್ಯ ಹೇಳಿದ್ದಾರೆ. ಟಿನ್ ಟಿನ್ ಹಾಗೂ ಅವತಾರ್ ಮಾದರಿಯಲ್ಲಿ ತಯಾರಾಗಿರುವ ಚಿತ್ರಕ್ಕೆ ಹಾಲಿವುಡ್ ನ ನುರಿತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಮೋಷನ್ ಕಾಪ್ಚರ್ ತಂತ್ರಜ್ಞಾನ ಇಲ್ಲಿ ಬಳಸಲಾಗಿದೆ.

  ಟೀಸರ್

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕೊಚಾಡಿಯನ್ ಚಿತ್ರದ ಟೀಸರ್ ನೋಡಿ

  ಕೊಚಾಡಿಯನ್ ಬಗ್ಗೆ ರೆಹಮಾನ್

  ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಅವರು ಕೊಚಾಡಿಯನ್ ಗೆ ಸಂಗೀತ ನೀಡುವುದು ಚಾಲೆಂಜಿಂಗ್ ಆಗಿತ್ತು. ಇದು ಹೊಸ ಪ್ರಯತ್ನ ಎಂದಿದ್ದಾರೆ.

  ಚಿತ್ರತಂಡ ಜೊತೆ ರಜನಿಕಾಂತ್

  ಚಿತ್ರತಂಡ ಜೊತೆ ರಜನಿಕಾಂತ್

  ಕೊಚಾಡಿಯನ್ ಚಿತ್ರಕ್ಕೆ ಕಥೆ, ಚಿತ್ರಕಥೆ ಒದಗಿಸಿರುವ ನಿರ್ದೇಶಕ ಕೆಎಸ್ ರವಿಕುಮಾರ್ ಅವರು ಚಿತ್ರದ ಕಥೆಯ ಬಗ್ಗೆ ಸುಳಿವು ಬಿಟ್ಟು ಕೊಟ್ಟಿಲ್ಲ. ರಜನಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಭಿಮಾನಿಗಳಿಗೆ ಡಬ್ಬಲ್ ಮಜಾ ನೀಡಲಿದೆಯಂತೆ.

  ಕೇನ್ಸ್ ಫಿಲಂ ಫೆಸ್ಟಿವಲ್ ನಲ್ಲಿ ಮೇ 15 ರಿಂದ 26 ರೊಳಗೆ ಈ ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ಅನ್ನು ಲೋಕಾರ್ಪಣೆ ಮಾಡಲಾಗಿತ್ತು.

  ಕೊಚಾಡಿಯನ್ ಟೀಸರ್

  ಕೊಚಾಡಿಯನ್ ಟೀಸರ್ ರಿಲೀಸ್ ಮಾಡಿದ್ದು ಹೀಗೆ

  English summary
  Watch Teaser: Rajinikanth's Kochadaiyaan Video : "There are heroes... There are superheroes... But there is only one - Rajinikanth." As expected, the superstar, the legend, the Thalaivaa as he is better known by his fans has come back to the world of cinema with a film that's literally larger than life!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X