»   » ಅನುಷ್ಕಾ ಶೆಟ್ಟಿ ತೂಕ ಹೆಚ್ಚಿಸಿಕೊಂಡಿದ್ದು ಯಾಕೆ?

ಅನುಷ್ಕಾ ಶೆಟ್ಟಿ ತೂಕ ಹೆಚ್ಚಿಸಿಕೊಂಡಿದ್ದು ಯಾಕೆ?

Posted By:
Subscribe to Filmibeat Kannada

ಐತಿಹಾಸಿಕ ಕಥೆಯುಳ್ಳ 'ಅರುಂಧತಿ' ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಅವರು ತಮ್ಮ ಅಮೋಘ ನಟನೆಯಿಂದ ಚಿತ್ರರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಂಡರು.

ತದನಂತರ ಈ ವರ್ಷದ ಬಿಗ್ ಹಿಟ್ 'ಬಾಹುಬಲಿ' ಚಿತ್ರದ ಮೂಲಕ ದೇವಸೇನಾ ಅಂತಾನೇ ಫೇಮಸ್ ಆದರು. ಇದೀಗ ಯಾವುದೇ ಪಾತ್ರಕ್ಕೂ ಸೈ ಎನ್ನುವ ಅಪರೂಪದ ಪ್ರತಿಭೆ ಅನುಷ್ಕಾ ಶೆಟ್ಟಿ ಅವರ ಡಿಫರೆಂಟ್ ಲುಕ್ ನಲ್ಲಿರುವ 'ಸೈಜ್ ಝೀರೋ' ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ.

ಅಂದಹಾಗೆ ಈ ಚಿತ್ರದಲ್ಲಿ ಅಂತಹ ವಿಶೇಷತೆ ಏನಪ್ಪಾ ಇದೆ ಅಂತ ನೀವು ಅಂದುಕೊಂಡಿದ್ದೀರಾ?, ಹೌದು ವಿಶೇಷತೆ ಇದ್ದೇ ಇದೆ ಅದೇನೆಂಬುದನ್ನು ನೋಡಲು ಮೊದಲು ಈ ಟೀಸರ್ ನೋಡಿ..

Watch Telugu Movie 'Size Zero' official Teaser

ಇನ್ನು ಬಳುಕುವ ಬಳ್ಳಿಯಂತಿದ್ದ ಅನುಷ್ಕಾ ಶೆಟ್ಟಿ ಅವರು ಈ ಅಪರೂಪದ 'ಸೈಜ್ ಜೀರೋ' ಚಿತ್ರಕ್ಕಾಗಿ ಈಗಿರುವ ತೂಕಕ್ಕಿಂತ ಇನ್ನೂ 16 ರಿಂದ 17 ಕೆ.ಜಿ ತೂಕ ಜಾಸ್ತಿ ಮಾಡಿಕೊಂಡಿದ್ದಾರಂತೆ, ಜೊತೆಗೆ ತೂಕ ಹೆಚ್ಚಿಸಿಕೊಳ್ಳಲು ಬರೋಬ್ಬರಿ 2 ತಿಂಗಳುಗಳ ಕಾಲ ಕಸರತ್ತು ಮಾಡಿದ್ದಾರಂತೆ.

ಸದ್ಯಕ್ಕೆ ಚಿತ್ರದ ಶೂಟಿಂಗ್ ಮುಗಿದಿದ್ದು, ಇದೀಗ 'ಬಾಹುಬಲಿ' ಭಾಗ-2 ಚಿತ್ರದ ಶೂಟಿಂಗ್ ಗಾಗಿ ಮತ್ತೆ ಹೆಚ್ಚಿಸಿಕೊಂಡಿರುವ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದು, 4 ರಿಂದ 5 ಕೆ.ಜಿ ತೂಕ ಕಳೆದುಕೊಂಡಿದ್ದಾರಂತೆ.

ಧಡೂತಿ ದೇಹ, ಸಿಕ್ಕಾಪಟ್ಟೆ ತಿನ್ನೋದು ಜೊತೆಗೆ ನೋಡಿದರೆ ನಗು ಹುಟ್ಟಿಸುವ ದೇಹಾಕೃತಿಯನ್ನು ಹೊಂದಿರುವ ಅನುಷ್ಕಾ ಶೆಟ್ಟಿ ಅವರ ತೆಲುಗು 'ಸೈಜ್ ಝೀರೋ' ಚಿತ್ರದ ಫಸ್ಟ್ ಲುಕ್ ಟೀಸರ್ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.

ಈ ಬಗ್ಗೆ ಸ್ವತಃ ಅನುಷ್ಕಾ ಶೆಟ್ಟಿ ಅವರು ಓಪನ್ ಹಾರ್ಟ್ ವಿತ್ ಆರ್ ಕೆ ಜೊತೆ ಮಾತಾಡಿದ್ದು, ಇಷ್ಟರಮಟ್ಟಿಗೆ ತೂಕ ಹೆಚ್ಚಿಸಿಕೊಂಡ ರಹಸ್ಯ ಬಿಚ್ಚಿಟ್ಟಿದ್ದಾರೆ.

ಹೆಚ್ಚಾಗಿ ಅನ್ನ ಪದಾರ್ಥಗಳು ಹಾಗೂ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಾಗಿ ಇರುವ ಪದಾರ್ಥಗಳನ್ನು ತಿನ್ನುವ ಮೂಲಕ ತೂಕ ಹೆಚ್ಚಿಸಿಕೊಂಡಿದ್ದಾರಂತೆ. ಜೊತೆಗೆ ದಿನಾ ವರ್ಕೌಟ್ ಮಾಡುವುದನ್ನ ಸಂಪೂರ್ಣ ನಿಲ್ಲಿಸಿ ಈ ಮಟ್ಟಿಗೆ ತೂಕ ಹೆಚ್ಚಿಸಿಕೊಂಡರಂತೆ.

Watch Telugu Movie 'Size Zero' official Teaser

ತಮಿಳು ನಟ ಆರ್ಯ, ಅನುಷ್ಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಸೈಜ್ ಝೀರೋ' ಚಿತ್ರ ತೆಲುಗು, ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಪ್ರಕಾಶ್ ಕೊವೆಲ್ ಮುಡಿ ಆಕ್ಷನ್-ಕಟ್ ಹೇಳಿದ್ದು, ಊರ್ವಶಿ, ಪ್ರಕಾಶ್ ರೈ ಮುಂತಾದವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಎಮ್.ಎಮ್ ಕೀರವಾಣಿ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಒಟ್ನಲ್ಲಿ ಎಲ್ಲಾ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಅನುಷ್ಕಾ ಶೆಟ್ಟಿ ಅವರು ನಟನಾಲೋಕದಲ್ಲಿ ಸೈ ಎನಿಸಿಕೊಂಡಿದ್ದಾರೆ. ಇನ್ನು ನಾಯಕಿ ಪ್ರಧಾನ ಪಾತ್ರ ಮಾಡುತ್ತಿರುವ 'ರುದ್ರಮ್ಮದೇವಿ' ತೆರೆಗೆ ಬರಲು ತಯಾರಾಗಿದ್ದು, 'ಬಾಹುಬಲಿ' ನಂತರ ಇನ್ನೇನು ಸದ್ಯದಲ್ಲೇ ಅನುಷ್ಕಾ ಅಭಿಮಾನಿಗಳ ಎದುರು ರಾರಾಜಿಸಲಿದ್ದಾರೆ.

English summary
Telugu Movie 'Size Zero' official Teaser is released. 'Size Zero' features Telugu Actress Anushka Shetty, Tamil Actor Arya, in the lead role. The movie is directed by Prakash Kovelamudi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada