»   » 'ರಾಮಾಚಾರಿ' ಅನ್ನುವ ಹೆಸರೇ ಪ್ರಾಬ್ಲಂ..!

'ರಾಮಾಚಾರಿ' ಅನ್ನುವ ಹೆಸರೇ ಪ್ರಾಬ್ಲಂ..!

Posted By:
Subscribe to Filmibeat Kannada

1972ರಲ್ಲಿ 'ನಾಗರಹಾವು' ಚಿತ್ರದ ಮೂಲಕ 'ಮುಂಗೋಪಿ ರಾಮಾಚಾರಿ' ಗಾಂಧಿನಗರಕ್ಕೆ ಅಡಿಯಿಟ್ಟರು. ಇದೀಗ 2014ರಲ್ಲಿ ಅದೇ ರಾಮಾಚಾರಿ ಹೆಸರನ್ನು ಬಿಟ್ಟುಬಿಡದೆ ಜಪಮಾಡುತ್ತಾ, ಸ್ಯಾಂಡಲ್ ವುಡ್ ನಲ್ಲಿ ಗಲಭೆ ಎಬ್ಬಿಸುತ್ತಿರುವವರು ರಾಕಿಂಗ್ ಸ್ಟಾರ್ ಯಶ್.

ಅಂದಿನ ರಾಮಾಚಾರಿಗೂ, ಇಂದಿನ ರಾಮಾಚಾರಿಗೂ ಅದೇನು ವ್ಯತ್ಯಾಸವಿದೆಯೋ ಗೊತ್ತಿಲ್ಲ. ಆದರೆ ರಾಮಾಚಾರಿ ಅನ್ನುವ ಹೆಸರಿನವರಿಂದ ಬರೀ ಪ್ರಾಬ್ಲಂ ಉಂಟಾಗುತ್ತಿದೆಯಂತೆ! ಹೀಗಂತ ಹೇಳಿದವರು ಮತ್ಯಾರು ಅಲ್ಲ. ಹೊಸ ರಾಮಾಚಾರಿಯ ಚಿತ್ರತಂಡ!

Mr and Mrs Ramachari1

ಅರೇ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಇದಕ್ಕೆ ರಾಮಾಚಾರಿ ಅನ್ನುವ ಹೆಸರು ಕಾರಣ ಇದ್ದರೂ ಇರಬಹುದಲ್ಲಾ? ಅಂತ ನೀವು ಮುಂದಾಲೋಚನೆ ಮಾಡಿ, ಲಿಂಕು ಮಾಡುವ ಮುನ್ನ, ನೂತನ ರಾಮಾಚಾರಿ ಅಡ್ಡದಿಂದ ಬಂದಿರುವ ಹೊಚ್ಚ ಹೊಸ ಟ್ರೇಲರ್ ನ ಒಮ್ಮೆ ನೋಡಿ....

<iframe width="640" height="360" src="//www.youtube.com/embed/rQvEAcjSWq0?feature=player_embedded" frameborder="0" allowfullscreen></iframe>


ಹೌದು, 'ಮಿಸ್ಟರ್ ಅಂಡ್ ಮಿಸಸ್' ರಾಮಾಚಾರಿ ಚಿತ್ರದಲ್ಲಿ 'ರಾಮಾಚಾರಿ'ಯ ರೋಷಾವೇಶದ ಬಗ್ಗೆ ನಿರ್ದೇಶಕರು ಬರೆಸಿರುವ ಬೆಂಕಿ ಉಂಡೆಯಂಥ ಡೈಲಾಗ್ ಗಳಿವು. ಬರೀ ರಾಮಾಚಾರಿ ಬಗ್ಗೆ ಮಾತ್ರ ಅಲ್ಲ, ಚಿತ್ರದಲ್ಲಿ ರಾಧಿಕಾ ಪಂಡಿತ್ ನತದೃಷ್ಣ ಹೆಣ್ಮಗಳಾಗಿದ್ದಾರೆ!

Mr and Mrs Ramachari2

ಇಂತಹ ಪಂಚಿಂಗ್ ಡೈಲಾಗ್ ಗಳಿಂದ ರೆಡಿಯಾಗಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ನೂತನ ಟ್ರೇಲರ್ ರಿಲೀಸ್ ಆಗಿದೆ. ಅಂದಿನ ರಾಮಾಚಾರಿ ಬುಸುಗುಡುತ್ತಿದಂತೆ ಇಂದಿನ ರಾಮಾಚಾರಿ ಕೂಡ ಅಬ್ಬರಿಸಿರುವುದು ಟ್ರೇಲರ್ ನಲ್ಲಿ ಸ್ಪಷ್ಟವಾಗಿದೆ.

ರಗಡ್ ಲುಕ್ ನಲ್ಲಿ ಮಿಂಚಿರುವ ಯಶ್, 'ನಾನು ಕ್ಲಾಸ್ ಅಲ್ಲ, ಮಾಸ್!'', ಅಂತ ಡೈಲಾಗ್ ಹೊಡೆಯೋಕೂ ಸೈ, ವಿಲನ್ ಗಳನ್ನ ಮಣ್ಣುಮುಕ್ಕಿಸುವುದರಲ್ಲೂ ಜೈ. ಥೇಟ್ ವಿಷ್ಣು ದಾದಾರಂತೆ ಕೈಗೆ ಖಡಗ ಧರಿಸಿರುವ ಯಶ್, ಎದೆಯ ಮೇಲೆ ರಾಮಾಚಾರಿ ಹಚ್ಚೆಹಾಕಿಸಿಕೊಂಡಿರುವುದರ ಜೊತೆಗೆ ಮಾತಲ್ಲಿ ಬಿಸಿಮುಟ್ಟಿಸುವ ಮೂಲಕ ಪ್ರತಿ ಫ್ರೇಮ್ ನಲ್ಲೂ ಸಾಹಸಸಿಂಹ ಡಾ.ವಿಷ್ಣು ರನ್ನ ನೆನಪಿಸುತ್ತಾರೆ. [ಯಶ್ 'ರಾಮಾಚಾರಿ'ಗೆ ಬಿಡುಗಡೆ ಭಾಗ್ಯ ಯಾವಾಗ?]

Mr and Mrs Ramachari4

ಇನ್ನೂ ಕೊಂಚ ದಪ್ಪಗಾಗದಂತೆ ಕಾಣುವ ಯಶ್ ಮುದ್ದಿನ ಹುಡುಗಿ ರಾಧಿಕಾ ಪಂಡಿತ್, ಚಿತ್ರದಲ್ಲಿ ಪಕ್ಕದ್ಮನೆ ಹುಡುಗಿಯಾಗಿ ಮಿಂಚಿದ್ದಾರೆ. ಹಾಡಲ್ಲಿ ಗ್ಲಾಮರಸ್ ಆಗಿ ಕಾಣುವ ಯಶ್-ರಾಧಿಕಾ ಜೋಡಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮೂಲಕ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡುವ ಎಲ್ಲಾ ಲಕ್ಷಣಗಳೂ ಇವೆ.

ಡೈಲಾಗ್ಸ್ ಮತ್ತು ಆಕ್ಷನ್ ಹೈಲೈಟ್ ಆಗಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಮ್ಯೂಸಿಕ್ ಕೂಡ ಭಾರಿ ಸದ್ದು ಮಾಡ್ತಿದೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಯಶ್ ಗಾನಸುಧೆಯಲ್ಲಿ ರೆಡಿಯಾಗಿರುವ 'ಅಣ್ತಮ್ಮ' ಹಾಡು ಈಗಾಗ್ಲೇ ಪಡ್ಡೆ ಹೈಕ್ಳ ಸುಪ್ರಭಾತವಾಗಿದೆ. ['ಅಣ್ತಮ್ಮ' ಯಶ್ ಗಾನಬಜಾನ ಇಲ್ಲಿದೆ ನೋಡಿ ]

''ನಾನ್ ಬರೋವರೆಗೂ ಮಾತ್ರ ಬೇರೆಯವರ ಹವಾ, ಬಂದಮೇಲೆ ನಂದೇ ಹವಾ'', ಅಂತ ಎದೆತಟ್ಟಿಕೊಂಡು ಹೇಳುವ ಯಶ್, ಇದೇ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 24ಕ್ಕೆ ತೆರೆಮೇಲೆ ಬರ್ತಿದ್ದಾರೆ. ಅವರ ಹುಂಬತನವನ್ನು ನೋಡೋಕೆ ನೀವೂ ರೆಡಿಯಾಗಿ...(ಫಿಲ್ಮಿಬೀಟ್ ಕನ್ನಡ)

English summary
Rocking Star Yash starrer Mr and Mrs Ramachari new trailer is out. Yash is seen as Angry Young Man. Punching dialogues and the chemistry between Yash and Radhika Pandit is highlight in the trailer. Have a look at the trailer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada