For Quick Alerts
  ALLOW NOTIFICATIONS  
  For Daily Alerts

  Petta vs viswasam: ರಜನಿ ಪೋಸ್ಟರ್ ಗಳಿಗೆ ಬೆಂಕಿಯಿಟ್ಟ ಅಜಿತ್ ಅಭಿಮಾನಿಗಳು.!

  |

  ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪೇಟಾ' ಮತ್ತು ಅಜಿತ್ ನಟನೆಯ 'ವಿಶ್ವಾಸಂ' ಚಿತ್ರ ಇಂದು ಬಿಡುಗಡೆ ಆಗಿದೆ. ಹೀಗಾಗಿ ರಜನಿ ಮತ್ತು ಅಜಿತ್ ಫ್ಯಾನ್ಸ್ ಗೆ ಇಂದು ಸಡಗರ-ಸಂಭ್ರಮ.

  ಎರಡೂ ಚಿತ್ರಗಳಿಗೆ ಇವತ್ತು ಭರ್ಜರಿ ಓಪನಿಂಗ್ ಸಿಕ್ಕಿದೆ. ಮಧ್ಯರಾತ್ರಿ 1 ಗಂಟೆಗೆ ಎರಡೂ ಚಿತ್ರಗಳ ಪ್ರದರ್ಶನ ಆರಂಭಗೊಂಡಿದ್ದು, ಶಿಳ್ಳೆ-ಚಪ್ಪಾಳೆ ಹೊಡೆಯಬೇಕಿದ್ದ ಅಜಿತ್ ಮತ್ತು ರಜನಿ ಫ್ಯಾನ್ಸ್ ಮಧ್ಯೆ ಬೆಂಕಿ ಹೊತ್ತಿಕೊಂಡಿದೆ.

  'ಪೇಟಾ' ಟ್ವಿಟ್ಟರ್ ವಿಮರ್ಶೆ: ರಜನಿ ಸಾರ್ ಈಸ್ ಬ್ಯಾಕ್, ಅಭಿಮಾನಿಗಳು ಫುಲ್ ಖುಷ್.!

  ಚೆನ್ನೈನ ಕೊಯಂಬೇಡು ಎಂಬಲ್ಲಿರುವ ಥಿಯೇಟರ್ ಒಂದರಲ್ಲಿ ರಜನಿಕಾಂತ್ ರವರ 'ಪೇಟಾ' ಪೋಸ್ಟರ್ ಗಳನ್ನು ಹರಿದು ಹಾಕಿ ಬೆಂಕಿಯಿಟ್ಟ ಘಟನೆ ನಡೆದಿದೆ. ಇಂತಹ ದುಷ್ಕೃತ್ಯ ಎಸಗಿದವರು ಅಜಿತ್ ಫ್ಯಾನ್ಸ್ ಎನ್ನಲಾಗಿದೆ. ಇದರಿಂದ ಥಿಯೇಟರ್ ಮುಂದೆ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

  ಅಭಿಮಾನಿಗಳ ಈ ಅತಿರೇಕದ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಅಜಿತ್ ಮತ್ತು ರಜನಿ ಚಿತ್ರಗಳು ಪೈಪೋಟಿ ನಡೆಸುವ ಸಂದರ್ಭದಲ್ಲಿ ಅಭಿಮಾನಿಗಳು ಕಿತ್ತಾಡಿಕೊಂಡಿರುವುದು ಹಲವರಿಗೆ ಬೇಸರ ತಂದಿದೆ.

  English summary
  Watch video: Ajith fans vandalising Rajini posters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X