»   » ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಕ್ಷಮೆ ಕೇಳಿದ್ದು ಯಾಕೆ?

ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಕ್ಷಮೆ ಕೇಳಿದ್ದು ಯಾಕೆ?

Posted By:
Subscribe to Filmibeat Kannada

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಬಿಡುಗಡೆ ಆದ ಸಮಯದಲ್ಲೇ ರಾಕಿಂಗ್ ಸ್ಟಾರ್ ಯಶ್ 'ಮಾಸ್ಟರ್ ಪೀಸ್' ಚಿತ್ರ ಬಿಡುಗಡೆ ಮಾಡುವ ತರಾತುರಿಯಲ್ಲಿದ್ದಾರೆ.

ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ ಪ್ರಯುಕ್ತ 'ಮಾಸ್ಟರ್ ಪೀಸ್' ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಚಿತ್ರತಂಡ ಪ್ಲಾನ್ ಮಾಡಿದ ಪ್ರಕಾರ ನಿನ್ನೆ (ಡಿಸೆಂಬರ್ 2) 'ಮಾಸ್ಟರ್ ಪೀಸ್' ಚಿತ್ರದ ಮೊದಲ ಹಾಡು ರಿಲೀಸ್ ಆಗ್ಬೇಕಿತ್ತು. [ರಾಕಿಂಗ್ ಸ್ಟಾರ್ 'ಮಾಸ್ಟರ್ ಪೀಸ್' ಹಾಡುಗಳ ಲಿಸ್ಟ್ ನೋಡಿದ್ರಾ?]


ಇಷ್ಟೊತ್ತಿಗೆ 'ಅಣ್ಣಂಗೆ ಲವ್ ಆಗಿದೆ' ಹಾಡು ಎಫ್.ಎಂಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ಬೇಕಿತ್ತು. Unfortunately, ಹಾಗಾಗಿಲ್ಲ. ಆದ್ದರಿಂದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ. ಮುಂದೆ ಓದಿ.....


'ಮಾಸ್ಟರ್ ಪೀಸ್' ಆಡಿಯೋ ರಿಲೀಸ್ ಯಾಕಾಗ್ಲಿಲ್ಲ.?

ರೇಡಿಯೋ ಸಿಟಿ 91.1 ಎಫ್.ಎಂ ಮೂಲಕ 'ಮಾಸ್ಟರ್ ಪೀಸ್' ಚಿತ್ರದ ಹಾಡುಗಳನ್ನ ಅಭಿಮಾನಿಗಳಿಗೆ ಕೇಳಿಸುವ ಪ್ಲಾನ್ ಇತ್ತು ಚಿತ್ರತಂಡಕ್ಕೆ. ಆದ್ರೆ, 'ತಾಂತ್ರಿಕ ಕಾರಣ'ಗಳಿಂದ 'ಮಾಸ್ಟರ್ ಪೀಸ್' ಹಾಡುಗಳು ಬಿಡುಗಡೆ ಆಗಲಿಲ್ಲ ಅಂತ ಆರ್.ಜೆ.ಪ್ರದೀಪ ಟ್ವೀಟ್ ಮಾಡಿದ್ದರು. ಆ ತಾಂತ್ರಿಕ ಕಾರಣ ಏನು ಅಂತ ಹೇಳ್ತೀವಿ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....


ಚೆನ್ನೈನಲ್ಲಿದ್ದಾರೆ ವಿ.ಹರಿಕೃಷ್ಣ.!

ಚೆನ್ನೈನಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸಿಕ್ಕಾಕೊಂಡಿರುವ ಕಾರಣ 'ಮಾಸ್ಟರ್ ಪೀಸ್' ಚಿತ್ರದ ಮಾಸ್ಟರಿಂಗ್ ಆಗಿರುವ ಆಡಿಯೋ ಫೈಲ್ಸ್ ಇಲ್ಲಿಗೆ ತರಲಾಗುತ್ತಿಲ್ಲ. [ಇವತ್ತು 'ಮಾಸ್ಟರ್ ಪೀಸ್' ಹಾಡು ಕೇಳಕ್ಕಾಗಲ್ಲ ಬಿಡಿ..!]


ಸೇಫ್ ಆಗಿದ್ದಾರಾ ವಿ.ಹರಿಕೃಷ್ಣ?

ಮೂಲಗಳ ಪ್ರಕಾರ, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಚೆನ್ನೈನಲ್ಲಿ ಸೇಫ್ ಆಗಿದ್ದಾರೆ. ಮಳೆಯಿಂದಾಗಿ ಅವರಿಗೆ ಫ್ಲೈಟ್ ಸಿಗುತ್ತಿಲ್ಲ ಅನ್ನೋದು ಬಿಟ್ಟರೆ, ಬೇರೆ ಯಾವುದೇ ಸಮಸ್ಯೆ ಇಲ್ಲ.


ಕ್ಷಮೆ ಕೇಳಿದ ಯಶ್.!

ನಿಗದಿತ ದಿನಕ್ಕೆ ಆಡಿಯೋ ಬಿಡುಗಡೆ ಆಗದೆ ಇರುವ ಕಾರಣ ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಕ್ಷಮೆ ಕೇಳಿದ್ದಾರೆ. ಯಶ್ ಏನ್ ಹೇಳಿದ್ದಾರೆ ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....


ಯಶ್ ಹೇಳಿದ್ದೇನು?

''ಎಲ್ಲರಿಗೂ ನಮಸ್ಕಾರ....ಮೊದಲನೇಯದ್ದಾಗಿ ನಿಮಗೆ ಕ್ಷಮೆ ಕೇಳ್ತೀನಿ. ಇವತ್ತು ಮಾಸ್ಟರ್ ಪೀಸ್ ಹಾಡುಗಳನ್ನ ಕೇಳಿಸ್ತೀನಿ ಅಂದಿದ್ದೆ. 'ಅಣ್ಣಂಗ್ ಲವ್ ಆಗಿದೆ' ಸಾಂಗ್ ಇವತ್ತು ರಿಲೀಸ್ ಆಗ್ಬೇಕಿತ್ತು. ಆದ್ರೆ ಚೆನ್ನೈ ನಲ್ಲಿ ಸಿಕ್ಕಾಪಟ್ಟೆ ಮಳೆ ಇರುವ ಕಾರಣ, ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ ಅಲ್ಲಿ ಸ್ಟಕ್ ಆಗಿದ್ದಾರೆ. ಮಾಸ್ಟರಿಂಗ್ ಆಗಿರುವ ಫೈಲ್ಸ್ ನ ಇಲ್ಲಿ ತರಿಸಿಕೊಳ್ಳುವುದಕ್ಕೆ ಆಗಿಲ್ಲ. ಕರೆಂಟ್ ಇಲ್ಲ, ಫ್ಲೈಟ್ಸ್ ಇಲ್ಲ, ಇದೆಲ್ಲ ನಿಮಗೆ ಗೊತ್ತಿರುವ ವಿಷಯ. ಆದ್ದರಿಂದ ಇವತ್ತು ನಿರಾಸೆ ಮಾಡಿದ್ದೀನಿ. ಇವತ್ತು ಹಾಕ್ಬೇಕಿದ್ದ ಹಾಡನ್ನ 7ನೇ ತಾರೀಖು ಕೇಳಿಸ್ತೀನಿ. ಅಲ್ಲಿವರೆಗೂ ಅಡ್ಜಸ್ಟ್ ಮಾಡ್ಕೋಳಿ...ಬೈಕೋ ಬೇಡಿ...ಕ್ಷಮಿಸಿ..ಕ್ಷಮಿಸಿ..ಕ್ಷಮಿಸಿ'' ಅಂತ ನಿನ್ನೆ ಯಶ್ ತಮ್ಮ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.


Apologizing for Masterpiece Audio Release delay

Posted by Yash on Wednesday, December 2, 2015

ವಿಡಿಯೋ ನೋಡಿ....

ಅಭಿಮಾನಿಗಳಿಗೆ ಯಶ್ ಕ್ಷಮೆಯಾಚಿಸಿರುವ ವಿಡಿಯೋ ಇಲ್ಲಿದೆ ಕ್ಲಿಕ್ ಮಾಡಿ....


English summary
Kannada Actor Yash has taken his facebook account to apologize his fans for the postponement of 'Masterpiece' audio release. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada