»   » ವಿಡಿಯೋ: 'ಹೆಬ್ಬುಲಿ' ಹಾಡಿಗೆ ಕುಣಿದ 'ಡ್ರಾಮಾ ಜ್ಯೂನಿಯರ್' ನಿಹಾಲ್ ಸಾಗರ್ ವಿಷ್ಣು

ವಿಡಿಯೋ: 'ಹೆಬ್ಬುಲಿ' ಹಾಡಿಗೆ ಕುಣಿದ 'ಡ್ರಾಮಾ ಜ್ಯೂನಿಯರ್' ನಿಹಾಲ್ ಸಾಗರ್ ವಿಷ್ಣು

Posted By:
Subscribe to Filmibeat Kannada
kiccha sudeep praises to nihal sagar | Filmibeat Kannada

ಕಳೆದ ವರ್ಷ ಪ್ರಸಾರ ಆದ 'ಡ್ರಾಮಾ ಜ್ಯೂನಿಯರ್ಸ್' ಮೊದಲ ಸೀಸನ್ ನಲ್ಲಿ ಸಿಕ್ಕಾಪಟ್ಟೆ ಚ್ಯೂಟಿ ಆಗಿದ್ದ ಪುಟಾಣಿ ನಿಹಾಲ್ ಸಾಗರ್ ವಿಷ್ಣು.

ಸುದೀಪ್ ರವರ 'ಕೆಂಪೇಗೌಡ' ಚಿತ್ರದ ''ಇದು ಆರ್ಮುಗಂ ಕೋಟೆ ಕಣೋ...'' ಡೈಲಾಗ್ ಹೇಳಿ ಜನಪ್ರಿಯತೆ ಗಳಿಸಿದ್ದ ನಿಹಾಲ್ ಸಾಗರ್ ವಿಷ್ಣು ಇದೀಗ ಕಿರುತೆರೆಯ ಸೂಪರ್ ಸ್ಟಾರ್.

Watch Video: Nihal Sagar Vishnu dances for 'Hebbuli' song

ಕಿರುತೆರೆಯಲ್ಲಿ 'ಹೆಬ್ಬುಲಿ' ಘರ್ಜನೆ ನೋಡಲು ಮರೆಯದಿರಿ.!


'ಕಿಲಾಡಿ ಕುಟುಂಬ', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಿಹಾಲ್ ಸಾಗರ್ ವಿಷ್ಣು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿಯೂ ಅಭಿನಯಿಸುತ್ತಿದ್ದಾನೆ.


ನಿಹಾಲ್ ಸಾಗರ್ ವಿಷ್ಣು ಬಗ್ಗೆ ನಾವು ಇಷ್ಟೆಲ್ಲ ಹೇಳಲು ಕಾರಣ ಒಂದು ವಿಡಿಯೋ. ಸುದೀಪ್ ರವರ 'ಹೆಬ್ಬುಲಿ' ಚಿತ್ರದ 'ಎಣ್ಣೆ' ಹಾಡಿಗೆ ನಿಹಾಲ್ ಸಾಗರ್ ವಿಷ್ಣು ಹೆಜ್ಜೆ ಹಾಕಿದ್ದಾನೆ. ಅದು 'ಹೆಬ್ಬುಲಿ' ಕಿರುತೆರೆಯಲ್ಲಿ ಪ್ರೀಮಿಯರ್ ಆಗುತ್ತಿರುವ ಸಂದರ್ಭದಲ್ಲಿ ಅನ್ನೋದು ವಿಶೇಷ.''ಇದು ನನ್ನ ಫೇವರೆಟ್ ಹಾಡು. 'ಹೆಬ್ಬುಲಿ' ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ'' ಎಂದು ತಾನು ಡ್ಯಾನ್ಸ್ ಮಾಡಿರುವ ವಿಡಿಯೋ ಸಮೇತ ನಿಹಾಲ್ ಸಾಗರ್ ವಿಷ್ಣು ಟ್ವೀಟ್ ಮಾಡಿದ್ದಾನೆ.ಪುಟಾಣಿಯ ಡ್ಯಾನ್ಸ್ ನೋಡಿ ಸುದೀಪ್ ಕೂಡ ಖುಷಿ ಪಟ್ಟು ಹೊಗಳಿದ್ದಾರೆ.


ಅಂದ್ಹಾಗೆ, 'ಹೆಬ್ಬುಲಿ' ಸಿನಿಮಾ ಇಂದು ಸಂಜೆ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ತಪ್ಪದೇ ವೀಕ್ಷಿಸಿ....English summary
Watch Video: Nihal Sagar Vishnu dances for 'Hebbuli' song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada