»   » ಪರಿಮಳ 'ಗಗನ ಜಿಗಿತ' ಕಂಡು ಚಕಿತಗೊಂಡ ಜಗ್ಗೇಶ್

ಪರಿಮಳ 'ಗಗನ ಜಿಗಿತ' ಕಂಡು ಚಕಿತಗೊಂಡ ಜಗ್ಗೇಶ್

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ 'ಮೇಲುಕೋಟೆ ಮಂಜ' ಚಿತ್ರ ಬಿಡುಗಡೆ ನಂತರ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಎಲ್ಲೂ ಅವರ ಸುಳಿವೇ ಇಲ್ಲವಲ್ಲ. ಅನ್ನೋ ಪ್ರಶ್ನೆ ಹಲವರಿಗೆ ಕಾಡುತ್ತಿತ್ತು. ಅದಕ್ಕೆ ಉತ್ತರ ಇಲ್ಲಿದೆ.

ಅಂದಹಾಗೆ ಇತ್ತೀಚೆಗಷ್ಟೇ 33 ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ ಆಚರಿಸಿಕೊಂಡ ಜಗ್ಗೇಶ್ ಮತ್ತು ಪತ್ನಿ ಪರಿಮಳ ಜಗ್ಗೇಶ್ ಈಗ ಅಮೆರಿಕ ಪ್ರವಾಸದಲ್ಲಿದ್ದಾರೆ. ಇವರ ಅಮೆರಿಕ ಟೂರಿನ ಒಂದು ಇಂಟ್ರೆಸ್ಟಿಂಗ್ ಸುದ್ದಿ ಅಂದ್ರೆ ಪರಿಮಳ ಜಗ್ಗೇಶ್ 16,000 ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡಿರುವುದು.[33ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಜಗ್ಗೇಶ್-ಪರಿಮಳಾ]

ಅಮೆರಿಕ ಪ್ರವಾಸದಲ್ಲಿ ಜಗ್ಗೇಶ್-ಪರಿಮಳ ಜಗ್ಗೇಶ್ ದಂಪತಿ

ಪ್ರಸ್ತುತ ಪ್ರವಾಸದಲ್ಲಿರುವ ಜಗ್ಗೇಶ್ ಮತ್ತು ಪರಿಮಳ ಜಗ್ಗೇಶ್ ಅಮೆರಿಕದಲ್ಲಿನ ಸ್ನೇಹಿತರ ಮನೆಗೆ ಮತ್ತು ಅಲ್ಲಿನ ಸುಂದರವಾದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪರಿಮಳ ಜಗ್ಗೇಶ್ ತಮ್ಮ ಮಗ ಯತಿರಾಜ್ ಅವರೊಂದಿಗೆ ಅಮೆರಿಕದಲ್ಲಿರುವ ಸ್ಕೈಡೈವಿಂಗ್ ಸೆಂಟರ್ ಗೂ ಭೇಟಿ ನೀಡಿದ್ದರು.

ವರ್ಜಿನಿಯಾ ಸ್ಕೈಡೈವಿಂಗ್ ಸೆಂಟರ್ ಗೆ ಪರಿಮಳ ಜಗ್ಗೇಶ್ ಭೇಟಿ

ಪ್ರವಾಸ ಎಂಜಾಯ್ ಮಾಡಲು ಹೋಗಿರುವ ಪರಿಮಳ ಜಗ್ಗೇಶ್ ರವರು ಅಮೆರಿಕದಲ್ಲಿರುವ ವರ್ಜಿನಿಯಾ ಸ್ಕೈಡೈವಿಂಗ್ ಸೆಂಟರ್ ನ ವಿಎಸ್‌ಸಿ ವಿಮಾನ ಹತ್ತಿ, ಸ್ಕೈಡೈವಿಂಗ್ ನುರಿತರೊಂದಿಗೆ 16,000 ಅಡಿ ಎತ್ತರದಿಂದ ಜಿಗಿದು ಗಾಳಿಯಲ್ಲಿ ತೇಲಾಡಿ ಎಂಜಾಯ್ ಮಾಡಿದ್ದಾರೆ.

ಹೆದರದೇ ಗಾಳಿಯಲ್ಲಿ ಹಾರಾಡಿದ ಪರಿಮಳ ಜಗ್ಗೇಶ್

ಭೂಮಿಯಿಂದ 16.000 ಅಡಿ ಎತ್ತರದಿಂದ ವಿಮಾನ ಜಿಗಿದರು ಸ್ವಲ್ಪವು ಹೆದರದೇ ಸ್ಕೈಡೈವಿಂಗ್ ಮಾಡಿದ್ದಾರೆ ಪರಿಮಳ ಜಗ್ಗೇಶ್. ಗಾಳಿಯಲ್ಲಿ ತೇಲಾಡಿದ ಅನುಭವವನ್ನು ಹಂಚಿಕೊಂಡು ಅತ್ಯುದ್ಭುತವಾಗಿತ್ತು, ಆ ಸಂದರ್ಭವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವಾಗ ಸ್ವಲ್ಪವು ಹೆದರದೇ ಸ್ಮೈಲ್ ಮಾಡುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಪರಿಮಳ ಜಗ್ಗೇಶ್ ಗಗನ ಜಿಗಿತ ನೋಡಿ ಜಗ್ಗೇಶ್ ಶಾಕ್

ಇನ್ನೂ ಜಗ್ಗೇಶ್, ಪರಿಮಳ ಜಗ್ಗೇಶ್ ಅವರು 16,000 ಎತ್ತರದಿಂದ ಜಿಗಿದು ಗಾಳಿಯಲ್ಲಿ ತೇಲಾಡಿದ್ದನ್ನು ನೋಡಿ ಭಯ ಮತ್ತು ಆಶ್ಚರ್ಯ ಎರಡು ಆಯಿತು. ನಮ್ಮ ನರನಾಡಿಗಳು ಎಲ್ಲಾ ಶೇಕ್ ಎಂದು ತಮ್ಮ ಕಾಮಿಡಿ ಶೈಲಿಯಲ್ಲಿಯೇ ಟ್ವೀಟ್ ಮಾಡಿದ್ದಾರೆ.

ವಿಡಿಯೋ ನೋಡಿ

ಪರಿಮಳ ಜಗ್ಗೇಶ್ ವಿಮಾನದಿಂದ ಜಿಗಿದು ಸ್ಕೈಡೈವಿಂಗ್ ಮಾಡಿದ ಆ ಅದ್ಭುತ ವಿಡಿಯೋ ನೋಡಲು ಕ್ಲಿಕ್ ಮಾಡಿ.

English summary
Watch Video; Parimala Jaggesh Skydiving in America during trip.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada