twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಿಗರನ್ನ ಉದ್ದೇಶಿಸಿ ಸತ್ಯರಾಜ್ ಮಾಡಿದ ತಮಿಳು ಭಾಷಣದಲ್ಲಿ ಏನಿದೆ.?

    By ಒನ್ ಇಂಡಿಯಾ ಪ್ರತಿನಿಧಿ
    |

    ಇಂದು ಮಧ್ಯಾಹ್ನ 11.30 ರ ಸುಮಾರಿಗೆ ನಟ ಸತ್ಯರಾಜ್ ರವರಿಂದ ಒಂದು ವಿಡಿಯೋ ಸಂದೇಶ ಬಿಡುಗಡೆ ಆಯ್ತು. ಕೈಯಲ್ಲಿ ಬಿಳಿ ಹಾಳೆಯನ್ನ ಹಿಡಿದುಕೊಂಡು ತಮಿಳು ನಟ ಸತ್ಯರಾಜ್ ಪಟಪಟ ಅಂತ ತಮಿಳು ಭಾಷೆಯಲ್ಲಿ ಮಾತನಾಡಲು ಆರಂಭಿಸಿದರು. ಹಾಗೆ ನಟ ಸತ್ಯರಾಜ್ ಮಾತನಾಡಲು ಆರಂಭಿಸಿದ್ದು ಕನ್ನಡಿಗರ ಕುರಿತು...

    ಒಂಬತ್ತು ವರ್ಷಗಳ ಹಿಂದೆ ಕಾವೇರಿ ವಿವಾದಕ್ಕೆ ಸಂಬಂಧಿಸಿದ ಹೋರಾಟದಲ್ಲಿ ಕನ್ನಡಿಗರನ್ನ ನಿಂದಿಸಿದ್ದ ಕಟ್ಟಪ್ಪ ಅಲಿಯಾಸ್ ಸತ್ಯರಾಜ್ ಬಹಿರಂಗ ಕ್ಷಮೆ ಕೇಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದರು.[ಡಾ.ರಾಜ್ ಕುಮಾರ್ ಪುತ್ರ ಪುನೀತ್ ಗೆ ತಮಿಳರಿಂದ ಅಪಮಾನ.. ಅಗೌರವ.!]

    ಕನ್ನಡಿಗರ ಹೋರಾಟದ ಕಿಚ್ಚಿನ ಬಿಸಿ ಮುಟ್ಟಿರುವ ಕಾರಣ ಇಂದು ಕನ್ನಡಿಗರ ಮುಂದೆ ಸತ್ಯರಾಜ್ ತಲೆಬಾಗಿದ್ದಾರೆ. ತಮ್ಮ ತಮಿಳು ಭಾಷಣದಲ್ಲಿ ಕನ್ನಡಿಗರ ಕುರಿತು ನಟ ಸತ್ಯರಾಜ್ ಏನಂತ ಹೇಳಿದ್ದಾರೆ ಅಂತ ನಿಮಗೆ ಅರ್ಥವಾಗಿರದಿದ್ದರೆ, ಅವರ ಭಾಷಣದ ತರ್ಜುಮೆ ಇಲ್ಲಿದೆ ನೋಡಿ....

    9 ವರ್ಷದ ಹಿಂದಿನ ಘಟನೆ

    9 ವರ್ಷದ ಹಿಂದಿನ ಘಟನೆ

    ''9 ವರ್ಷಗಳ ಹಿಂದೆ ಕಾವೇರಿ ನೀರು ವಿವಾದದ ಗಲಾಟೆ ಸಂದರ್ಭದಲ್ಲಿ ಕರ್ನಾಟದಲ್ಲಿ ತಮಿಳರಿಗೆ ಸಮಸ್ಯೆಯಾಗಿತ್ತು. ತಮಿಳು ಚಿತ್ರಗಳನ್ನ ಬಿಡುಗಡೆ ಮಾಡದಂತೆ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ಕರ್ನಾಟದಲ್ಲಿ ಆದ ಪ್ರತಿಭಟನೆಗಳನ್ನ ವಿರೋಧಿಸಿ ತಮಿಳುನಾಡಿನಲ್ಲಿ ಹೋರಾಟ ಮಾಡಲಾಗಿತ್ತು. ಈ ಪ್ರತಿಭಟನೆಯಲ್ಲಿ ಹಲವರು ಆಕ್ರೋಶವಾಗಿ ಮಾತನಾಡಿದ್ದರು. ಅವರಲ್ಲಿ ನಾನು ಒಬ್ಬ'' - ಸತ್ಯರಾಜ್, ತಮಿಳು ನಟ [ಕನ್ನಡಿಗರನ್ನ ಉದ್ದೇಶಿಸಿ ಸತ್ಯರಾಜ್ ಮಾಡಿದ ತಮಿಳು ಭಾಷಣದಲ್ಲಿ ಏನಿದೆ.?]

    ನನ್ನ ಮಾತಿನಿಂದ ನೋವಾಗಿದೆ ಎಂಬ ಅರಿವಾಗಿದೆ

    ನನ್ನ ಮಾತಿನಿಂದ ನೋವಾಗಿದೆ ಎಂಬ ಅರಿವಾಗಿದೆ

    ''ನನ್ನ ಭಾಷಣದ ವಿರುದ್ಧವಾಗಿ ಕರ್ನಾಟದಲ್ಲಿ ನನ್ನ ಪ್ರತಿಕೃತಿ ದಹನ ಮಾಡಲಾಗಿದೆ. ಈ ವೇಳೆ ಕನ್ನಡ ಹೋರಾಟಗಾಗರು, ಕನ್ನಡ ನಾಯಕರು ಆಕ್ರೋಶದಿಂದ ಮಾತನಾಡಿದ್ದಾರೆ. ನಾನು ಆಗ ಮಾತನಾಡಿದ್ದ ಭಾಷಣದಿಂದ ಕನ್ನಡಿಗರಿಗೆ ನೋವುಂಟಾಗಿದೆ ಎಂಬ ಅರಿವು ನನಗೂ ಇದೆ'' - ಸತ್ಯರಾಜ್, ತಮಿಳು ನಟ[ಕನ್ನಡಿಗರನ್ನ ಹೀಯಾಳಿಸುತ್ತಿರುವ ತಮಿಳರು: ಟ್ವಿಟ್ಟರ್ ನಲ್ಲಿ ಘೋರ ಯುದ್ಧ.!]

    ನಾನು ಕನ್ನಡ ವಿರೋಧಿಯಲ್ಲ

    ನಾನು ಕನ್ನಡ ವಿರೋಧಿಯಲ್ಲ

    ''ನಾನು ಕನ್ನಡಿಗರ ವಿರೋಧಿಯಲ್ಲ. ಅದಕ್ಕೆ ಉದಾಹರಣೆ. 35 ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡುತ್ತಿರುವ ಶೇಖರ್ ಎಂಬುವವರ ತಾಯಿನಾಡು ಕನ್ನಡ. ಕಳೆದ 9 ವರ್ಷದಲ್ಲಿ 'ಬಾಹುಬಲಿ ಬಿಗಿನಿಂಗ್' ಸೇರಿದಂತೆ 32 ಚಿತ್ರಗಳು ಕರ್ನಾಟದಲ್ಲಿ ಬಿಡುಗಡೆಯಾಗಿವೆ. ಯಾವುದೇ ಸಮಸ್ಯೆಗಳು ಆಗಿರಲಿಲ್ಲ. ಕೆಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಲು ಕೂಡ ನನಗೆ ಕೇಳಿದ್ದರು. ಆದ್ರೆ, ಸಮಯವಿಲ್ಲದ ಕಾರಣ ನಾನು ಒಪ್ಪಿಕೊಂಡಿರಲಿಲ್ಲ'' - ಸತ್ಯರಾಜ್, ತಮಿಳು ನಟ [ಕನ್ನಡಿಗರ ಹೋರಾಟಕ್ಕೆ ಸಂದ ಜಯ: ಕಡೆಗೂ ತಲೆಬಾಗಿದ ಕಟ್ಟಪ್ಪ.!]

    ಕನ್ನಡಿಗರಿಗೆ ನೋವುಂಟಾಗಿರುವುದಕ್ಕೆ ವಿಷಾದಿಸುತ್ತೇನೆ

    ಕನ್ನಡಿಗರಿಗೆ ನೋವುಂಟಾಗಿರುವುದಕ್ಕೆ ವಿಷಾದಿಸುತ್ತೇನೆ

    ''9 ವರ್ಷದ ಹಿಂದೆ ನಾನು ಮಾತನಾಡಿದ್ದ ಈ ವಿಡಿಯೋವನ್ನ ಯ್ಯೂಟ್ಯೂಬ್ ನಲ್ಲಿ ನೋಡಿದ್ದು, ಅದರಿಂದ ಕನ್ನಡಿಗರಿಗೆ ನೋವುಂಟಾಗಿರುವುದರಿಂದ, ಆ ಮಾತುಗಳಿಗಾಗಿ 9 ವರ್ಷಗಳ ನಂತರ ನಾನು ಕನ್ನಡಿಗರಲ್ಲಿ ಮನಪೂರ್ವಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ'' - ಸತ್ಯರಾಜ್, ತಮಿಳು ನಟ[ಕನ್ನಡಿಗರ ಹೋರಾಟಕ್ಕೆ ಸಂದ ಜಯ: ಕಡೆಗೂ ತಲೆಬಾಗಿದ ಕಟ್ಟಪ್ಪ.!]

    ತಮಿಳು ಮಕ್ಕಳು ನನ್ನ ಮೇಲೆ ಬೇಸರವಾಗಬೇಡಿ

    ತಮಿಳು ಮಕ್ಕಳು ನನ್ನ ಮೇಲೆ ಬೇಸರವಾಗಬೇಡಿ

    ''ನನಗೆ ಧ್ವನಿಯಾಗಿರುವ ತಮಿಳು ಸಂಘಟನೆಗಳು, ನನ್ನ ನಂಬಿದ ನಿರ್ಮಾಪಕರು ಹಾಗೂ ತಮಿಳು ಮಕ್ಕಳು ನನ್ನ ಮೇಲೆ ಬೇಸರವಾಗಬೇಡಿ ಎಂದು ಕೇಳಿಕೊಳ್ಳುತ್ತೇನೆ. ಅವರೆಲ್ಲರಿಗೂ ನನ್ನದೊಂದು ಮಾಹಿತಿ. 'ಬಾಹುಬಲಿ' ಎಂಬ ದೊಡ್ಡ ಸಿನಿಮಾದಲ್ಲಿ ನಾನೊಬ್ಬ ಸಾಮಾನ್ಯ ಕೆಲಸಗಾರ. ನನ್ನೊಬ್ಬನಿಂದ ಸಾವಿರಾರು ಕೆಲಸಗಾರರ ಸಂಪಾದನೆಗೆ ಸಮಸ್ಯೆಯಾಗುವುದು ನನಗೆ ಇಷ್ಟವಿಲ್ಲ. ಅಷ್ಟೇ ಅಲ್ಲದೆ 'ಬಾಹುಬಲಿ' ಚಿತ್ರವನ್ನ ಕರ್ನಾಟಕದಲ್ಲಿ ವಿತರಣೆ ಮಾಡುವವರಿಗೂ ಕಷ್ಟವಾಗಬಾರದು ಎಂಬ ಜವಾಬ್ದಾರಿ ನನಗಿದೆ ಎಂದು ದಯವಿಟ್ಟು ತಿಳಿದುಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ'' - ಸತ್ಯರಾಜ್, ತಮಿಳು ನಟ

    ತಮಿಳರಿಗೆ ಸಮಸ್ಯೆ ಆದ್ರೆ ನಾನು ಧ್ವನಿಯಾಗುತ್ತೇನೆ

    ತಮಿಳರಿಗೆ ಸಮಸ್ಯೆ ಆದ್ರೆ ನಾನು ಧ್ವನಿಯಾಗುತ್ತೇನೆ

    ''ತಮಿಳರ ಸಮಸ್ಯೆ ಆದ್ರೂ ಸರಿ, ಕಾವೇರಿ ಸಮಸ್ಯೆ ಆದರೂ ಸರಿ, ರೈತರ ಸಮಸ್ಯೆ ಆದರೂ ಸರಿ, ತಮಿಳು ಮಕ್ಕಳ ಜೊತೆ ನ್ಯಾಯಸಮ್ಮತ ಹೋರಾಟಗಳಲ್ಲಿ ನಾನು ಧ್ವನಿಯಾಗಿ ಇದ್ದೇ ಇರುತ್ತೇನೆ ಎಂದು ತಿಳಿಸುತ್ತಿದ್ದೇನೆ'' - ಸತ್ಯರಾಜ್, ತಮಿಳು ನಟ

    ನಟ ಎನ್ನವುದಕ್ಕಿಂತ ನಾನೊಬ್ಬ ತಮಿಳಿಗ ಎನ್ನುವುದು ಹೆಮ್ಮೆ!

    ನಟ ಎನ್ನವುದಕ್ಕಿಂತ ನಾನೊಬ್ಬ ತಮಿಳಿಗ ಎನ್ನುವುದು ಹೆಮ್ಮೆ!

    ''ಈ ರೀತಿಯಾಗಿ ನಾನು ಧ್ವನಿಯಾಗುವುದರಿಂದ ಸತ್ಯರಾಜ್ ಅವರ ಜೊತೆ ಸಿನಿಮಾ ಮಾಡಿದ್ರೆ, ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದು ಎಂದು ನಿಮಗೆ ಅನಿಸಿದ್ರೆ ದಯವಿಟ್ಟು ಈ ಸಾಧರಣ, ಚಿಕ್ಕ ಕಲಾವಿದನ ಜೊತೆ ಸಿನಿಮಾಗಳನ್ನ ಮಾಡಲು ಒಪ್ಪಂದ ಮಾಡಿಕೊಳ್ಳಬೇಡಿ, ನನ್ನಿಂದ ನಷ್ಟ ಅನುಭವಿಸಿಬೇಡಿ ಎಂದು ತಾಳ್ಮೆಯಿಂದ ಕೇಳಿಕೊಳ್ಳುತ್ತಿದ್ದೇನೆ. ಯಾಕಂದ್ರೆ, ಒಬ್ಬ ಕಲಾವಿದನಾಗಿ ಇರುವುದಕ್ಕಿಂತ ಯಾವುದೇ ಮೂಡನಂಬಿಕೆ ಇಲ್ಲದೆ ಒಬ್ಬ ತಮಿಳಗನಾಗಿ ಇರುವುದೇ ನನಗೆ ಹೆಮ್ಮೆ ಮತ್ತು ಸಂತೋಷ''- ಸತ್ಯರಾಜ್, ತಮಿಳು ನಟ

    ನನ್ನ ವಿನಂತಿಯನ್ನ ಸ್ವೀಕರಿಸಿ

    ನನ್ನ ವಿನಂತಿಯನ್ನ ಸ್ವೀಕರಿಸಿ

    ''ನನ್ನ ಮನಪೂರ್ವಕ ವಿನಂತಿಯನ್ನ ಸ್ವೀಕರಿಸಿಕೊಂಡು 'ಬಾಹುಬಲಿ-2' ಚಿತ್ರವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅನುವು ಮಾಡಿಕೊಡಬೇಕೆಂದು ಕನ್ನಡಿಗರನ್ನ ವಿನಯದಿಂದ ಕೇಳಿಕೊಳ್ಳುತ್ತಿದ್ದೇನೆ'' - ಸತ್ಯರಾಜ್, ತಮಿಳು ನಟ

    'ಬಾಹುಬಲಿ' ಚಿತ್ರತಂಡಕ್ಕ ಧನ್ಯವಾದ

    'ಬಾಹುಬಲಿ' ಚಿತ್ರತಂಡಕ್ಕ ಧನ್ಯವಾದ

    ''ಈ ವಿಚಾರದಲ್ಲಿ ನನ್ನ ಜೊತೆಯಾಗಿದ್ದ ತಮಿಳು ಜನರು, ತಮಿಳು ಕಲಾವಿದರ ಸಂಘ, ನಿರ್ಮಾಪಕ ಹಾಗೂ ನಿರ್ದೇಶಕ ಸೇರಿದಂತೆ ಎಲ್ಲವರಿಗೂ ಧನ್ಯವಾದಗಳನ್ನ ತಿಳಿಸಿಕೊಳ್ಳುತ್ತೇನೆ. ನನ್ನಿಂದ ಆದ ಸಮಸ್ಯೆಯಿಂದ ನಿರ್ದೇಶಕ ರಾಜಮೌಳಿ, ನಿರ್ಮಾಪಕ ಶೋಬು, ಪ್ರಸಾದ್ ಹಾಗೂ ಬಾಹುಬಲಿ ಚಿತ್ರತಂಡದವರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ'' - ಸತ್ಯರಾಜ್, ತಮಿಳು ನಟ

    English summary
    Sathyaraj's speech addressing Kannadigas over 'Baahubali-2' release. Watch video here.
    Friday, April 21, 2017, 18:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X