»   » ಕಾಶ್ಮೀರದಲ್ಲಿ ಕುಳಿತು ಕನ್ನಡಿಗರನ್ನು ಕ್ಷಮೆ ಕೇಳಿದ ಕಿಚ್ಚ ಸುದೀಪ್

ಕಾಶ್ಮೀರದಲ್ಲಿ ಕುಳಿತು ಕನ್ನಡಿಗರನ್ನು ಕ್ಷಮೆ ಕೇಳಿದ ಕಿಚ್ಚ ಸುದೀಪ್

Posted By:
Subscribe to Filmibeat Kannada

ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಸರ್ಕಾರ ತಮಿಳು ನಾಡಿಗೆ ನೀರು ಹರಿಸಿದೆ. ಇದರಿಂದ ಆಕ್ರೋಶಗೊಂಡಿರುವ ನಾಡಿನ ರೈತರು, ಕನ್ನಡ ಪರ ಸಂಘಟನೆಗಳು ಇಂದು 'ಕರ್ನಾಟಕ ಬಂದ್' ಆಚರಿಸುತ್ತಿವೆ. 'ಕರ್ನಾಟಕ ಬಂದ್'ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

'ಕರ್ನಾಟಕ ಬಂದ್'ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬೆಂಬಲ ನೀಡಿದೆ. ಡಾ.ಶಿವರಾಜ್ ಕುಮಾರ್, ಹಂಸಲೇಖ, ಹರಿಪ್ರಿಯಾ, ಸಾ.ರಾ.ಗೋವಿಂದು ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಕಲಾವಿದರು ಶಿವಾನಂದ ಸರ್ಕಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.[ಕಾವೇರಿ ವಿವಾದದ ಬಗ್ಗೆ ಕಿಡಿ ಕಾರಿದ ದರ್ಶನ್-ಪ್ರೇಮ್-ಸುದೀಪ್]

ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ, 'ಹೆಬ್ಬುಲಿ' ಚಿತ್ರದ ಶೂಟಿಂಗ್ ನಿಮಿತ್ತ ಕಾಶ್ಮೀರದಲ್ಲಿ ಇರುವ ಕಿಚ್ಚ ಸುದೀಪ್, ಅಲ್ಲಿಂದಲೇ ವಿಡಿಯೋ ಸಂದೇಶ ಕಳುಹಿಸುವ ಮೂಲಕ 'ಕರ್ನಾಟಕ ಬಂದ್'ಗೆ ಬೆಂಬಲ ನೀಡಿದ್ದಾರೆ.

ಅನಿವಾರ್ಯ ಕಾರಣಗಳಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೇ ಇರುವುದಕ್ಕೆ ಕನ್ನಡಿಗರಿಗೆ ತಮ್ಮ ವಿಡಿಯೋ ಸಂದೇಶದ ಮೂಲಕ ಕಿಚ್ಚ ಸುದೀಪ್ ಕ್ಷಮೆ ಕೇಳಿದ್ದಾರೆ. ಓವರ್ ಟು ಸುದೀಪ್.....

ಸಂಪೂರ್ಣ ಬೆಂಬಲ ಇದೆ

''ಸಮಸ್ತ ಕನ್ನಡ ಜನತೆಗೆ, ಕರ್ನಾಟಕದ ಜನರಿಗೆ 'ಹೆಬ್ಬುಲಿ' ಚಿತ್ರತಂಡದ ಪರವಾಗಿ ನಾನು ಇಲ್ಲಿಂದ ನಮಸ್ಕಾರ ಹೇಳ್ತಾ, ಕಾವೇರಿ ಇಶ್ಯೂ ಏನು ನಡೆಯುತ್ತಿದೆ....ಅದಕ್ಕೆ ನಾವು ಸಂಪೂರ್ಣ ಬೆಂಬಲ ನೀಡ್ತಾಯಿದ್ದೇವೆ'' - ಸುದೀಪ್, ನಟ

ದಿಢೀರ್ ಅಂತ ಹೊರಡಲು ಆಗಲ್ಲ!

''ನಾವು ಶ್ರೀನಗರದ ಒಂದು ಹಳ್ಳಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ನಮಗೆ ಇಲ್ಲಿ ನೆಟ್ ವರ್ಕ್ ಸಿಗುತ್ತಿಲ್ಲ. ಟಿವಿ ಇಲ್ಲ. ಇಲ್ಲಿ ಯಾರೋ ಹೇಳಿದ್ಮೇಲೆ ಗೊತ್ತಾಯ್ತು. ದಿಢೀರ್ ಅಂತ ಹೊರಡಬೇಕು ಅಂದುಕೊಂಡರೂ ನಮಗೆ ಇಲ್ಲಿಂದ ಆಗೋದಿಲ್ಲ'' - ಸುದೀಪ್, ನಟ

ಕನ್ನಡಿಗರೇ..ಕ್ಷಮಿಸಿ...

''ಹೋರಾಟಕ್ಕೆ ನಾವು ಪಾಲ್ಗೊಳ್ಳುವುದಕ್ಕೆ ಆಗುತ್ತಿಲ್ಲ. ನಮನ್ನ ಕ್ಷಮಿಸಿ. ಆದರೆ ನಮ್ಮ ಜನ, ನೀರಿಗೆ ನಮ್ಮ ಸಹಕಾರ ಯಾವತ್ತೂ ಇದ್ದೇ ಇರುತ್ತೆ'' - ಸುದೀಪ್, ನಟ

ಸಪೋರ್ಟ್ ಸದಾ ಇರುತ್ತೆ

''ನಾವು ಅಲ್ಲಿ ಇಲ್ಲದೇ ಇರಬಹುದು. ಆದ್ರೆ, ನಮ್ಮ ಸಪೋರ್ಟ್ ಜನರಿಗೆ ಸದಾ ಇದ್ದೇ ಇರುತ್ತೆ'' - ಸುದೀಪ್, ನಟ

ನಮ್ಮದು...ನಮ್ಮದೇ...

''ನಮ್ಮದು ಯಾವತ್ತಿದ್ದರೂ ನಮ್ಮದೇ. ಆ ನಮ್ಮದು ಎನ್ನುವುದಕ್ಕೆ ನಾವು ಹೋರಾಡೋಣ'' - ಸುದೀಪ್, ನಟ

ನ್ಯಾಯ ಸಿಗುತ್ತದೆ

''ನ್ಯಾಯ ನಮಗೆ ಒದಗುತ್ತದೆ. ಅದಕ್ಕೆ ಅಂತ ಒಂದು ರೀತಿ ಇದೆ. ಆ ರೀತಿಯಲ್ಲಿ ಹೋಗೋಣ. ನ್ಯಾಯ ನಮಗೆ ಸಿಗುತ್ತೆ ಅಂತ ಖಂಡಿತ ನನಗೆ ನಂಬಿಕೆ ಇದೆ'' - ಸುದೀಪ್, ನಟ

ಮತ್ತೊಮ್ಮೆ ಕ್ಷಮೆ ಕೇಳುತ್ತಾ....

''ಅಲ್ಲಿ ನಿಮ್ಮ ಮಧ್ಯೆ ಇಲ್ಲದೇ ಇರುವುದಕ್ಕೆ ಮತ್ತೊಮ್ಮೆ ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ. ನಮ್ಮ ಸಪೋರ್ಟ್ ನಿಮಗೆ ಸಿಗುತ್ತೆ ಅಂತ 'ಹೆಬ್ಬುಲಿ' ಚಿತ್ರತಂಡದ ಪರವಾಗಿ ನಾನು ನಿಮ್ಮ ಬಳಿ ಹೇಳ್ತಿದ್ದೇನೆ'' - ಸುದೀಪ್, ನಟ

ವಿಡಿಯೋ

ಕಾಶ್ಮೀರದಿಂದ ಕಿಚ್ಚ ಸುದೀಪ್ ಕಳುಹಿಸಿರುವ ವಿಡಿಯೋ ಸಂದೇಶ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

English summary
Kannada Actor Kiccha Sudeep has apologized all Kannadigas for not taking part in Protest on Cauvery Water Dispute as he is in Kashmir, shooting for Kannada Movie 'Hebbuli'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada