For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: 'ಯಶ್-ರಾಧಿಕಾ ಪಂಡಿತ್' ನಿಶ್ಚಿತಾರ್ಥದ ಝಲಕ್

  By Bharath Kumar
  |

  ಸದ್ಯ, ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮದುವೆ ತಯಾರಿಯಲ್ಲಿದ್ದಾರೆ. ಇನ್ನೇನೂ ಮದುವೆಗೆ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಮದುವೆ ಮಂಟಪದಲ್ಲಿ ಈ ತಾರಾಜೋಡಿಯನ್ನ ನೋಡುವ ಕಾತುರದಲ್ಲಿರುವ ಅಭಿಮಾನಿಗಳಿಗೆ, ಅದಕ್ಕೂ ಮುಂಚೆ ಮತ್ತೊಂದು ಸೂಪರ್ ವಿಡಿಯೋ ನೋಡುವ ಅವಕಾಶ ಸಿಕ್ಕಿದೆ.

  ಹೌದು, 'ಯಶ್-ರಾಧಿಕಾ ಪಂಡಿತ್' ಅವರ ನಿಶ್ಚಿತಾರ್ಥವನ್ನ ಬರಿ ಫೋಟೋಗಳ ಮೂಲಕ, ಮೊಬೈಲ್ ವಿಡಿಯೋಗಳ ಮೂಲಕ ನೋಡಿ ಕಣ್ತುಂಬಿಕೊಂಡಿದ್ದ ಅಭಿಮಾನಿಗಳು, ಈಗ ಇವರಿಬ್ಬರ ಎಂಗೇಂಜ್ ಮೆಂಟ್ ವಿಡಿಯೋವನ್ನ ಸೂಪರ್ ಹೈ ಕ್ವಾಲಿಟಿಯಲ್ಲಿ ನೋಡಬಹುದಾಗಿದೆ. [ಚಿತ್ರಪಟ: ಎಂಗೇಜ್ ಆದ ಮಿ.ಅಂಡ್.ಮಿಸಸ್ ರಾಮಾಚಾರಿ]

  ಇದೇ ವರ್ಷ ಆಗಸ್ಟ್ 12 ರಂದು ಗೋವಾದ ಕಡಲತೀರದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತ್ತು. ಆ ದಿನ 'ವಧು-ವರ' ಹೇಗಿದ್ರು? ಹೇಗೆಲ್ಲಾ ತಯಾರಿಯಾಗಿದ್ರು, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿಯ ನಿಶ್ಚಿತಾರ್ಥದ ವಿಶೇಷತೆಗಳು ಹೇಗಿತ್ತು ಎಂಬುದನ್ನ ಈ ವಿಡಿಯೋ ಮೂಲಕ ನೋಡಿ.

  ಆಗಸ್ಟ್ 12 ರಂದು ನಿಶ್ಚಿತಾರ್ಥ ಆಗಿತ್ತು

  ಆಗಸ್ಟ್ 12 ರಂದು ನಿಶ್ಚಿತಾರ್ಥ ಆಗಿತ್ತು

  ಆಗಸ್ಟ್ 12, 2016 ವರಮಹಾಲಕ್ಷ್ಮಿ ಹಬ್ಬದಂದು ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಎಂಗೇಂಜ್ ಮೆಂಟ್ ಗೋವಾದಲ್ಲಿ ನೆರವೇರಿತ್ತು. ರಾಧಿಕಾ ಪಂಡಿತ್ ಅವರ ಕನಸಿನಂತೆ ನಿಶ್ಚಿತಾರ್ಥ ಆಗಿದ್ದು, ತುಂಬಾ ಅದ್ದೂರಿಯಾಗಿ, ತುಂಬಾ ವಿಶೇಷವಾಗಿತ್ತು.

  ಗೋವಾ ಸಮುದ್ರದ ಕಿನಾರೆಯಲ್ಲಿ ಎಂಗೇಂಜ್ ಮೆಂಟ್

  ಗೋವಾ ಸಮುದ್ರದ ಕಿನಾರೆಯಲ್ಲಿ ಎಂಗೇಂಜ್ ಮೆಂಟ್

  ಗೋವಾದ ಸಮುದ್ರದ ಕಿನಾರೆಯ ಬಳಿ ಹಾಕಿದ ಬಿಳಿ ಬಣ್ಣದ ಅದ್ಧೂರಿ ಸೆಟ್ ನಲ್ಲಿ 'ಯಶ್-ರಾಧಿಕಾ ಪಂಡಿತ್' ಅವರ ನಿಶ್ಚಿತಾರ್ಥ ಜರುಗಿತ್ತು. ಇಡೀ ನಿಶ್ಚಿತಾರ್ಥದ ಮಂಟಪ ಬಿಳಿ ಬಣ್ಣದಿಂದ ನವ ವಧುವಿನಂತೆ ಕಂಗೊಳಿಸಿತ್ತು. ಸುಮಾರು 28 ಬಗೆಯ ಖಾದ್ಯಗಳು ಈ ತಾರಾಜೋಡಿಯ ನಿಶ್ಚಿತಾರ್ಥದಲ್ಲಿ ತಯಾರು ಮಾಡಲಾಗಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ದಂಪತಿ, ರೆಬೆಲ್ ಸ್ಟಾರ್ ಅಂಬರೀಶ್ ದಂಪತಿ, ಯೋಗರಾಜ್ ಭಟ್, ಸಾಧುಕೋಕಿಲಾ, ಪುನೀತ್ ರಾಜ್ ಕುಮಾರ್, ಚಿಕ್ಕಣ್ಣ, ಸೇರಿದಂತೆ ಹಲವರು ತಾರೆಯರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.

  ಶೆರ್ವಾಣಿಯಲ್ಲಿ ಯಶ್-ಗೌನ್ ನಲ್ಲಿ ರಾಧಿಕಾ

  ಶೆರ್ವಾಣಿಯಲ್ಲಿ ಯಶ್-ಗೌನ್ ನಲ್ಲಿ ರಾಧಿಕಾ

  ಎಂಗೇಂಜ್ ಮೆಂಟ್ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಡು ನೀಲಿ ಬಣ್ಣದ ಶೆರ್ವಾಣಿಯಲ್ಲಿ ಮಿಂಚಿದ್ದರು. ರಾಧಿಕಾ ಕಡು ನೀಲಿ ಬಣ್ಣದ ಜೊತೆಗೆ ಬಿಳಿ ಚುಕ್ಕೆ ಇರುವ ಚೆಂದದ ಗೌನ್ ನಲ್ಲಿ ಕಂಗೊಳಿಸಿದ್ದರು.

  ಕಾಕ್ಟೈಲ್ ಪಾರ್ಟಿ ವೈಭವ

  ಕಾಕ್ಟೈಲ್ ಪಾರ್ಟಿ ವೈಭವ

  ನಿಶ್ಚಿತಾರ್ಥದ ಬಳಿಕ ಅಂದು ರಾತ್ರಿ ಅತಿಥಿಗಳಿಗೆ ಕಾಕ್ಟೈಲ್ ಪಾರ್ಟಿ ಏರ್ಪಡಿಸಲಾಗಿತ್ತು. ಈ ಪಾರ್ಟಿಯಲ್ಲಿ ಯಶ್ ಹಾಗೂ ರಾಧಿಕಾ, ರಾಜ-ರಾಣಿಯಂತೆ ಕಂಗೊಳಿಸಿದ್ದರು. ವೈಟ್ ಅಂಡ್ ಬ್ಲ್ಯಾಕ್ ಸೂಟ್ ನಲ್ಲಿ ಯಶ್ ಹಾಗೂ ಗುಲಾಬಿ ಬಣ್ಣದ ಗೌನ್ ನಲ್ಲಿ ರಾಧಿಕಾ ಕಾಣಿಸಿಕೊಂಡಿದ್ದರು.

  ಯಶ್-ರಾಧಿಕಾ ಡ್ಯಾನ್ಸ್

  ಯಶ್-ರಾಧಿಕಾ ಡ್ಯಾನ್ಸ್

  'ಯಶ್-ರಾಧಿಕಾ' ಅವರ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದ ಬಳಿಕ, ಇಬ್ಬರು ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ದಾರೆ. ಇದನ್ನ ಭುವನ್ ಗೌಡ ಅದ್ಬುತವಾಗಿ ಸೆರೆಹಿಡಿದಿದ್ದಾರೆ.

  ಭುವನ್ ಗೌಡ ಕ್ಯಾಮೆರಾ ಕೈ ಚಳಕ

  ಭುವನ್ ಗೌಡ ಕ್ಯಾಮೆರಾ ಕೈ ಚಳಕ

  ಯಶ್ ಮತ್ತು ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೋಗ್ರಫಿ ಸೇರಿದಂತೆ ವಿಡಿಯೋಗ್ರಫಿ ಇತ್ಯಾದಿ ಎಲ್ಲಾ ಜವಾಬ್ದಾರಿಯನ್ನು ಕ್ಯಾಮೆರಾ ಮೆನ್ ಭುವನ್ ಗೌಡ ಅವರು ವಹಿಸಿಕೊಂಡಿದ್ದರು. ಭುವನ್ ಗೌಡ ಅವರು ಕ್ಲಿಕ್ಕಿಸಿದ್ದ ಅದ್ಬುತ ಫೋಟೋಗಳನ್ನ ಎಲ್ಲರೂ ನೋಡಿದ್ವಿ. ಈಗ ಭುವನ್ ಸೆರೆಹಿಡಿದಿದ್ದ ಎಂಗೇಜ್ ಮೆಂಟ್ ವಿಡಿಯೋವನ್ನ ಯಶ್-ರಾಧಿಕಾ ಅವರ ಅಧೀಕೃತ ಫೇಸ್ ಬುಕ್ ಪೇಜ್ ಗೆ ಅಪಲೋಡ್ ಮಾಡಲಾಗಿದೆ.

  ವಿಡಿಯೋ ನೋಡಿ

  ವಿಡಿಯೋ ನೋಡಿ

  'ಯಶ್-ರಾಧಿಕಾ' ಪಂಡಿತ್ ಎಂಗೇಂಜ್ ಮೆಂಟ್ ವಿಡಿಯೋ ಇಲ್ಲಿದೆ ನೋಡಿ.

  English summary
  Here is a short glimpse of all the happiness & celebrations that transpired on August 12th during the engagement ceremony of Kannada super stars Yash & Radhika Pandit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X