For Quick Alerts
  ALLOW NOTIFICATIONS  
  For Daily Alerts

  ಬಂಡೀಪುರದಲ್ಲಿ ನಟ ಧನ್ವಿರ್ ನೈಟ್ ಸಫಾರಿ: ಅರಣ್ಯಾಧಿಕಾರಿ ಹೇಳಿದ್ದು ಏನು?

  |

  ನಟ ಧನ್ವೀರ್ ಇದ್ದಕ್ಕಿದ್ದಂತೆ ಇಂದು ಸುದ್ದಿಯಲ್ಲಿದ್ದಾರೆ. ನಟ ಧನ್ವೀರ್ ಅಭಯಾರಣ್ಯ ಬಂಡಿಪುರದಲ್ಲಿ ರಾತ್ರಿ ಸಮಯ ಸಫಾರಿ ಮಾಡಿದ್ದಾರೆ ಎಂಬುದೇ ಅವರು ಸುದ್ದಿಗೆ ಬರಲು ಕಾರಣ.

  Recommended Video

  D Boss ಫಾಲೋ ಮಾಡಲು ಹೋಗಿ ತಗಲಾಕೊಂಡ Dhanveer Gowda | Illegal Safari Video | Filmibeat Kannada

  ನಟ ಧನ್ವೀರ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಂಡಿಪುರದಲ್ಲಿ ಸಫಾರಿ ಮಾಡುವ ವೇಳೆ ಕಂಡು ಬಂದ ಹುಲಿ ಎಂಬ ಒಕ್ಕಣೆಯೊಂದಿಗೆ ಹುಲಿಯ ವಿಡಿಯೋವನ್ನು ಹಂಚಿಕೊಂಡಿದ್ದರು.

  ಬಂಡೀಪುರದಲ್ಲಿ ನಟ ಧನ್ವೀರ್ ರಾತ್ರಿ ಸಫಾರಿ: ಆಕ್ರೋಶಗೊಂಡ ಸಾರ್ವಜನಿಕರು!ಬಂಡೀಪುರದಲ್ಲಿ ನಟ ಧನ್ವೀರ್ ರಾತ್ರಿ ಸಫಾರಿ: ಆಕ್ರೋಶಗೊಂಡ ಸಾರ್ವಜನಿಕರು!

  ಆದರೆ ಬಂಡಿಪುರದಲ್ಲಿ ರಾತ್ರಿ ಸಮಯ ಸಫಾರಿ ಮಾಡುವುದು ಅಪರಾಧವಾಗಿದೆ. ರಾತ್ರಿ ಸಮಯ ಸಫಾರಿಯನ್ನು ನಿಷೇಧಿಸಲಾಗಿದೆ. ಆದರೆ ನಟ ಧನ್ವೀರ್ ರಾತ್ರಿ ಸಮಯ ಸಫಾರಿ ಮಾಡಿದ್ದು ಹೇಗೆ? ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಪರಿಸರ ಪ್ರೇಮಿಗಳಿಂದಲೂ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

  ವಿಡಿಯೋ ಡಿಲೀಟ್ ಮಾಡಿದ ನಟ ಧನ್ವೀರ್

  ವಿಡಿಯೋ ಡಿಲೀಟ್ ಮಾಡಿದ ನಟ ಧನ್ವೀರ್

  ವಿವಾದ ದೊಡ್ಡದಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ ಧನ್ವೀರ್, ನಾನು ಸಫಾರಿ ಮುಗಿಸಿ ವಾಪಸ್ ಬರುವ ವೇಳೆ ಹುಲಿ ಕಾಣಿಸಿತು, ನಾನು ಸುಮಾರು 6:30 ರ ವೇಳೆಗೆ ಸಫಾರಿ ಮುಗಿಸಿ ವಾಪಸ್ ಬರುತ್ತಿದ್ದೆ ಎಂದಿದ್ದಾರೆ ನಟ ಧನ್ವೀರ್.

  ಧನ್ವೀರ್‌ ಗೆ ರಾತ್ರಿ ಸಫಾರಿಗೆ ಅವಕಾಶ ನೀಡಿಲ್ಲ: ಅಧಿಕಾರಿ

  ಧನ್ವೀರ್‌ ಗೆ ರಾತ್ರಿ ಸಫಾರಿಗೆ ಅವಕಾಶ ನೀಡಿಲ್ಲ: ಅಧಿಕಾರಿ

  ಈ ಬಗ್ಗೆ ಬಂಡೀಪುರ ಅರಣ್ಯಾಧಿಕಾರಿ ಬಾಲಚಂದ್ರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ನಟ ಧನ್ವೀರ್‌ ಗೆ ರಾತ್ರಿ ಸಮಯ ಸಫಾರಿ ಮಾಡಲು ಇಲಾಖೆ ವತಿಯಿಂದ ಅನುಮತಿ ನೀಡಿರಲಿಲ್ಲ ಎಂದಿದ್ದಾರೆ.

  ಬಂಡೀಪುರದಲ್ಲಿ 5:30 ಕ್ಕೆ ಸಫಾರಿ ಅಂತ್ಯವಾಗುತ್ತದೆ

  ಬಂಡೀಪುರದಲ್ಲಿ 5:30 ಕ್ಕೆ ಸಫಾರಿ ಅಂತ್ಯವಾಗುತ್ತದೆ

  ಬಂಡೀಪುರದಲ್ಲಿ 5:30 ಕ್ಕೆ ಸಫಾರಿ ಅಂತ್ಯವಾಗುತ್ತದೆ. ಆದರೆ ಧನ್ವೀರ್ ಅವರು 6:30 ಕ್ಕೆ ಸಫಾರಿ ಮುಗಿಸಿ ವಾಪಸ್ ಬರುತ್ತಿದ್ದೆ ಎಂದಿದ್ದಾರೆ. ಈ ಬಗ್ಗೆ ವಿಸ್ತೃತವಾದ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ ಬಾಲಚಂದ್ರ.

  ಆನೆಯ ಮೇಲೆ ಕೂತು ಕಾನೂನು ಉಲ್ಲಂಘಿಸಿದ ಧನ್ವೀರ್

  ಆನೆಯ ಮೇಲೆ ಕೂತು ಕಾನೂನು ಉಲ್ಲಂಘಿಸಿದ ಧನ್ವೀರ್

  ಕಳೆದ ತಿಂಗಳಲ್ಲಿ ನಾಗರಹೊಳೆಗೆ ಭೇಟಿ ನೀಡಿದ್ದ ಧನ್ವೀರ್ ಆಗಲೂ ಸಹ ಆನೆಯ ಮೇಲೆ ಕುಳಿತುಕೊಂಡು ಚಿತ್ರ ತೆಗೆಸಿಕೊಂಡಿದ್ದರು. ಆ ಚಿತ್ರ ಸಹ ಈಗ ವೈರಲ್ ಆಗಿದೆ. ಕಾನೂನಿನ ಪ್ರಕಾರ ಆನೆಯ ಮೇಲೆ ಮಾವುತರು, ಕಾವಾಡಿಗಳು ಬಿಟ್ಟರೆ ಬೇರೆ ಯಾರೂ ಸಹ ಕೂರುವ ಹಾಗಿಲ್ಲ. ಅಲ್ಲಿಯೂ ಸಹ ಧನ್ವೀರ್ ಕಾನೂನು ಉಲ್ಲಂಘಿಸಿದ್ದಾರೆ.

  English summary
  Bandipura forest officer Balachandra said department did not given permission to Dhanveer to go for night safari in Bandipura.
  Saturday, October 24, 2020, 9:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X