Don't Miss!
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Sports
ಅರ್ಶ್ದೀಪ್ 'ನೋಬಾಲ್' ಎಸೆಯಲು ಕಾರಣ ವಿವರಿಸಿದ ಮೊಹಮ್ಮದ್ ಕೈಫ್
- Lifestyle
ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೈಷ್ಣವಿ ಹಾಗೂ ವಿದ್ಯಾಭರಣ್ ಮೊದಲು ಭೇಟಿಯಾದದ್ದು ಈಗಲ್ಲ, 2017ರಲ್ಲೇ; ವಿಷಯ ಬಿಚ್ಚಿಟ್ಟ ವೈಷ್ಣವಿ ತಾಯಿ
ಕಿರುತೆರೆ ನಟಿ ವೈಷ್ಣವಿ ಗೌಡ ವಿವಾಹವಾಗಲು ಮುಂದಾಗಿದ್ದ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ದೊಡ್ಡ ಮಟ್ಟದ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ. ಮೊದಲಿಗೆ ನಟಿ ವೈಷ್ಣವಿ ಗೌಡ ವಿದ್ಯಾಭರಣ್ ಎಂಬಾತನ ಜೊತೆ ಹಸೆಮಣೆ ಏರಲಿದ್ದಾರೆ, ಈ ಇಬ್ಬರ ನಿಶ್ಚಿತಾರ್ಥವೂ ಸಹ ನಡೆದಿದೆ ಎಂದು ಹಾರ ಬದಲಿಸಿಕೊಂಡಿದ್ದ ಫೋಟೊವೊಂದು ಹೊರಬಿದ್ದಿತ್ತು. ಆದರೆ ಈ ಫೋಟೊವನ್ನು ವೈಷ್ಣವಿ ಆಗಲಿ, ಅವರ ಕುಟುಂಬದವರಾಗಲಿ ಹಾಗೂ ವಿದ್ಯಾಭರಣ್ ಹಂಚಿಕೊಳ್ಳದೇ ಇದ್ದದ್ದರ ಕಾರಣದಿಂದಾಗಿ ನಿಶ್ಚಿತಾರ್ಥ ಗುಟ್ಟಾಗಿ ನಡೆದಿದೆ ಎಂದೂ ಸಹ ಮಾತುಗಳು ಕೇಳಿಬಂದವು.
ಹೀಗೆ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಬೆನ್ನಲ್ಲೇ ಕನ್ನಡದ ಯುಟ್ಯೂಬ್ ಚಾನೆಲ್ ಒಂದಕ್ಕೆ ಅನಾಮಧ್ಯೇಯ ಯುವತಿಯೋರ್ವಳು ಕರೆ ಮಾಡಿ ವೈಷ್ಣವಿಯವರು ಮದುವೆಯಾಗಲು ಮುಂದಾಗಿರುವ ಹುಡುಗ ವಿದ್ಯಾಭರಣ್ ಸರಿ ಇಲ್ಲ, ಅತ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನಗೂ ಸೇರಿ ಹಲವು ಹುಡುಗಿಯರಿಗೆ ಮದುವೆಯಾಗೋಣ ಎಂದೆಲ್ಲಾ ಸಂದೇಶ ಕಳುಹಿಸಿದ್ದ ಎಂದು ಕಟುವಾದ ಆರೋಪ ಮಾಡಿದ್ದಳು.
ಹೀಗೆ ಯುವತಿ ಮಾಡಿದ ಈ ಆರೋಪದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕುರಿತಾಗಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಬರೆದುಕೊಂಡಿದ್ದ ವೈಷ್ಣವಿ ಗೌಡ ಇಬ್ಬರ ಮಧ್ಯೆ ನಿಶ್ಚಿತಾರ್ಥ ನಡೆದಿಲ್ಲ, ಅದೊಂದು ಹುಡುಗಿ ನೋಡುವ ಕಾರ್ಯಕ್ರಮವಷ್ಟೇ, ಇದನ್ನು ಇಲ್ಲಿಗೇ ಬಿಟ್ಟುಬಿಡಿ ಎಂದು ತಿಳಿಸಿದ್ದರು. ಅತ್ತ ವಿದ್ಯಾಭರಣ್ ಕೂಡ ಇದು ಹುಡುಗಿ ನೋಡಿದ್ದ ಶಾಸ್ತ್ರವಷ್ಟೇ, ನಿಶ್ಚಿತಾರ್ಥ ನಡೆದಿಲ್ಲ ಎಂದು ತಿಳಿಸಿದ್ದರು. ಇನ್ನು ಈ ವಿವಾದ ದೊಡ್ಡ ಮಟ್ಟ ತಲುಪಿರುವ ಕಾರಣ ನಟಿ ವೈಷ್ಣವಿ ಗೌಡ ಪೋಷಕರು ಇಂದು ( ನವೆಂಬರ್ 26 ) ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ್ದಾರೆ. ಇದೇ ವೇಳೆ ಇಬ್ಬರಿಗೂ ಹೇಗೆ ಪರಿಚಯವಾಯಿತು ಎಂಬುದನ್ನೂ ಸಹ ಬಿಚ್ಚಿಟ್ಟಿದ್ದಾರೆ.

2017ರಲ್ಲಿ ಮೊದಲ ಭೇಟಿ
ಇನ್ನು ವಿದ್ಯಾಭರಣ್‌ಗೂ ಹಾಗೂ ವೈಷ್ಣವಿಗೂ ಹೇಗೆ ಪರಿಚಯ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡಿತ್ತು. ಇದಕ್ಕೆ ಸುದ್ದಿಗೋಷ್ಟಿಯ ಆರಂಭದಲ್ಲೇ ಉತ್ತರವನ್ನು ವೈಷ್ಣವಿ ತಾಯಿ ನೀಡಿದ್ದಾರೆ. ಮೊದಲಿಗೆ 2017ರಲ್ಲಿ 'ಚಾಕೋಲೇಟ್ ಬಾಯ್' ಎಂಬ ಚಿತ್ರ ಆರಂಭವಾಗಿತ್ತು, ಈ ಚಿತ್ರದ ಮುಹೂರ್ತ ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದಲ್ಲಿ ನಡೆದಿತ್ತು, ಈ ಚಿತ್ರದ ಮೂಲಕ ನಮ್ಮ ಹಾಗೂ ವಿದ್ಯಾಭರಣ್ ಕುಟುಂಬ ಪರಸ್ಪರ ಭೇಟಿ ಆಗಿತ್ತು ಎಂದು ವೈಷ್ಣವಿ ತಾಯಿ ತಿಳಿಸಿದರು. ಇನ್ನು ಈ ಚಿತ್ರ ಸುಮಾರು ಒಂಬತ್ತು ದಿನಗಳ ಕಾಲ ಚಿತ್ರೀಕರಣ ನಡೆದ ನಂತರ ನಿಂತುಹೋಯಿತು ಎಂಬುದನ್ನೂ ಸಹ ತಿಳಿಸಿದರು.

ಬಿಗ್ ಬಾಸ್ ಮೂಲಕ ವೈಷ್ಣವಿ ಮೆಚ್ಚಿಕೊಂಡಿದ್ದ ವಿದ್ಯಾಭರಣ್ ಕುಟುಂಬ
ಹೀಗೆ 2017ರಲ್ಲಿ ಪರಿಚಯವಾಗಿದ್ದ ವೈಷ್ಣವಿ ಗೌಡ ಅವರನ್ನು ತಮ್ಮ ಮನೆಯ ಸೊಸೆಯನ್ನಾಗಿ ಮಾಡಬೇಕು ಎಂದು ವಿದ್ಯಾಭರಣ್ ಕುಟುಂಬದವರು ಚಿಂತಿಸಿದ್ದು 2021ರಲ್ಲಿ. ಹೌದು, ಒಂಬತ್ತನೇ ಆವೃತ್ತಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ವೈಷ್ಣವಿ ಗೌಡ ಅವರ ನಡವಳಿಕೆಯನ್ನು ಮೆಚ್ಚಿಕೊಂಡಿದ್ದ ವಿದ್ಯಾಭರಣ್ ಕುಟುಂಬ ವೈಷ್ಣವಿಯನ್ನು ಮನೆ ಸೊಸೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದರು ಎಂದು ವೈಷ್ಣವಿ ತಾಯಿ ತಿಳಿಸಿದರು.

ವೈಷ್ಣವಿ ಬ್ಯುಸಿ ಇದ್ದ ಕಾರಣ ಇಷ್ಟು ದಿನಗಳವರೆಗೆ ಮುಂದೂಡಿಕೆ
ಹೀಗೆ ವಿದ್ಯಾಭರಣ್ ಮನೆಯಿಂದ ಇಬ್ಬರಿಗೂ ವಿವಾಹ ಮಾಡುವ ಬಗ್ಗೆ ಪ್ರಸ್ತಾಪ ಬಂದಾಗ ಎರಡೂ ಕುಟುಂಬದವರೂ ಸಹ ಇಬ್ಬರ ಜಾತಕವನ್ನು ನೋಡಿದ್ದಾಗಿ ಹಾಗೂ ಜಾತಕ ಹೊಂದಿಕೊಂಡಿದ್ದಾಗಿಯೂ ವೈಷ್ಣವಿ ತಾಯಿ ತಿಳಿಸಿದರು. ಆದರೆ ವೈಷ್ಣವಿ ತನಗೆ ಹಲವಾರು ಕೆಲಸಗಳಿರುವ ಕಾರಣ ಇನ್ನೊಂದಷ್ಟು ದಿನ ಮದುವೆ ವಿಷಯ ಬೇಡ ಎಂದು ತಡೆ ಹಿಡಿದಿದ್ದರು ಎಂಬುದನ್ನೂ ಸಹ ಅವರ ತಾಯಿ ಇದೇ ವೇಳೆ ತಿಳಿಸಿದರು.

ಹುಡುಗಿ ನೋಡಲು ಬಂದಿದ್ರು ವಿದ್ಯಾಭರಣ್ ಕುಟುಂಬ
ಆದರೆ ಇತ್ತೀಚೆಗಷ್ಟೆ ಇನ್ನೆಷ್ಟು ದಿನ ತಡ ಮಾಡುವುದು, ಮದುವೆ ಕಾರ್ಯಗಳನ್ನು ಆರಂಭಿಸೋಣ ಎಂದು ವೈಷ್ಣವಿ ಹಾಗೂ ವಿದ್ಯಾಭರಣ್ ಇಬ್ಬರ ಒಪ್ಪಿಗೆ ಮೇರೆಗೆ ಹುಡುಗಿ ನೋಡುವ ಶಾಸ್ತ್ರ ಹಮ್ಮಿಕೊಂಡೆವು, ನವೆಂಬರ್ 11ರಂದು ಅವರ ಮನೆಯವರು ನಮ್ಮ ಮನೆಗೆ ಬಂದರು ಇದೇ ಕಾರ್ಯಕ್ರಮದಲ್ಲಿ ತೆಗೆದ ಫೋಟೊವದು ಎಂದು ವೈಷ್ಣವಿ ತಾಯಿ ಹೇಳಿದರು. ಇನ್ನು ತಾವೂ ಸಹ ಹುಡುಗನ ಮನೆಗೆ ಹೋಗಬೇಕಿತ್ತು. ಆದರೆ ಕಾರಾಣಾಂತರಗಳಿಂದ ಹೋಗುವುದನ್ನು ಮುಂದೂಡಿದ್ದೆವು, ಮುಂದಿನ ಭಾನುವಾರ ಹೋಗೋಣ ಎಂದು ಯೋಜನೆ ರೂಪಿಸಿದ್ದೆವು ಅಷ್ಟರಲ್ಲಿ ಹೀಗೆಲ್ಲಾ ನಡೆದು ಹೋಯಿತು ಎಂದು ತಿಳಿಸಿದರು.