For Quick Alerts
  ALLOW NOTIFICATIONS  
  For Daily Alerts

  ಸುದೀಪ್ 16 ಕೆಜಿ ತೂಕ ಇಳಿಸಿಕೊಳ್ಳಲು ಕಾರಣ ಯಾರು.?

  |
  ಪೈಲ್ವಾನ್ ಸಿನಿಮಾಗಾಗಿ ಬಾರಿ ತೂಕವನ್ನ ಇಳಿಸಿಕೊಂಡ ಕಿಚ್ಚ ಸುದೀಪ್ | FILMIBEAT KANNADA

  ಸುದೀಪ್ ಅಭಿನಯಿಸುತ್ತಿರುವ 'ಪೈಲ್ವಾನ್' ಸಿನಿಮಾ ಭಾರಿ ಕುತೂಹಲ ಮೂಡಿಸುತ್ತಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಭರ್ಜರಿ ಸೆಟ್ ಹಾಕಲಾಗಿದೆ. ಕುಸ್ತಿ ಅಖಾಡ, ಬಾಕ್ಸಿಂಗ್ ವೇದಿಕೆ, ಹೀಗೆ ಅದ್ಧೂರಿಯಾಗಿ ಮೇಕಿಂಗ್ ಮಾಡಲಾಗುತ್ತಿದೆ.

  ಎಲ್ಲರಿಗೂ ಗೊತ್ತಿರುವಾಗೆ ಈ ಸಿನಿಮಾದಲ್ಲಿ ಸುದೀಪ್ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಜಿಮ್ ನಲ್ಲಿ ಕಸರತ್ತು ಮಾಡಿರುವ ಅಭಿನಯ ಚಕ್ರವರ್ತಿ ತಮ್ಮ ದೇಹವನ್ನ ತುಂಬಾ ದೊಡ್ಡ ಮಟ್ಟದಲ್ಲಿ ಸಿದ್ಧಮಾಡಿದ್ದಾರೆ.

  ಪುನೀತ್ ಕಡೆಯಿಂದ ಬಂದ ಸುದ್ದಿ ಕೇಳಿ ದೀಪಾವಳಿ ಆಚರಿಸ್ತಾರಂತೆ ಸುದೀಪ್

  ಇಷ್ಟು ದಿನ ಒಂದು ಲೆಕ್ಕ, ಇನ್ಮುಂದೆ ಲೆಕ್ಕ ಎನ್ನುತ್ತಿರುವ ಸುದೀಪ್ 'ಪೈಲ್ವಾನ್' ಪಾತ್ರಕ್ಕಾಗಿ ಭಾರಿ ತೂಕ ಇಳಿಸಿಕೊಂಡಿದ್ದಾರೆ. ಹಾಗಿದ್ರೆ, ಸುದೀಪ್ ತೂಕವೆಷ್ಟು.? ಪೈಲ್ವಾನ್ ಗಾಗಿ ಎಷ್ಟು ಕೆಜಿ ತೂಕ ಕಳೆದುಕೊಂಡಿದ್ದಾರೆ.? ಸುದೀಪ್ ಅವರ ಈ ಪ್ರಯತ್ನಕ್ಕೆ ಸ್ಫೂರ್ತಿ ನೀಡಿದ್ದು ಯಾರು.? ಮುಂದೆ ಓದಿ.....

  16 ಕೆಜಿ ತೂಕ ಇಳಿಕೆ

  16 ಕೆಜಿ ತೂಕ ಇಳಿಕೆ

  ಇಷ್ಟು ದಿನ ಸುದೀಪ್ ಯಾವ ಚಿತ್ರಕ್ಕಾಗಿಯೂ ಇಷ್ಟೊಂದು ದೇಹ ದಂಡಿಸಿರಲಿಲ್ಲ. ಇದೇ ಮೊದಲ ಭಾರಿಗೆ ಜಿಮ್ ನಲ್ಲಿ ಭಾರಿ ಕಸರತ್ತು ಮಾಡಿರುವ ಸುದೀಪ್ ಬರೋಬ್ಬರಿ 16 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸದ್ಯ, ಸುದೀಪ್ 73 ಕೆಜಿ ತೂಕ ಇದ್ದಾರೆ.

  'ಪೈಲ್ವಾನ್' ಗರಡಿಯಲ್ಲಿ ಸಿದ್ಧವಾಗಿದೆ 'ಕೆಜಿಎಫ್' ಮೀರಿಸುವ ತಂತ್ರ.!

  ಈ ಮೊದಲು ಎಷ್ಟಿದ್ದರು.?

  ಈ ಮೊದಲು ಎಷ್ಟಿದ್ದರು.?

  ಪೈಲ್ವಾನ್ ಚಿತ್ರಕ್ಕಾಗಿ 16 ಕೆಜಿ ತೂಕ ಕಡಿಮೆ ಮಾಡಿಕೊಂಡಿರುವ ಸುದೀಪ್ ಈ ಹಿಂದೆ 89 ಕೆಜಿ ಇದ್ದರು. ಬಟ್, ಈಗ ಇಷ್ಟೊಂದು ಸ್ಲಿಮ್ ಆಗಿರುವುದಕ್ಕೆ ಕೆಲವು ಖುಷಿ ವ್ಯಕ್ತಪಡಿಸಿದ್ರೆ, ಮತ್ತೆ ಕೆಲವರು ವಿರೋಧಿಸುತ್ತಿದ್ದಾರೆ. ಸುದೀಪ್ ಅವರ ತುಂಬಾ ಸಣ್ಣ ಆಗಿದ್ದಾರೆ. ಬೇಡ, ಅವರು ಮೊದಲು ಇದ್ಹಾಗೆ, ಇರಲಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾ ಎಂದು ಬಂದಾಗ, ಇದೆಲ್ಲಾ ಮಾಡಬೇಕು ಎನ್ನುವುದು ಚಿತ್ರಪ್ರೇಮಿಗಳ ಮಾತು.

  ಹಾಲಿವುಡ್ ಚಿತ್ರವನ್ನ ಕೈಬಿಟ್ರಾ 'ಬಿಗ್ ಬಾಸ್'.! ಏನಿದು 'ರೈಸನ್' ರಹಸ್ಯ.?

  ಸೊಂಟದ ಅಳತೆಯೂ ಸಣ್ಣವಾಗಿದೆ

  ಸೊಂಟದ ಅಳತೆಯೂ ಸಣ್ಣವಾಗಿದೆ

  16 ಕೆಜಿ ತೂಕ ಇಳಿಸಿಕೊಂಡಿರುವ ಕಾರಣ ಸುದೀಪ್ ಅವರ ಸೊಂಟದ ಅಳತೆ ಕೂಡ ಚಿಕ್ಕದಾಗಿದೆ. ಈ ಹಿಂದೆ 36 ಇದ್ದ ಸುದೀಪ್ ಸೊಂಟ ಈಗ 31.5 ಆಗಿದೆ. ಇದನ್ನ ಗಮನಿಸಿದ್ರೆ, ಪೈಲ್ವಾನ್ ಚಿತ್ರಕ್ಕಾಗಿ ಕಿಚ್ಚ ಎಷ್ಟರ ಮಟ್ಟಿಗೆ ಹಾರ್ಡ್ ವರ್ಕ್ ಮಾಡ್ತಿದ್ದಾರೆ ಎಂಬುದು ಗೊತ್ತಾಗ್ತಿದೆ.

  ಇತಿಹಾಸ ಸೃಷ್ಟಿಸಿದ 'ದಿ ವಿಲನ್': ದಾಖಲೆ ಬೆಲೆಗೆ ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್.!

  ಕಿಚ್ಚನಿಗೆ ಸ್ಫೂರ್ತಿ ನೀಡಿದ್ದು ಯಾರು.?

  ಕಿಚ್ಚನಿಗೆ ಸ್ಫೂರ್ತಿ ನೀಡಿದ್ದು ಯಾರು.?

  ಸುದೀಪ್ ಈ ಹಿಂದೆ ಹೇಳಿರುವಂತೆ ಈ ಮಟ್ಟಿಗೆ ದೇಹ ದಂಡಿಸುಲು ಈ ಹಿಂದೆ ಯಾವತ್ತು ಧೈರ್ಯ ಮಾಡಿರಲಿಲ್ಲ. ಆದ್ರೀಗ, ಗಟ್ಟಿ ಮನಸ್ಸು ಮಾಡಲು ಕಾರಣ ಸಿನಿಮಾ ಕಥೆ. ಹೀಗಿದ್ದರೂ, ಸುದೀಪ್ ಅವರಿಗೆ ಖಳನಟ ಕಬೀರ್ ದುಹಾನ್ ಸಿಂಗ್ ಅವರು ಸ್ಫೂರ್ತಿ ನೀಡಿದ್ದಾರಂತೆ. ಸುದೀಪ್ ಅವರನ್ನ ಬಾಡಿಬಿಲ್ಡ್ ಮಾಡಲು ಕಬೀರ್ ಪ್ರೋತ್ಸಾಹಿಸಿದ್ದಾರೆ. ಎಂದು ಸ್ವತಃ ಸುದೀಪ್ ಥ್ಯಾಂಕ್ಸ್ ಹೇಳಿದ್ದಾರೆ.

  ದರ್ಶನ್-ರಾಕ್ಲೈನ್ ಚಿತ್ರಕ್ಕಾಗಿ ಸುದೀಪ್ ಇಷ್ಟೊಂದು ತ್ಯಾಗಕ್ಕೆ ಸಿದ್ಧವಾದ್ರಾ.?

  9 ಭಾಷೆಗಳಲ್ಲಿ ಸುದೀಪ್ ಪೈಲ್ವಾನ್.!

  9 ಭಾಷೆಗಳಲ್ಲಿ ಸುದೀಪ್ ಪೈಲ್ವಾನ್.!

  ಸದ್ಯದ ಮಾಹಿತಿ ಪ್ರಕಾರ ಪೈಲ್ವಾನ್ ಸಿನಿಮಾ ಭಾರತದ ಒಂಭತ್ತು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಮರಾಠಿ, ಪಂಜಾಬಿ, ಬೋಜ್ ‍ಪುರಿ (ಬಿಹಾರದ ಭಾಷೆ), ಬೆಂಗಾಲಿಯಲ್ಲಿ ಪೈಲ್ವಾನ್ ತೆರೆ ಕಾಣಲಿದೆ. ಹೆಬ್ಬುಲಿ ಖ್ಯಾತಿಯ ಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

  English summary
  Kannada actor kiccha sudeep has loss 16 kg weight for pailwaan movie. now sudeep weight is 73 kg

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X