For Quick Alerts
  ALLOW NOTIFICATIONS  
  For Daily Alerts

  ಉಪ್ಪಿ- ಪ್ರೇಮಾ ಲವ್ವಿ ಡವ್ವಿ? 'ಉಪೇಂದ್ರ' ಸಿನಿಮಾ ಶೂಟಿಂಗ್ ಸಮಯದಲ್ಲಿ ಆಗಿದ್ದೇನು? ಮೌನ ಮುರಿದ ಪ್ರೇಮಾ

  By Film Desk
  |

  ಕನ್ನಡದ ಪ್ರತಿಭಾನ್ವಿತ ಕಲಾವಿದೆ ಪ್ರೇಮಾ. 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದ ಈ ಚೆಲುವೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲೂ ಪ್ರೇಮಾ ಮೋಡಿ ಮಾಡಿದ್ದರು. 'ಉಪೇಂದ್ರ ಮತ್ತೆ ಹುಟ್ಟಿ ಬಾ' ಹಾಗೂ 'ವೆಡ್ಡಿಂಗ್ ಗಿಫ್ಟ್' ಸಿನಿಮಾಗಳ ಮೂಲಕ ಸೆಕೆಂಡ್ ಇನ್ನಿಂಗ್ ಆರಂಭಿಸಿದ್ದರು.

  ಪ್ರೇಮಾ ಅಂದಾಕ್ಷಣ ಕನ್ನಡ ಸಿನಿ ರಸಿಕರಿಗೆ ಮೊದಲು ನೆನಪಾಗುವ ಸಿನಿಮಾ 'ಓಂ'. ಅದಾಗಲೇ 'ಸವ್ಯಸಾಚಿ' ಚಿತ್ರದಲ್ಲಿ ನಟಿಸಿದ್ದ ಪ್ರೇಮಾಗೆ ಉಪೇಂದ್ರ ನಿರ್ದೇಶನದ ಈ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಇದೇ ಸಿನಿಮಾ ತೆಲುಗಿಗೆ ರೀಮೆಕ್ ಆದಾಗ ರಾಜಶೇಖರ್ ಜೋಡಿಯಾಗಿ ಅಲ್ಲೂ ನಾಯಕಿಯಾಗಿ ನಟಿಸಿದ್ದರು. ಇನ್ನು 'ಉಪೇಂದ್ರ' ಎನ್ನುವ ಟೈಟಲ್‌ನಲ್ಲಿ ರಿಯಲ್ ಸ್ಟಾರ್ ಒಂದು ಸಿನಿಮಾ ನಿರ್ದೇಶಿಸಿ ನಟಿಸಿದ್ದರು. ಚಿತ್ರದ ಮೂವರು ನಾಯಕಿಯರಲ್ಲಿ ಒಬ್ಬರಾಗಿ ಪ್ರೇಮಾ ಬಣ್ಣ ಹಚ್ಚಿದ್ದರು. ಆ ಸಮಯದಲ್ಲಿ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಬಹಳ ವರ್ಷಗಳ ನಂತರ ಈ ಬಗ್ಗೆ ಪ್ರೇಮಾ ಮೌನ ಮುರಿದಿದ್ದಾರೆ.

  ಉಪ್ಪಿಗೂ 'ಕಾಂತಾರ'ದಂತಹ ಸಿನಿಮಾ ಮಾಡೋ ಆಸೆ: ಶೀಘ್ರದಲ್ಲೇ ರಿಷಬ್ ಜೊತೆ ಚರ್ಚೆ!ಉಪ್ಪಿಗೂ 'ಕಾಂತಾರ'ದಂತಹ ಸಿನಿಮಾ ಮಾಡೋ ಆಸೆ: ಶೀಘ್ರದಲ್ಲೇ ರಿಷಬ್ ಜೊತೆ ಚರ್ಚೆ!

  ಇತ್ತೀಚೆಗೆ ತೆಲುಗು ವಾಹಿನಿವೊಂದಕ್ಕೆ ನಟಿ ಪ್ರೇಮಾ ವಿಶೇಷ ಸಂದರ್ಶನ ನೀಡಿದ್ದಾರೆ. ಆ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಸಿನಿಜರ್ನಿ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಚಿತ್ರರಂಗ ಹಾಗೂ ಕುಟುಂಬ ಸದಸ್ಯರು ನೀಡಿದ ಬೆಂಬಲವನ್ನು ಸ್ಮರಿಸಿದ್ದಾರೆ.

  ಉಪೇಂದ್ರ ಜೊತೆ ಲವ್ವಿಡವ್ವಿ?

  ಉಪೇಂದ್ರ ಜೊತೆ ಲವ್ವಿಡವ್ವಿ?

  ಒಂದಷ್ಟು ಸಿನಿಮಾಗಳಲ್ಲಿ ನಟ-ನಟಿಯರ ನಡುವೆ ಒಳ್ಳೆ ಕೆಮೆಸ್ಟ್ರಿ ಇದ್ದರೆ ಅವರಿಬ್ಬರ ಬಗ್ಗೆ ಸಾಕಷ್ಟು ರೂಮರ್ಸ್ ಕೇಳಿ ಬರುತ್ತದೆ. ಉಪೇಂದ್ರ ಹಾಗೂ ನಿಮ್ಮ ಬಗ್ಗೆಯೂ ಸಾಕಷ್ಟು ವದಂತಿ ಕೇಳಿ ಬಂದಿತ್ತು, ಅದನ್ನು ನೀವು ಹೇಗೆ ಎದುರಿಸಿದ್ದೀರಿ, ಅದೆಲ್ಲಾ ಬರೀ ವದಂತಿ ಮಾತ್ರ ಅಲ್ವಾ ಎನ್ನುವ ನಿರೂಪಕಿ ಪ್ರಶ್ನೆಗೆ "ಹೌದು, ಅದೆಲ್ಲಾ ಬರೀ ವದಂತಿ, ಈಗ ನೀವು ಕೂಡ ಕೆಲಸ ಮಾಡುತ್ತಿರುತ್ತೀರಾ, ಗಾಸಿಪ್‌ ಕೇಳಿಬಂದಾಗ ಒಬ್ಬ ಮಹಿಳೆಯಾಗಿ ಹೇಗೆ ಎದುರಿಸುತ್ತೀರಿ? ಅದೇ ರೀತಿ ನಾನು ಕೂಡ ಎದುರಿಸಿದೆ. ಅವರು ಮಾತನಾಡುತ್ತಾರೆ ಬಿಡಿ, ಅವರನ್ನು ಮಾತನಾಡಲು ಬಿಡೋಣ, ನನ್ನ ಫೋಕಸ್ ಏನು ಅದನ್ನು ನೋಡಿಕೊಂಡು ಹೋಗುತ್ತೇನೆ."

  ನಾನು ಏನು ಎಂದು ಆ ದೇವರಿಗೆ ಗೊತ್ತು

  ನಾನು ಏನು ಎಂದು ಆ ದೇವರಿಗೆ ಗೊತ್ತು

  "ನಾನು ಯಾವತ್ತೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಯಾರು ಏನೇನೋ ಮಾತನಾಡಿದ್ದಾರೆ. ಅದಕ್ಕೆಲ್ಲಾ ಕೇರ್ ಮಾಡಲಿಲ್ಲ. ನಾನು ಕೆಲಸ ಮಾಡಬೇಕು. ನನಗೆ 100% ರಿಸಲ್ಟ್ ಬೇಕು ಅಷ್ಟೆ. ಆ ಭರವಸೆ ನನಗಿದೆ. ನನ್ನ ಪೋಷಕರು ಜೊತೆಗೆ ಇದ್ದಾರೆ. ನಾನು ಏನು ಎಂದು ಆ ದೇವರಿಗೆ ಗೊತ್ತು. ನಾನು ಯಾವುದರ ಬಗ್ಗೆಯೂ ಯೋಚಿಸಲ್ಲ. ಅವರು ಮಾತನಾಡುವುದು ಮಾತನಾಡಲಿ. ಹುಡುಗಿಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಯಾರು ಬಂದು ಮಾತನಾಡಿಸಿದರೆ ಸಾಕು ಇಬ್ಬರ ನಡುವೆ ಏನಿದೆ ಎಂದು ಗಾಸಿಪ್ ಮಾಡುತ್ತಾರೆ. ಗಾಸಿಪ್ ಗಾಸಿಪ್ ಅಷ್ಟೆ. ನಾವಿಬ್ಬರು ಕೂತು ಮಾತನಾಡಿದರೆ ಅದು ಬೇರೆ ತರಹವೇ ಇರುತ್ತದೆ. ನನಗೆ ಸಿನಿಮಾ ಪಾತ್ರ ಮುಖ್ಯ. ಅದನ್ನು ಪ್ರೀತಿಸುತ್ತೇನೆ. ಚಿತ್ರರಂಗ ಅಂತ ಮಾತ್ರವಲ್ಲ. ಕಾರ್ಪೋರೇಟ್ ಕಂಪನಿಗಳಲ್ಲೂ ಇದು ಇದೆ. ಯಾವುದರ ಬಗ್ಗೆ ಯೋಚಿಸದೇ ಮುನ್ನುಗಬೇಕು. ಇಂತಹ ಮಾತುಗಳೇ ನಮ್ಮನ್ನು ಕೆಲವೊಮ್ಮೆ ಗಟ್ಟಿ ಮಾಡುತ್ತದೆ" ಎಂದಿದ್ದಾರೆ.

  ಕಾಸ್ಟಿಂಗ್ ಕೌಚ್ ಮೊದಲು ಇರಲಿಲ್ಲ

  ಕಾಸ್ಟಿಂಗ್ ಕೌಚ್ ಮೊದಲು ಇರಲಿಲ್ಲ

  ಇನ್ನು ಕಾಸ್ಟಿಂಗ್ ಕೌಚ್ ಕುರಿತಾದ ಪ್ರಶ್ನೆಗೆ "ಅದೆಲ್ಲಾ ಆಗ ಇರಲಿಲ್ಲ. ಅದು ಏನು ಎಂದು ನಮಗೆ ಗೊತ್ತಿರಲಿಲ್ಲ. ನಾನು ಸೌಂದರ್ಯ ಒಟ್ಟಿಗೆ ಕೆಲಸ ಮಾಡಿದ್ದೇವೆ. ಚಿರಂಜೀವಿ, ನಾಗಾರ್ಜುನ ಸಾವಿತ್ರಿ, ಸೌಂದರ್ಯ ಎಲ್ಲರೂ ಪಾತ್ರಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದರು. ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಪದ ಕೇಳಿದ ಮೇಲೆ ಅದು ಏನು? ಆ ಪದ ಅರ್ಥ ಏನು? ಎಂದು ಹುಡುಕಾಟ ನಡೆಸಿದಾಗ ಹೀಗೆ ಎಮಧು ಗೊತ್ತಾಯಿತು. ಈಗ ಅಷ್ಟೇ ಅದೆಲ್ಲಾ ಬಂದಿದೆ" ಎಂದು ಪ್ರೇಮಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  ಮಾರಿ ಮುತ್ತು ಹೊಟ್ಟೆಗೆ ಒದ್ದಿದ್ದರು

  ಮಾರಿ ಮುತ್ತು ಹೊಟ್ಟೆಗೆ ಒದ್ದಿದ್ದರು

  "ನಟ ಉಪೇಂದ್ರಗಿಂತ ನಿರ್ದೇಶಕ ಉಪೇಂದ್ರ ಅಂದರೆ ಬಹಳ ಇಷ್ಟ. ಅವರ ಇನ್ವಾಲ್‌ಮೆಂಟ್ ಬಹಳ ಚೆನ್ನಾಗಿ ಇರುತ್ತದೆ. ನಾನು ಕೂಡ ಹಾಗೆ ಇನ್ವಾಲ್ ಆಗಿಬಿಡುತ್ತೀವಿ. ಯಾವುದಕ್ಕೂ ಕಾಂಪ್ರಮೈಸ್ ಆಗುವುದಿಲ್ಲ. 'ಉಪೇಂದ್ರ' ಎನ್ನುವ ಸಿನಿಮಾ ಮಾಡಿದ್ದೆವು. ಅದರಲ್ಲಿ ಮೂವರು ನಾಯಕಿಯರು. ನಾನು, ರವೀನಾ ಟಂಡನ್, ದಾಮಿನಿ. ನನಗೆ ಹೋಮ್ಲಿ ಕ್ಯಾರೆಕ್ಟರ್ ಸಿಕ್ಕಿತ್ತು. ಆ ಹೋಮ್ಲಿ ಗರ್ಲ್ ಏನೆಲ್ಲಾ ಸಮಸ್ಯೆ ಎದುರಿಸುತ್ತಾಳೆ ಎನ್ನುವುದನ್ನು ತೋರಿಸಿದ್ದರು. ಅದರಲ್ಲಿ ಮಾರಿಮುತ್ತು ಎನ್ನುವವರು ನಟಿಸಿದ್ದರು. ಅವರು ನೈಜವಾಗಿ ಫೈಟ್ ಮಾಡಿಬಿಡುತ್ತಿದ್ದರು. ಒಮ್ಮೆ ಹೊಟ್ಟೆಗೆ ಬಹಳ ಪೆಟ್ಟು ಬಿದ್ದಿತ್ತು. ಅದೆಲ್ಲಾ ಲೆಕ್ಕಿಸದೇ ಕೆಲಸ ಮಾಡಿದ್ದೆವು. ಉಪೇಂದ್ರ ಹಾರ್ಡ್ ವರ್ಕರ್. ಅವರೊಟ್ಟಿಗೆ ಕೆಲಸ ಮಾಡಲು ಎಲ್ಲರೂ ಹಾಗೆ ಸಿದ್ಧರಿರುತ್ತಿದ್ದೆವು. ಹಲವು ಬಾರಿ ಮಾನಿಟರ್ ಮಾಡಿ ಶೂಟ್ ಮಾಡುತ್ತಿದ್ದೆವು. ಉಪೇಂದ್ರ ಕಾನ್ಫಿಡೆಂಟ್ ಬಹಳ ಇಷ್ಟ ಆಗುತ್ತದೆ" ಎಂದು ಉಪೇಂದ್ರ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡಿದ್ದಾರೆ.

  English summary
  When Prema opened up about relationship rumours with Upendra, 'It's just gossip. And She also shared shooting experience With Upendra. Prema said that she never faced casting couch. Know more.
  Thursday, November 17, 2022, 8:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X