For Quick Alerts
  ALLOW NOTIFICATIONS  
  For Daily Alerts

  ವಿಷ್ಣು ಸಿಂಪಲ್ ಬದುಕಿನ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ!

  By Pavithra
  |
  ಸರಳ ಜೀವಿ ನಮ್ಮ ವಿಷ್ಣು ದಾದಾ..!! | Filmibeat Kannada

  ಸಾಹಸಸಿಂಹ ಡಾ ವಿಷ್ಣುವರ್ಧನ್, ತುಂಬಾನೇ ಸಿಂಪಲ್ ಆಗಿದ್ದ ಕಲಾವಿದ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಆಗಿದ್ದರೂ ಕೂಡ ಜೀವನದಲ್ಲಿ ಸದಾ ಸರಳವಾಗಿ ಬದುಕಬೇಕು ಎನ್ನುವ ಸಿದ್ದಾಂತವನ್ನು ಪಾಲಿಸುತ್ತಾ ಬದುಕಿದ ನಟ.

  ವಿಷ್ಣು ಅಭಿಮಾನಿಗಳನ್ನ ಅಗಲಿ ಸಾಕಷ್ಟು ವರ್ಷವಾದರೂ ಕೂಡ ಅವರ ನೆನಪು, ಅವರು ಬಿಟ್ಟು ಹೋದ ಸಿನಿಮಾಗಳು ಇವೆಲ್ಲವೂ ಅಭಿಮಾನಿಗಳ ಜೊತೆಯಲ್ಲಿಯೇ ಇದೆ. ಇಂದಿಗೂ ವಿಷ್ಣು ಅಭಿಮಾನಿಗಳನ್ನು ಎಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದಾರೆ ಎನ್ನುವುದು ಇತ್ತೀಚಿಗಷ್ಟೆ ಮರು ಬಿಡುಗಡೆ ಆದ 'ನಾಗರಹಾವು' ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಯಿಂದಲೇ ಗೊತ್ತಾಗುತ್ತೆ.

  ಹೊರ ರಾಜ್ಯದಲ್ಲಿಯೂ ಶುರುವಾಯ್ತು ಸಾಹಸಸಿಂಹನ ಘರ್ಜನೆ ಹೊರ ರಾಜ್ಯದಲ್ಲಿಯೂ ಶುರುವಾಯ್ತು ಸಾಹಸಸಿಂಹನ ಘರ್ಜನೆ

  ವಿಷ್ಣು ಎಷ್ಟು ಸರಳವಾದ ಜೀವನವನ್ನು ರೂಡಿಸಿಕೊಂಡಿದ್ದರು ಎನ್ನುವುದಕ್ಕೆ ಒಂದು ಉತ್ತಮ ಉದಾಹರಣೆಯನ್ನು ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ. ಮೈಸೂರಿಗೆ ಚಿತ್ರೀಕರಣಕ್ಕೆ ಹೋದಾಗ ಸಾಹಸಸಿಂಹ ಎಲ್ಲಿ ಉಳಿದುಕೊಳ್ತಿದ್ರು? ಎನ್ನುವುದರ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ ಮುಂದೆ ಓದಿ

  ಸಾಕಷ್ಟು ಜನರಿಗೆ ಸ್ಪೂರ್ತಿಯಾದ ವಿಷ್ಣು

  ಸಾಕಷ್ಟು ಜನರಿಗೆ ಸ್ಪೂರ್ತಿಯಾದ ವಿಷ್ಣು

  ವಿಷ್ಣು ಸಾಕಷ್ಟು ಜನರಿಗೆ ಸ್ಪೂರ್ತಿಯಾದ ನಟ. ಸರಳತೆಯಿಂದಲೇ ಬದುಕಬೇಕು ಎನ್ನುವುದನ್ನು ರೂಡಿಸಿಕೊಂಡ ಕಲಾವಿದ. ಚಿತ್ರೀಕರಣಕ್ಕೆ ಬಂದಾಗ ವಿಷ್ಣು ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್ ನಲ್ಲಿದ್ದ ಸಣ್ಣ ಕೊಠಡಿಯಲ್ಲಿ ಉಳಿದುಕೊಳ್ಳುತ್ತಿದ್ದರಂತೆ ವಿಷ್ಣು.

  ಮುಂಚಿತವಾಗಿ ಬುಕ್ ಮಾಡುತ್ತಿರಲಿಲ್ಲ

  ಮುಂಚಿತವಾಗಿ ಬುಕ್ ಮಾಡುತ್ತಿರಲಿಲ್ಲ

  ವಿಷ್ಣುವರ್ಧನ್ ಸದಾ ಉಳಿದುಕೊಳ್ಳುತಿದ್ದ ರೂಮ್ ನಂಬರ್ 334. ಹಾಗಂತ ಸಾಮಾನ್ಯ ದಿನಗಳಲ್ಲಿ ವಿಷ್ಣುಗಾಗಿ ಎಂದಿಗೂ ಈ ಕೊಠಡಿ ಬುಕ್ ಮಾಡುತ್ತಿರಲಿಲ್ಲ. ವಿಷ್ಣು ಮೈಸೂರಿನಲ್ಲಿ ಇಲ್ಲದ ದಿನ ಸಾಮಾನ್ಯವಾಗಿ ಹೋಟೆಲ್ ಗೆ ಭೇಟಿ ನೀಡುತ್ತಿದ್ದ ವ್ಯಕ್ತಿಗಳು ರೂಮ್ ಅನ್ನು ಬಳಸುತ್ತಿದ್ದರು.

  ಪಂಚತಾರಾ ಹೋಟೆಲ್ ಆಸೆ ಇರಲಿಲ್ಲ

  ಪಂಚತಾರಾ ಹೋಟೆಲ್ ಆಸೆ ಇರಲಿಲ್ಲ

  ಒಂದು ಕಾಲದಲ್ಲಿ ಸೂಪರ್ ಸ್ಟಾರ್ ಆಗಿದ್ದ ವಿಷ್ಣು ಎಷ್ಟೇ ಶ್ರೀಮಂತರಾದರೂ ಪಂಚ ತಾರಾ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತಿರಲಿಲ್ಲವಂತೆ. ನಿರ್ಮಾಪಕರಿಗೆ ಹೊರೆ ಆಗದಂತೆ ಮೈಸೂರಿನ ಕಿಂಗ್ಸ್ ಕೋರ್ಟ್ ಸಾಮಾನ್ಯ ಕೊಠಡಿಯಲ್ಲಿ 1972 ರಿಂದ 2009 ರ ವರೆಗೂ ಬಂದು ಹೋಗುವುದನ್ನು ಮಾಡುತ್ತಿದ್ದರಂತೆ.

  ವಿಷ್ಣು ಬಳಸುತ್ತಿದ್ದ ಕೊಠಡಿ ವಿಡಿಯೋ

  ವಿಷ್ಣು ಬಳಸುತ್ತಿದ್ದ ಕೊಠಡಿ ವಿಡಿಯೋ

  ಮೈಸೂರಿನಲ್ಲಿ ವಿಷ್ಣು ಉಳಿದುಕೊಳ್ತಿದ್ದ ಹೋಟೆಲ್ ಕೊಠಡಿ ವಿಡಿಯೋ ಸದ್ಯ ಫೇಸ್ ಬುಕ್ ನಲ್ಲಿ ವೈರಲ್ ಆಗ್ತಿದೆ. ಮೈಸೂರು ಮೂಲದ ಪತ್ರಕರ್ತರಾದ ಜನಾರ್ಧನ ರಾವ್ ಸಾಳಂಕೆ ಯವರು ಹೋಟೆಲ್ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

  English summary
  When Vishnuvardhan goes to Mysore he stays at the King's Court hotel. Currently Vishnuvardhan's Room's video is viral on the social networking site.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X