ಅಭಿಮಾನಿಗಳ ಪ್ರಕಾರ ಪುನೀತ್-ಸಂತೋಷ್ ಚಿತ್ರದ ಟೈಟಲ್ ಇದಾಗಿರಬೇಕಂತೆ

By Bharath Kumar

Recommended Video

ಪುನೀತ್-ಸಂತೋಷ್ ಮುಂದಿನ ಸಿನಿಮಾ ಟೈಟಲ್ ಬಗ್ಗೆ ಚರ್ಚೆ..! | Filmibeat Kannada

'ರಾಜಕುಮಾರ' ಚಿತ್ರದ ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತೊಮ್ಮೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸ ಆರಂಭವಾಗಿದ್ದು, ಟೈಟಲ್ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ.

ಸದ್ಯದ ಮಾಹಿತಿ ಪ್ರಕಾರ ಡಾ ರಾಜ್ ಕುಮಾರ್ ಅವರ 205ನೇ ಚಿತ್ರಕ್ಕೆ ಸಂಬಂಧಪಟ್ಟಂತೆ ಬಹಳ ಹತ್ತಿರವಾದ ಟೈಟಲ್ ಇಡಲಾಗುತ್ತಿದೆಯಂತೆ, ಬಟ್, ಖಚಿತವಾದ ಮಾಹಿತಿ ಇಲ್ಲ. ದಾಖಲೆಗಳ ಪ್ರಕಾರ ರಾಜ್ ಕುಮಾರ್ ಅವರ 205ನೇ ಸಿನಿಮಾ 'ಪರುಶರಾಮ'.

ಪುನೀತ್ ಮತ್ತು ಸಂತೋಷ್ ಕಾಂಬಿನೇಷನ್ ಚಿತ್ರಕ್ಕೆ ರಾಜ್ ಕುಮಾರ್ ಸಿನಿಮಾದ ಟೈಟಲ್ ಇಡೋದು ಬಹುತೇಕ ಖಚಿತ. ಅದು 'ಪರುಶರಾಮ' ಅಥವಾ 'ದೇವತಾ ಮನುಷ್ಯ' ಎಂಬ ಹೆಸರು ಕೇಳಿಬರುತ್ತಿದೆ.

Which title should be given to Puneeth Rajkumar new movie

ಈ ಟೈಟಲ್ ವಿಷ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಫಿಲ್ಮಿಬೀಟ್ ಕನ್ನಡದಲ್ಲಿ ಒಂದು ಪೋಲ್ ಕೇಳಲಾಗಿತ್ತು. ಪರುಶರಾಮ ಟೈಟಲ್ ಸೂಕ್ತನಾ ಅಥವಾ ದೇವತಾ ಮನುಷ್ಯ ಟೈಟಲ್ ಸೂಕ್ತನಾ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕನ್ನಡ ಚಿತ್ರರಂಗದ ಅಭಿಮಾನಿಗಳು ಶೇಕಾಡ 73 ರಷ್ಟು 'ಪರುಶರಾಮ' ಮತ್ತು ಶೇಕಾಡ 27 ರಷ್ಟು 'ದೇವತಾ ಮನುಷ್ಯ' ಟೈಟಲ್ ಗೆ ಜೈ ಎಂದಿದ್ದಾರೆ. ಇದನ್ನ ಗಮನಿಸಿದ್ರೆ 'ಪರುಶರಾಮ' ಟೈಟಲ್ ಗೆ ಹೆಚ್ಚು ಮತಗಳು ಬಂದಿವೆ.

ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲೇ ಈ ಚಿತ್ರವೂ ತಯಾರಾಗಲಿದ್ದು, ಇನ್ನುಳಿದಂತೆ ಯಾವ ಮಾಹಿತಿಯನ್ನ ಕೂಡ ನಿರ್ದೇಶಕರು ಬಹಿರಂಗಪಡಿಸಿಲ್ಲ. ಸದ್ಯ, ಪವನ್ ಒಡೆಯರ್ ನಿರ್ದೇಶನದ 'ನಟಸಾರ್ವಭೌಮ' ಚಿತ್ರದಲ್ಲಿ ಪುನೀತ್ ನಟಿಸುತ್ತಿದ್ದಾರೆ. ಇದಾದ ಬಳಿಕ ಸಂತೋಷ್ ಜೊತೆಗಿನ ಚಿತ್ರ ಸೆಟ್ಟೇರಲಿದೆ.

More from Filmibeat

English summary
Which title should be given to Puneeth Rajkumar and Santosh Anand Ram film? this question was asked in Filmibeat Kannada Poll. here is the Result.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X