For Quick Alerts
  ALLOW NOTIFICATIONS  
  For Daily Alerts

  60 ದಾಟಿಟ್ರು ಇವರ 'ಹವಾ' ಕಮ್ಮಿಯಾಗಿಲ್ಲ: ಯಾರೆಲ್ಲಾ ಇದ್ದಾರೆ.?

  By Bharath Kumar
  |

  ಹೀರೋಯಿಸಂಗೆ ಒಂದು ವಯಸ್ಸಿದೆ. ಈ ವಯಸ್ಸು ದಾಟಿದ ಮೇಲೆ ಆ ನಟ ಹೀರೋ ಆಗೋಕೆ ಆಗಲ್ಲ. ಪೋಷಕ ಕಲಾವಿದನಾಗಿ, ತಂದೆ, ಅಣ್ಣನಾಗಿ ಅಭಿನಯಿಸಬೇಕು ಎನ್ನುವುದು ಒಂದು ಕಾಲದ ಟ್ರೆಂಡ್.

  ಆದ್ರೆ, ಈ ಸಂಪ್ರಾದಾಯವನ್ನ ಬ್ರೇಕ್ ಮಾಡಿ ಮುನ್ನಗ್ಗುತ್ತಿದ್ದಾರೆ ಇಂದಿನ ಸೂಪರ್ ಸ್ಟಾರ್ ನಟರು. ಕನ್ನಡ, ತಮಿಳು, ತೆಲುಗು, ಹಿಂದಿ ಎಲ್ಲ ಚಿತ್ರರಂಗದಲ್ಲೂ 60 ಪ್ಲಸ್ ವಯಸ್ಸಿನ ನಾಯಕರು ಮಿಂಚ್ತಿದ್ದಾರೆ.

  ಈಗಲೂ ತೆರೆಮೇಲೆ ನಾಯಕನಾಗಿಯೇ ಅಬ್ಬರಿಸುತ್ತಿದ್ದಾರೆ. ಹಾಗಿದ್ರೆ, ಭಾರತ ಚಿತ್ರರಂಗದಲ್ಲಿ ಯಾವೆಲ್ಲ ನಟರು 60 ದಾಟಿದ್ರು ಆಕ್ಟೀವ್ ಆಗಿದ್ದಾರೆ. ಯ್ಯಾವಾವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂಬುದನ್ನ ಮುಂದೆ ಓದಿ...

  ಅಂಬಿಗೆ ವಯಸ್ಸಾಗಿಲ್ಲ

  ಅಂಬಿಗೆ ವಯಸ್ಸಾಗಿಲ್ಲ

  ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಈಗ ವಯಸ್ಸು 65. ಆದ್ರೆ, ಈಗಲೂ ಹೀರೋ ಆಗಿ ಮಿಂಚ್ತಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ತಂದೆ ಹಾಗೂ ಪೋಷಕ ನಟನಾಗಿ ಕಾಣಿಸಿಕೊಂಡಿದ್ದ ಅಂಬರೀಶ್ ಈಗ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅಂಬಿಯ ಹೀರೋಯಿಸಂ ಇನ್ನು ಕಮ್ಮಿಯಾಗಿಲ್ಲ

  ಈಗಲೂ ಎವರ್ ಗ್ರೀನ್ ಅನಂತ್ ನಾಗ್

  ಈಗಲೂ ಎವರ್ ಗ್ರೀನ್ ಅನಂತ್ ನಾಗ್

  ಅಂದು, ಇಂದು ಎಂದೆಂದೂ ಎವರ್ ಗ್ರೀನ್ ನಟ ಅನಂತ್ ನಾಗ್. ಸದ್ಯ, ಅನಂತ್ ನಾಗ್ ಅವರಿಗೆ 69 ವರ್ಷ. ಈ ವಯಸ್ಸಿನಲ್ಲೂ ಎಂತಹದ್ದೇ ಪಾತ್ರ ನೀಡಿದರೂ, ಸವಾಲಾಗಿ ಸ್ವೀಕರಿಸಿ ಅಭಿನಯಿಸ್ತಾರೆ. 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ಮುಖ್ಯ ಪಾತ್ರ, ಈಗ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರದಲ್ಲೂ ಅದೇ ರೀತಿಯ ಪಾತ್ರ. ಒಂದೇ ಮಾತಿನಲ್ಲಿ ಹೇಳುವುದಾರೇ ಅನಂತ್ ನಾಗ್ ಈಗಲೂ ಹೀರೋನೇ.

  ಸೂಪರ್ ಸ್ಟಾರ್ ರಜನಿಕಾಂತ್

  ಸೂಪರ್ ಸ್ಟಾರ್ ರಜನಿಕಾಂತ್

  ತನ್ನ ಸಿನಿಬದುಕಿನಲ್ಲಿ ಅಲ್ಲೊಂದು, ಇಲ್ಲೊಂದು ಬಿಟ್ಟರೇ, ಯಾವ ಚಿತ್ರದಲ್ಲಿಯೂ ಡಮ್ಮಿ ಪಾತ್ರ ಮಾಡಲೇ ಇಲ್ಲ. 67ರ ವಯಸ್ಸಿನಲ್ಲೂ ರಜನಿಕಾಂತ್ ಮೇಲೆ ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕ್ತಾರೆ ನಿರ್ಮಾಪಕರು. ಇತ್ತೀಚಿಗಷ್ಟೆ 'ಕಾಲಾ' ಬಿಡುಗಡೆಯಾಗಿತ್ತು. ಈಗ '2.0' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅದಾದ ನಂತರ ಮತ್ತೊಂದು ಚಿತ್ರಕ್ಕೆ ಓಕೆ ಅಂದಿದ್ದಾರೆ ತಲೈವಾ.

  ಮೆಗಾಸ್ಟಾರ್ ಮೆಗಾ ಹೀರೋ

  ಮೆಗಾಸ್ಟಾರ್ ಮೆಗಾ ಹೀರೋ

  ತಮಿಳಿನಲ್ಲಿ ರಜನಿಕಾಂತ್ ಹೇಗೋ, ಅದೇ ರೀತಿ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ. 62 ವರ್ಷದ ಚಿರಂಜೀವಿ ಈಗಲೂ ನಿರ್ಮಾಪಕರ ಫೆವರೇಟ್. ಖೈದಿ 150 ಚಿತ್ರದ ಮೂಲಕ ಸಿನಿಲೋಕಕ್ಕೆ ಕಂಬ್ಯಾಕ್ ಆಗಿದ್ದ ಚಿರು ಸದ್ಯ, 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದಾರೆ.

  ಕಮಲ್ ಹಾಸನ್

  ಕಮಲ್ ಹಾಸನ್

  ತಮಿಳು ಇಂಡಸ್ಟ್ರಿಯ ಮತ್ತೊಬ್ಬ ಸೂಪರ್ ಸ್ಟಾರ್ ನಟ ಕಮಲ್ ಹಾಸನ್. 63 ವರ್ಷದ ಕಮಲ್ ಹಾಸನ್ ಒಂದು ಕಡೆ ರಾಜಕೀಯ, ಮತ್ತೊಂದು ಕಡೆ ಸಿನಿಮಾರಂಗವನ್ನ ಬ್ಯಾಲೆನ್ಸ್ ಮಾಡ್ತಿದ್ದಾರೆ. ಸದ್ಯ, ಕಮಲ್ ಹಾಸನ್ ನಟಿಸಿ, ನಿರ್ದೇಶನ ಮಾಡಿರುವ 'ವಿಶ್ವರೂಪಂ 2' ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

  ಅಮಿತಾಬ್ ಬಚ್ಚನ್ & ರಿಷಿ ಕಪೂರ್

  ಅಮಿತಾಬ್ ಬಚ್ಚನ್ & ರಿಷಿ ಕಪೂರ್

  ಈ ಎಲ್ಲ ನಟರಿಗೆ ಹೋಲಿಸಿಕೊಂಡರೇ ಬಾಲಿವುಡ್ ಬಿಗ್ ಬಿ ವಯಸ್ಸಿನಲ್ಲಿ ಎಲ್ಲರಿಗಿಂತಲು ದೊಡ್ಡವರು. 75 ವರ್ಷದ ಅಮಿತಾಬ್ ಪ್ರಯೋಗಾತ್ಮಕ ಕಥೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅಮಿತಾಬ್ ರೀತಿಯಲ್ಲಿ 65 ವರ್ಷದ ರಿಷಿ ಕಪೂರ್ ಕೂಡ ಹಿರಿಯ ನಟರೇ. ಈ ಇಬ್ಬರು ಇತ್ತೀಚಿಗಷ್ಟೆ '101 ನಾಟೌಟ್' ಎಂದು ಸಿನಿಮಾ ಮಾಡಿದ್ದರು.

  ಮಲಯಾಳಂ ಸೂಪರ್ ಸ್ಟಾರ್

  ಮಲಯಾಳಂ ಸೂಪರ್ ಸ್ಟಾರ್

  ಮಲಯಾಳ ಚಿತ್ರರಂಗದ ಲೆಜೆಂಡ್ ನಟ ಮಮ್ಮುಟ್ಟಿ ಅವರಿಗೆ ಈಗ 66 ವರ್ಷ. ಈಗಲೂ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಯುವನಟರನ್ನ ಹಿಂದಿಕ್ಕಿ ದೊಡ್ಡ ದೊಡ್ಡ ಸಿನಿಮಾಗಳನ್ನ ಮಾಡ್ತಿದ್ದಾರೆ. ಇನ್ನು ಬಿಡುಗಡೆಯಾಗದ ಎರಡು ಚಿತ್ರಗಳಲ್ಲಿ ಮಮ್ಮುಟಿ ನಟಿಸುತ್ತಿದ್ದಾರೆ.

  English summary
  Who are some really good looking Indian actors above 60 years of age. here is the list of super star actors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X