For Quick Alerts
  ALLOW NOTIFICATIONS  
  For Daily Alerts

  ಈ ನಾಗವಲ್ಲಿ ಯಾರು? ತರ್ಕಕ್ಕೆ ನಿಲುಕದ ಪ್ರಶ್ನೆ

  By * ಉದಯರವಿ
  |

  ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹಳವಾಗಿ ಕಾಡಿದ ಹೆಸರು ನಾಗವಲ್ಲಿ. ಯಾರೀಕೆ? ಏನಾಗಿದ್ದಳು? ಎಲ್ಲಿಯವಳು? ಇದ್ದಕ್ಕಿದ್ದಂತೆ ಈಕೆಯ ಹೆಸರು ಕೇಳಿಬಂದಿದ್ದೇಕೆ? ಈಕೆ ಮೂಲತಃ ಎಲ್ಲಿಯವಳು? ಎಂಬಿತ್ಯಾದಿ ಪ್ರಶ್ನೆಗಳು ಈಗಲೂ ಹೀಗೂ ಉಂಟೇ ಎಂಬಂತೆ ತರ್ಕಕ್ಕೆ ನಿಲುಕದೆ ಕಾಡುತ್ತಿವೆ.

  ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಸೌಂದರ್ಯಾ ಅಭಿನಯದ 'ಆಪ್ತಮಿತ್ರ' (2004) ಚಿತ್ರದಲ್ಲಿ "ಸರಸಕು ರಾ...ರಾ..." ಎಂದು ಪ್ರೇಕ್ಷಕರನ್ನು ಸೆಳೆದ ಅಮೋಘ ಪಾತ್ರ ನಾಗವಲ್ಲಿ. ಈಕೆಯ ಉಪಟಳದಿಂದಲೇ ಸೌಂದರ್ಯಾ ಹಾಗೂ ವಿಷ್ಣುವರ್ಧನ್ ಅವರ ಸಾವು ಸಂಭವಿಸಿತು ಎಂಬ ಮಾತುಗಳು ಆಗಿಂದ್ದಾಗೆ ಕೇಳಿಬರುತ್ತಿವೆ.

  ನಾಗವಲ್ಲಿ ಎಂಬುದು ಒಂದು ಕೇವಲ ಕಾಲ್ಪನಿಕ ಕತೆ. ನಾಗವಲ್ಲಿ ಉಪಟಳದಿಂದ ವಿಷ್ಣುವರ್ಧನ್ ಹಾಗೂ ಸೌಂದರ್ಯಾ ಸಾವು ಸಂಭವಿಸಿತು ಎಂಬುದು ಕಪೋಲಕಲ್ಪಿತ ಕತೆ ಅಷ್ಟೇ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.

  ಆದರೂ ಜನಮಾನಸದಲ್ಲಿ ಮಾತ್ರ ನಾಗವಲ್ಲಿ ಪಾತ್ರ ಅಚ್ಚಳಿಯದೆ ಉಳಿದುಹೋಗಿಬಿಟ್ಟಿದೆ. ಮಲಯಾಳಂನ ಯಶಸ್ವಿ ಚಿತ್ರ 'ಮಣಿಚಿತ್ರಥಾಝು' (1993) ಚಿತ್ರದ ರೀಮೇಕ್ 'ಆಪ್ತಮಿತ್ರ'. ಈ ಚಿತ್ರದ ಬಿಡುಗಡೆಗೂ ಮುನ್ನ ತಾರೆ ಸೌಂದರ್ಯಾ ವಿಮಾನ ಅಪಘಾತದಲ್ಲಿ ಮೃತಪಟ್ಟರು. 'ಆಪ್ತರಕ್ಷಕ' (ಚಿತ್ರವಿಮರ್ಶೆ ಓದಿ) ಚಿತ್ರ ಬಿಡುಗಡೆಯಾದ ಬಳಿಕ ವಿಷ್ಣುವರ್ಧನ್ ಕಾಲವಶರಾಗಿದ್ದು ದುರಂತ.

  ಈ ಎಲ್ಲಾ ಘಟನೆಗಳ ಬಳಿಕ ಮುಖ್ಯವಾಗಿ ಇದನ್ನು ಲಾಭ ಮಾಡಿಕೊಂಡಿದ್ದು ಜ್ಯೋತಿಷಿಗಳು. ಇದಕ್ಕೆ ನಾಗವಲ್ಲಿ ದೋಷ ಎಂದು ಹೆಸರಿಟ್ಟು ಜನರನ್ನು ಸುಲಿಗೆ ಮಾಡಲು ಮುಂದಾದರು. ಟಿವಿ ಚಾನಲ್ ಗಳಲ್ಲಿ ದೋಷದ ಪರಿಹಾರ ಹೇಗೆ ಎಂಬಿತ್ಯಾದಿ ವಿಷಯಗಳನ್ನು ಕೇಳುಗರ ಕಿವಿಗೆ ಹಾಕಿ ಕಿವಿಗೆ ಪುಷ್ಪಾರ್ಚನೆಯನ್ನೂ ಮಾಡಿಬಿಟ್ಟರು.

  ಅದೆಲ್ಲಾ ಸರಿ ನಾಗವಲ್ಲಿ ದೋಷದಿಂದಲೇ ವಿಷ್ಣು ಹಾಗೂ ಸೌಂದರ್ಯಾ ಅವರ ಸಾವು ಸಂಭವಿಸಿತು ಎಂದರೆ ಉಳಿದವರಿಗೆ ಯಾಕೆ ಏನೂ ಆಗಲಿಲ್ಲ. ಚಿತ್ರದಲ್ಲಿ ರಮೇಶ್ ಅರವಿಂದ್, ಪ್ರೇಮಾ, ಅವಿನಾಶ್, ದ್ವಾರಕೀಶ್ ಮುಂತಾದವರು ಅಭಿನಯಿಸಿದ್ದಾರೆ. ಅವರಿಗೆಲ್ಲಾ ನಾಗವಲ್ಲಿ ದೋಷ ತಟ್ಟಲಿಲ್ಲವೇಕೆ?

  ಈ ಪ್ರಶ್ನೆಗಳಿಗೆಲ್ಲಾ ಉತ್ತರವಿಲ್ಲ. ಆದರೂ ನಾಗವಲ್ಲಿ ದೋಷ ಎಂಬುದು ಮಾತ್ರ ಹಾಗೆಯೇ ಉಳಿದುಕೊಂಡು ಬಿಟ್ಟಿದೆ. ಸದ್ಯಕ್ಕೆ ಈ ವಿಷಯ ಹೀಗೂ ಉಂಟೇ ಅಷ್ಟೇ? ಯಾಕೋ ಏನೋ ತಾರೆ ಸೌಂದರ್ಯಾ ನೆನಪಾದಾಗ ನಾಗವಲ್ಲಿ ಕೂಡಾ ನೆನಪಾಗುತ್ತಾರೆ. (ಒನ್ ಇಂಡಿಯಾ ಕನ್ನಡ)

  English summary
  Who is Nagavalli? What is Nagavalli effect? It was a character in the film Apthamitra (2004). P Vasu wrote the story of Aptamitra based on Malayalam hit film Manichitrathazhu, which was released in the year 1993. But still people have been believing actor Vishnuvardhan was killed because of a dead woman's spirit which they are connecting with Nagavalli. Is it True?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X