For Quick Alerts
  ALLOW NOTIFICATIONS  
  For Daily Alerts

  2012ರ ಸ್ಯಾಂಡಲ್ ವುಡ್ ಕಿಂಗ್ ಯಾರು?

  By Mahesh
  |

  2012 ರಲ್ಲಿ 90ಕ್ಕೂ ಮಿಕ್ಕ ಚಿತ್ರಗಳಲ್ಲಿ ಹಿಟ್ ಆದ 10-12 ಚಿತ್ರಗಳಲ್ಲಿ ನಾಯಕಿ ಪ್ರಧಾನ ಚಿತ್ರ ಹುಡುಕಿದರೂ ಸಿಗಲಿಕ್ಕಿಲ್ಲ. ನಾಯಕ ಪ್ರಧಾನ ಚಿತ್ರಗಳೇ ಹೆಚ್ಚಾಗಿತ್ತು ಎಂದು ಒತ್ತಿ ಹೇಳಬೇಕಾಗಿಲ್ಲ.

  2012ರಲ್ಲಿ ಅನೇಕ ನಾಯಕ ನಟರು ಪ್ರಯೋಗಿಕ ಪಾತ್ರಗಳು, ವೈವಿಧ್ಯ ಪಾತ್ರಗಳ ಪೋಷಣೆಗೆ ಹೆಚ್ಚು ಒತ್ತು ನೀಡಿದ್ದು ಕನ್ನಡ ಚಿತ್ರ ಪ್ರೇಕ್ಷಕನ ಮಟ್ಟಿಗೆ ಶುಭ ಸುದ್ದಿ.

  ಓದಿ: 2012ರಲ್ಲಿ ಕನ್ನಡದ ಶ್ರೇಷ್ಠ ಚಿತ್ರ ಯಾವುದು?

  ಓದಿ: 2012ರ ಸೂಪರ್ ನಿರ್ದೇಶಕ ಯಾರು?

  2012: ರಮ್ಯಾ ರಾಗಿಣಿ ರಾಧಿಕಾ ಯಾರು ಬೆಸ್ಟ್?

  ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ದರ್ಶನ್, ಭೀಮಾತೀರದಲ್ಲಿ ಚಂದಪ್ಪನಾಗಿ ದುನಿಯಾ ವಿಜಯ್, ಕಠಾರಿವೀರ ಸುರಸುಂದರಾಗಿ ಗಾಡ್ ಫಾದರ್,ಆರಕ್ಷಕ ಹಾಗೂ ಕಲ್ಪನ ಚಿತ್ರದಲ್ಲಿ ಉಪೇಂದ್ರ, ಎದೆಗಾರಿಕೆ ಚಿತ್ರದಲ್ಲಿ ಆದಿತ್ಯ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರು.

  ಕೋಮಲ್ ಹಾಗೂ ಶರಣ್ ಎಂದಿನಂತೆ ಹಾಸ್ಯ ಪಾತ್ರಗಳಲ್ಲಿ ಮಿಂಚಿದರೆ, ಕಿಚ್ಚ ಸುದೀಪ್ ಅವರ ಯಾವುದೇ ಪ್ರಮುಖ ಚಿತ್ರ ಬಿಡುಗಡೆಯಾಗದಿರುವುದು ಅಭಿಮಾನಿಗಳಿಗೆ ಬೇಸರ ನೀಡಿತ್ತು.

  ನಾಯಕಿ ನಟಿಯರ ಮತ ಎಣಿಕೆ ಪ್ರಕಾರ ರಾಧಿಕಾ ಪಂಡಿತ್ ಹಾಗೂ ರಮ್ಯಾ ನಡುವೆ ಭಾರಿ ಪೈಪೋಟಿ ನಡೆದಿದೆ. ಈಗ ನಾಯಕ ನಟರ ಸರದಿ. ಆಪ್ತ ಓದುಗರು ಕೊನೆ ಸ್ಲೈಡ್ ಗೆ ಹೋಗಿ ತಪ್ಪದೆ ಮತ ಹಾಕಿ ಹಾಗೂ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

  ದರ್ಶನ್ ತೂಗುದೀಪ

  ದರ್ಶನ್ ತೂಗುದೀಪ

  ಹಿಟ್: ಚಿಂಗಾರಿ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ, ಸ್ನೇಹಿತರು
  ಚಿಂಗಾರಿಯಲ್ಲಿ ಲವಲವಿಕೆ ಪಾತ್ರದ ಜೊತೆಗೆ ವರ್ಷದ ಚಿತ್ರವಾಗಿರುವ ಸಂಗೊಳ್ಳಿ ರಾಯಣ್ಣದಲ್ಲಿ ದರ್ಶನ್ ಅಭಿನಯ ಪ್ರೇಕ್ಷಕರಿಗೆ ರೋಮಾಂಚನ ನೀಡಿದೆ.

  ಉಪೇಂದ್ರ

  ಉಪೇಂದ್ರ

  ಹಿಟ್: ಕಲ್ಪನ, ಕಠಾರಿವೀರ ಸುರಸುಂದರಾಂಗಿ
  ಫ್ಲಾಪ್: ಗಾಡ್ ಫಾದರ್, ಆರಕ್ಷಕ,

  ಶಿವರಾಜ್ ಕುಮಾರ್

  ಶಿವರಾಜ್ ಕುಮಾರ್

  ಹಿಟ್: ಶಿವ
  ಶಿವರಾಜ್ ಕುಮಾರ್ ಅವರು ಈ ವರ್ಷ ಕಡಿಮೆ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಶಿವದಲ್ಲಿ ಎಂದಿನ ಸಹಜ ಅಭಿನಯ ಮರೆಯಲು ಸಾಧ್ಯವಿಲ್ಲ.

  ಕೋಮಲ್ ಕುಮಾರ್

  ಕೋಮಲ್ ಕುಮಾರ್

  ಹಿಟ್: ಗೋವಿಂದಾಯ ನಮಃ
  ಹಾಸ್ಯ ಟ್ರ್ಯಾಕ್ ನಲ್ಲಿ ಯಶಸ್ಸಿನ ಬಂಡಿ ಹತ್ತಿ ಹೊರಟಿರುವ ಕೋಮಲ್ ಕುಮಾರ್ ಆಬಾಲ ವೃದ್ಧರಾದಿಯಾಗಿ ಎಲ್ಲರ ಮೆಚ್ಚಿನ ನಟ

  ದುನಿಯಾ ವಿಜಯ್

  ದುನಿಯಾ ವಿಜಯ್

  ಹಿಟ್: ಭೀಮಾ ತೀರದಲ್ಲಿ, ಸ್ನೇಹಿತರು
  ಭೀಮಾತೀರದಲ್ಲಿ ಚಿತ್ರದಲ್ಲಿ ನೈಜ ಪಾತ್ರಕ್ಕೆ ತಕ್ಕ ನ್ಯಾಯ ಸಲ್ಲಿಸುವ ಮೂಲಕ ದುನಿಯಾ ವಿಜಯ್ ಎಲ್ಲಾ ರೀತಿ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ.

  ಆದಿತ್ಯ

  ಆದಿತ್ಯ

  ಹಿಟ್: ಎದೆಗಾರಿಕೆ- ಅಗ್ನಿ ಶ್ರೀಧರ್ ತಂಡದ ಚಿತ್ರದಲ್ಲಿ ಆದಿತ್ಯ ಅವರು ಸಹನೆಯ ನಟನೆ ಪ್ರೇಕ್ಷಕರ ಮನ ಸೆಳೆದಿದೆ.
  ಫ್ಲಾಪ್: ಶಿಕಾರಿ, ವಿಲನ್

  ಯೋಗೀಶ್

  ಯೋಗೀಶ್

  ಹಿಟ್: ಸಿದ್ಲಿಂಗು-ಪಟ ಪಟ ಡೈಲಾಗ್ ಉದುರಿಸಿ ನೆಚ್ಚಿನ ನಟಿ ರಮ್ಯಾ ಸರಿ ಸಮಕ್ಕೂ ಪೈಪೋಟಿ ನೀಡಿದಂತೆ ಸಹಜ ಅಭಿನಯ ನೀಡಿದ್ದಾರೆ ಲೂಸ್ ಮಾದ ಯೋಗಿ
  ಫ್ಲಾಪ್: ಕಾಲಾಯ ತಸ್ಮೈ ನಮಃ, ಅಲೆಮಾರಿ

  ಯಶ್

  ಯಶ್

  ಹಿಟ್: ಡ್ರಾಮಾ, ಜಾನು
  ಮಂಡ್ಯ ಕಡೆ ಹೈಕ್ಲಳ ಭಾಷೆಯಲ್ಲಿ ಯಶ್ ಸಹಜ ಅಭಿನಯ ನೀಡಿದ ಡ್ರಾಮಾ ಭರ್ಜರಿ ಯಶಸ್ಸು ಕಾಣುತ್ತಿದೆ. ಜಾನು ಸೈಲೆಂಟ್ ಆಗಿ ಹಿಟ್ ಲಿಸ್ಟ್ ಸೇರಿದೆ. ಯಶ್ ಗೆ ಟೈಂ ಚೆನ್ನಾಗಿದೆ.

  ಪುನೀತ್ ರಾಜ್ ಕುಮಾರ್

  ಪುನೀತ್ ರಾಜ್ ಕುಮಾರ್

  ಹಿಟ್: ಅಣ್ಣಾಬಾಂಡ್, ದುನಿಯಾ ಸೂರಿ ನಿರ್ದೇಶನದಲ್ಲಿ ಪುನೀತ್ ಅವರು ಅಭಿನಯಿಸಿದ್ದು, ಎಂದಿನಂತೆ ಡ್ಯಾನ್ಸ್, ಫೈಟ್ ನಲ್ಲಿ ಅಭಿಮಾನಿಗಳಿಗೆ ರಸದೌತಣ ನೀಡಿದ ಅಪ್ಪು ಪ್ರೇಕ್ಷಕರ ಫೇವರೀಟ್.

  ಧ್ರುವ ಸರ್ಜಾ

  ಧ್ರುವ ಸರ್ಜಾ

  ಚೊಚ್ಚಲ ಚಿತ್ರ ಅದ್ದೂರಿ ಶತಕ ಬಾರಿಸಿದ್ದು, ಟಾಪ್ ನಟಿ ರಾಧಿಕಾ ಪಂಡಿತ್ ಜೋಡಿಯಾಗಿ ಮಿಂಚಿದ್ದು, ಡ್ಯಾನ್ಸ್ ಫೈಟ್ ನಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದು ಧ್ರುವ ಸರ್ಜಾ ಗೆ ಪ್ಲಸ್ ಪಾಯಿಂಟ್

  ನಿಮ್ಮ ನೆಚ್ಚಿನ ನಟನಿಗೆ ಮತ ಹಾಕಿ

  ನಿಮ್ಮ ನೆಚ್ಚಿನ ನಟನಿಗೆ ಮತ ಹಾಕಿ

  ನೆಚ್ಚಿನ ನಟನಿಗೆ ಮತ ಹಾಕಿ http://polls.oneindia.in/5/kannada-polls.html

  English summary
  Like every year, the year 2012 has been a mixed year for Kannada film industry. The Sandalwood has seen many ups and downs in the year. Now, let us see who is the best actor of 2012. Audience can choose the best actor by voting for the actor. Follow the slideshow to see the list and the poll is in the last slide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X