»   » ಅಮಿತಾಬ್ ಚಿತ್ರದಲ್ಲಿ ಅಭಿನಯಿಸೋಕೆ ಅಂಬರೀಶ್ ಒಪ್ಪಲಿಲ್ಲ ಯಾಕೆ!

ಅಮಿತಾಬ್ ಚಿತ್ರದಲ್ಲಿ ಅಭಿನಯಿಸೋಕೆ ಅಂಬರೀಶ್ ಒಪ್ಪಲಿಲ್ಲ ಯಾಕೆ!

Posted By:
Subscribe to Filmibeat Kannada

ಅಂಬರೀಶ್ ಕನ್ನಡ ಚಿತ್ರರಂಗದ 'ಅಂಗ್ರಿ ಯಂಗ್ ಮ್ಯಾನ್' ಇಮೇಜ್ ಹೊಂದಿದ್ದ ಸೂಪರ್ ಸ್ಟಾರ್ ನಟ. ಆರಂಭದಲ್ಲಿ ಖಳನಾಯಕ ಹಾಗೂ ಫೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಅಂಬಿ, 80ರ ದಶಕದಲ್ಲಿ ನಾಯಕನಾಗಿ ಅವಕಾಶ ಗಿಟ್ಟಿಸಿಕೊಂಡು ಸಾಲು ಸಾಲು ಹಿಟ್ ಚಿತ್ರಗಳನ್ನ ನೀಡಿದ್ದರು. ಅಲ್ಲಿಂದ ರೆಬೆಲ್ ಸ್ಟಾರ್ ಆದ ಅಂಬರೀಶ್ ಮತ್ತೆ ಹಿಂತಿರುಗಲೇ ಇಲ್ಲ. ಅಂಬರೀಶ್ ಅವರ ಗಡಸು ಧ್ವನಿ, ಎತ್ತರ ದೇಹ, ನೇರ ವ್ಯಕ್ತಿತ್ವಕ್ಕೆ ಎಲ್ಲರಿಗೂ ಇಷ್ಟವಾಗಿತ್ತು.

ಹೀಗಿರುವಾಗ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ನಟಿಸಲು ಅವಕಾಶ ಬಂದಿತ್ತು. ಆದ್ರೆ, ಅಂಬರೀಶ್ ಈ ಅವಕಾಶವನ್ನ ಒಪ್ಪಲಿಲ್ಲ. ಈ ಚಿತ್ರದಲ್ಲಿ ನಾನು ಅಭಿನಯಿಸಲ್ಲ ಎಂದು ರಿಜೆಕ್ಟ್ ಮಾಡಿದ್ದರಂತೆ. ಈ ವಿಷ್ಯವನ್ನ ಸ್ವತಃ ಅಂಬರೀಶ್ ಅವರೇ ಬಹಿರಂಗಪಡಿಸಿದ್ದಾರೆ.

Why Ambrish Reject Amitabh Bachchan Movie

''ಹಿಂದೊಮ್ಮೆ ಅಮಿತಾಬ್ ಬಚ್ಚನ್ ಅವರ ಜೊತೆ ನಟಿಸುವ ಅವಕಾಶ ಬಂದಿತ್ತು. ಆದ್ರೆ, ನಾನು ಒಪ್ಪಿಕೊಂಡಿಲ್ಲ. ಯಾಕಂದ್ರೆ, ಅವರು ಶೂಟಿಂಗ್ ಸೆಟ್ ಗೆ ಸಮಯಕ್ಕೆ ಸರಿಯಾಗಿ ಬರ್ತಾರೆ. ನಾನು ಲೇಟ್ ಆಗಿ ಬರ್ತಿದ್ದೆ ಅದಕ್ಕೆ, ಕ್ಯಾನ್ಸಲ್ ಮಾಡಿದ್ದೆ'' ಎಂದು ನೆನಪನ್ನ ಮೆಲುಕು ಹಾಕಿದ್ರು.

'ಮಂಡ್ಯದ ಗಂಡು' ಅಂಬರೀಶ್ ಅವರು ಇಂದು 65ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜೆಪಿ ನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ತಮ್ಮ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.

English summary
Kannada Actor Ambrish Rejects Amitabh Bachchan Movie in 80s.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada