For Quick Alerts
  ALLOW NOTIFICATIONS  
  For Daily Alerts

  ಚುನಾವಣೆಗಳಲ್ಲಿ ದರ್ಶನ್ ಪ್ರಚಾರ ಮಾಡೋದು ಈ ಒಂದೇ ಕಾರಣಕ್ಕೆ

  |
  ಮಂಡ್ಯಗೆ ಟಾಟಾ ಹೇಳಿ ಬೆಂಗಳೂರಿಗೆ ಬಂದ ದರ್ಶನ್..! | FILMIBEAT KANNADA

  ಚುನಾವಣೆಗಳಲ್ಲಿ ಸಿನಿಮಾ ನಟರು ಪ್ರಚಾರ ಮಾಡುವುದರ ಹಿಂದೆ ಅನೇಕ ಕಾರಣಗಳಿರುತ್ತೆ. ಕೆಲವರು ಸ್ನೇಹಕ್ಕಾಗಿ ಮಾಡ್ತಾರೆ, ಇನ್ನು ಕೆಲವರು ಸಂಭಾವನೆಗಾಗಿ ಮಾಡ್ತಾರೆ, ಕೆಲವರು ರಾಜಕೀಯ ಕಾರಣದಿಂದಲೂ ಪ್ರಚಾರ ಮಾಡ್ತಾರೆ. ಆದ್ರೆ, ಯಾರೊಬ್ಬರು ನಾವು ಇದೇ ಕಾರಣಕ್ಕಾಗಿ ಪ್ರಚಾರ ಮಾಡ್ತೀವಿ ಎಂದು ಹೇಳುವುದಿಲ್ಲ.

  ಆದ್ರೀಗ, ಈ ವಿಷ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರಣ ಬಿಚ್ಚಿಟ್ಟಿದ್ದಾರೆ. ತಾನು ಯಾವ ಕಾರಣಕ್ಕಾಗಿ ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತೀನಿ ಎಂದು ಬಹಿರಂಗಪಡಿಸಿದ್ದಾರೆ.

  'ಬಾಡಿಗೆ' ವಿಷ್ಯ ಕೆದಕಿದ ನಿಖಿಲ್ ಗೆ ಯಶ್ ತಿರುಗೇಟು

  ಮಂಡ್ಯದಲ್ಲಿ ಅಂಬರೀಶ್ ಪತ್ನಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟ ದರ್ಶನ್, ಸೋಮವಾರ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರ ಮತಯಾಚನೆ ಮಾಡಿದ್ದರು. ಇದು ಸಹಜವಾಗಿ ಕುತೂಹಲಕ ಮೂಡಿಸಿದ್ದರೂ ಯಾಕೆ ಎಂದು ಸ್ವತಃ ದರ್ಶನ್ ಹೇಳಿದ್ರು. ಅಷ್ಟಕ್ಕೂ, ದರ್ಶನ್ ಪ್ರಚಾರ ಮಾಡುವುದರ ಹಿಂದಿನ ಕಾರಣ ಇಲ್ಲಿದೆ ನೋಡಿ. ಮುಂದೆ ಓದಿ....

  ಒಂದು ಪತ್ರಕ್ಕಾಗಿ ಪ್ರಚಾರ ಮಾಡ್ತೀನಿ

  ಒಂದು ಪತ್ರಕ್ಕಾಗಿ ಪ್ರಚಾರ ಮಾಡ್ತೀನಿ

  ಚುನಾವಣೆಯಲ್ಲಿ ಪ್ರಚಾರ ಮಾಡುವುದರಿಂದ ದರ್ಶನ್ ಗೆ ಏನು ಸಿಗುತ್ತೆ ಎಂಬ ಕುತೂಹಲ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಕಾಡುತ್ತೆ. ಎಲ್ಲರಿಗೂ ತಿಳಿದಿರಲಿ ದರ್ಶನ್ ಎಂಎಲ್ಎ ಅಥವಾ ಎಂಪಿ ಎಲೆಕ್ಷನ್ ನಲ್ಲಿ ಪ್ರಚಾರ ಮಾಡೋದು ಕೇವಲ ಒಂದು ಪತ್ರಕ್ಕಾಗಿ ಅಷ್ಟೇ.

  ಸುಮಲತಾ ಸ್ಪರ್ಧೆಯಿಂದ ಚಿತ್ರರಂಗ ಇಬ್ಭಾಗ ಆಯ್ತಾ.? ಅಂಬಿ ಪತ್ನಿ ಹೇಳಿದ್ದೇನು?

  ಜನರಿಗೆ ಸಹಾಯ ಆಗುತ್ತೆ ಎಂಬ ಕಾರಣಕ್ಕೆ

  ಜನರಿಗೆ ಸಹಾಯ ಆಗುತ್ತೆ ಎಂಬ ಕಾರಣಕ್ಕೆ

  ''ನಮ್ಮ ಮನೆ ಹತ್ರನೂ ತುಂಬಾ ಜನ ಸಹಾಯ ಕೇಳ್ಕೊಂಡು ಬರ್ತಾರೆ. ಆಪರೇಷನ್ ಮಾಡ್ಬೇಕು ಅಂತ ಕೇಳ್ತಾರೆ. ಅದಕ್ಕೆ ಎಂಎಲ್ಎ ಅಥವಾ ಎಂಪಿ ಲೆಟರ್ ಇದ್ರೆ, ಆಸ್ಪತ್ರೆಗಳಲ್ಲಿ ಶೇಕಡಾ 30-40ರಷ್ಟು ಕಮ್ಮಿ ಆಗುತ್ತೆ. ಉಳಿದ ಮೊತ್ತವನ್ನ ನಾನು ಸಹಾಯ ಮಾಡ್ತೀನಿ. ಈ ಕಾರಣಕ್ಕಾಗಿ ನಾನು ಪ್ರಚಾರ ಮಾಡ್ತೀನಿ'' ಎಂದು ದರ್ಶನ್ ಹೇಳಿಕೊಂಡರು.

  ಮಂಡ್ಯಕ್ಕೆ ವಿಶ್ರಾಂತಿ, ಬೆಂಗಳೂರಿನಲ್ಲಿ 'ಡಿ ಬಾಸ್' ಅಬ್ಬರದ ಪ್ರಚಾರ

  ನಾನು ವ್ಯಕ್ತಿಯ ಪರ ಅಷ್ಟೇ

  ನಾನು ವ್ಯಕ್ತಿಯ ಪರ ಅಷ್ಟೇ

  ನಟ ದರ್ಶನ್ ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡಲ್ಲ. ಕೇವಲ ಆಪ್ತ ವ್ಯಕ್ತಿಗಳ ಪರವಾಗಿ ಮಾತ್ರ ಚುನಾವಣೆ ಪ್ರಚಾರ ಮಾಡ್ತಾರೆ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಹೀಗೆ ಎಲ್ಲ ಪಕ್ಷದ ಅಭ್ಯರ್ಥಿಗಳಿಗೂ ಪ್ರಚಾರ ಮಾಡಿರುವ ಉದಾಹರಣೆ ಇದೆ. ಇಲ್ಲಿ ವ್ಯಕ್ತಿ ಮುಖ್ಯವೇ ಹೊರತು ಪಕ್ಷವಲ್ಲ ಎಂದು ದರ್ಶನ್ ಹಲವು ಬಾರಿ ತಿಳಿಸಿದ್ದಾರೆ.

  ''ನೀವು ಮೋದಿ ಫ್ಯಾನಾ?'' ಎಂಬ ಪ್ರಶ್ನೆಗೆ ದರ್ಶನ್ ನೀಡಿದ ಉತ್ತರವಿದು!

  ನಾಳೆಯಿಂದ ಮಂಡ್ಯದಲ್ಲಿ ದರ್ಶನ್ ಅಬ್ಬರ

  ನಾಳೆಯಿಂದ ಮಂಡ್ಯದಲ್ಲಿ ದರ್ಶನ್ ಅಬ್ಬರ

  ಹಾಗ್ನೋಡಿದ್ರೆ, ಇದೇ ಮೊದಲ ಸಲ ನಟ ದರ್ಶನ್ ಇಷ್ಟು ದೊಡ್ಡ ಸಮಯದ ಪ್ರಚಾರವನ್ನ ಒಬ್ಬ ಅಭ್ಯರ್ಥಿಗೆ ಮಾಡ್ತಿದ್ದಾರೆ. ಸುಮಲತಾ ಅಂಬರೀಶ್ ಪರ ಹನ್ನೊಂದು ದಿನ ಪ್ರಚಾರ ಮಾಡುತ್ತಿದ್ದು, ಶತಾಯಗತಾಯ ಅಂಬಿ ಪತ್ನಿಯನ್ನ ಗೆಲ್ಲಿಸಲೇ ಬೇಕು ಪಣ ತೊಟ್ಟಿದ್ದಾರೆ. ಬಹುಶಃ ಈ ಪ್ರಚಾರವನ್ನ ದರ್ಶನ್ ಅವರು ವೈಯಕ್ತಿಕವಾಗಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

  ಮುಂದಿನ 5 ದಿನ ದರ್ಶನ್ ಪ್ರಚಾರ ಮಾಡಲ್ಲ, ದಿಢೀರ್ ಈ ನಿರ್ಧಾರಕ್ಕೆ ಕಾರಣವೇನು?

  English summary
  Why Kannada actor darshan campaigning in Mp and Mla election for only selected candidates. This is the reason behind the Challenging star darshan campaign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X