twitter
    For Quick Alerts
    ALLOW NOTIFICATIONS  
    For Daily Alerts

    ಧ್ರುವ ಸರ್ಜಾ 'ಮಾರ್ಟಿನ್‌' ಕ್ಲೈಮ್ಯಾಕ್ಸ್‌ಗೆ 56 ದಿನ ತೆಗೆದುಕೊಂಡಿದ್ದೇಕೆ? ಸಿನಿಮಾದಲ್ಲಿ ಅಂತಹದ್ದೇನಿದೆ?

    |

    2022ನಲ್ಲಿ ಸ್ಯಾಂಡಲ್‌ವುಡ್ ಯಶಸ್ಸಿನ ಉತ್ತುಂಗದಲ್ಲಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳೆಲ್ಲಾ ಗೆದ್ದು ಬೀಗಿವೆ. 'ಕೆಜಿಎಫ್ 2','ವಿಕ್ರಾಂತ್ ರೋಣ', '777 ಚಾರ್ಲಿ' ಹಾಗೂ 'ಕಾಂತಾರ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿವೆ.

    ಇದೇ ಜೋಷ್‌ನಲ್ಲಿ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ದುಬಾರಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ಅದುವೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್'. ಎ ಪಿ ಅರ್ಜುನ್ ನಿರ್ಮಿಸುತ್ತಿರುವ ಈ ಸಿನಿಮಾ ಅದ್ಧೂರಿಯಾಗಿ ಶೂಟಿಂಗ್ ಆರಂಭ ಮಾಡಿದೆ.

    ಅಮೃತ ಮಹೋತ್ಸವಕ್ಕೆ ಸರ್ಪ್ರೈಸ್ ಕೊಡಲು ಮುಂದಾದ ಆ್ಯಕ್ಷನ್ ಪ್ರಿನ್ಸ್!ಅಮೃತ ಮಹೋತ್ಸವಕ್ಕೆ ಸರ್ಪ್ರೈಸ್ ಕೊಡಲು ಮುಂದಾದ ಆ್ಯಕ್ಷನ್ ಪ್ರಿನ್ಸ್!

    'ಮಾರ್ಟಿನ್' ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಆದರೆ, ಕೆಲವು ದಿನಗಳ ಹಿಂದೆ ಈ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವಿಚಾರದಲ್ಲಿ ಸುದ್ದಿಯಲ್ಲಿತ್ತು. ಕೇವಲ ಕ್ಲೈಮ್ಯಾಕ್ಸ್ ಆಕ್ಷನ್ ಸೀನ್‌ ಅನ್ನೇ ಸುಮಾರು 56 ದಿನ ಶೂಟ್ ಮಾಡಿದ್ದು ಸುದ್ದಿಯಾಗಿತ್ತು. ಅಷ್ಟಕ್ಕೂ ಇಷ್ಟೊಂದು ದಿನ ಕ್ಲೈಮ್ಯಾಕ್ಸ್ ಶೂಟ್ ಮಾಡುವ ಅಗತ್ಯವೇನಿತ್ತು? ಯಾಕಿಷ್ಟು ತಡವಾಗುತ್ತಿದೆ? ಅನ್ನೋದನ್ನು ಸಿನಿಮಾ ನಿರ್ಮಾಪಕರೇ ತಿಳಿಸಿ ಹೇಳಿದ್ದಾರೆ.

    ಇಂಡಿಯಾ ತಿರುಗಿ ನೋಡುವ ಕಾಲ

    ಇಂಡಿಯಾ ತಿರುಗಿ ನೋಡುವ ಕಾಲ

    ಸ್ಯಾಂಡಲ್‌ವುಡ್‌ ಸ್ಟಾರ್ ನಟರು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಹಾಗೇ ನಿರ್ಮಾಪಕರೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಕ್ಕೆ ಉತ್ಸಾಹ ತೋರುತ್ತಿದ್ದಾರೆ. ಹೀಗಾಗಿ 'ಮಾರ್ಟಿನ್' ಸಿನಿಮಾ ನಿರ್ಮಾಪಕ ಉದಯ್ ಕೆ ಮೆಹ್ತಾ ಕ್ಲೈಮ್ಯಾಕ್ಸ್ ಶೂಟ್ ಬಗ್ಗೆ ಕನ್ನಡ ಪಿಕ್ಚರ್ ಜೊತೆ ಕೆಲವು ರಹಸ್ಯಗಳನ್ನು ಬಿಟ್ಟುಕೊಟ್ಟಿದ್ದಾರೆ. "ಈಗ ನಮ್ಮ ಇಂಡಸ್ಟ್ರಿಯನ್ನು ಇಡೀ ಇಂಡಿಯಾ ತಿರುಗಿ ನೋಡುವ ಕಾಲ. ನಾವು ಸಿನಿಮಾವನ್ನು ಅದೇ ಲೆವೆಲ್‌ಗೆ ಕಾಂಪಿಟೇಟಿವ್ ಆಗಿ ಮಾಡಬೇಕು. ಈಗ ನಾವೇ ಪ್ರಮುಖವಾಗಿ ಇದ್ದೇವೆ ಅನ್ನೋದು ಹೆಮ್ಮೆಯ ವಿಷಯ. ಅದೇ ತರಾನೇ ನಮ್ಮ ಕಡೆಯಿಂದಲೂ ಇಡೀ ಇಂಡಿಯಾ ತಿರುಗಿ ನೋಡುವಂತಹ ಸಿನಿಮಾ ಆಗಲಿ ಅನ್ನೋದು ನಮ್ಮ ಪ್ರಯತ್ನ." ಎಂದು ನಿರ್ಮಾಪಕರು ಹೇಳಿದ್ದಾರೆ.

    ಅತ್ಯಾಧುನಿಕ ಕ್ಯಾಮರಾ ಬಳಸಿದ ತಂಡ

    ಅತ್ಯಾಧುನಿಕ ಕ್ಯಾಮರಾ ಬಳಸಿದ ತಂಡ

    'ಮಾರ್ಟಿನ್' 56 ದಿನ ಕ್ಲೈಮ್ಯಾಕ್ಸ್ ಸೀನ್ ಶೂಟ್ ಮಾಡಿರೋ ಸುದ್ದಿ ಹರಿದಾಡಿತ್ತು. ಅಷ್ಟಕ್ಕೂ ಬರೀ ಕ್ಲೈಮ್ಯಾಕ್ಸ್ ಸೀನ್‌ ಅನ್ನು ಇಷ್ಟು ದಿನ ಶೂಟ್ ಮಾಡಿದ್ದು ಯಾಕೆ? ಅನ್ನೋ ಕುತೂಹಲ ಎಲ್ಲರನ್ನೂ ಮನೆ ಮಾಡಿತ್ತು. ಆ ಸೀಕ್ರೆಟ್ ಅನ್ನು 'ಮಾರ್ಟಿನ್' ನಿರ್ಮಾಪಕ ಉದಯ್ ಕೆ ಮೆಹ್ತಾ ರಿವೀಲ್ ಮಾಡಿದ್ದಾರೆ. "ಟೆಕ್ನಿಕಲಿ ಅಪ್‌ಗ್ರೇಡೆಡ್‌ ಆಗಿ ಏನೆಲ್ಲಾ ಉಪಕರಣಗಳಿವೆ ಅವುಗಳನ್ನು ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಬಳಸುತ್ತಿದ್ದೇವೆ. ಆಧುನಿಕ ತಂತ್ರಜ್ಞಾನ ಬಳಸಿ ಸಿನಿಮಾ ಮಾಡುತ್ತಿರೋ ಮೊದಲ ಕನ್ನಡ ಸಿನಿಮಾ ಇದು. ಹೀಗಾಗಿ ಇಷ್ಟು ಸಮಯ ಕೇಳುತ್ತೆ. ನಾವು ಬಳಸುತ್ತಿರುವ ಕ್ಯಾಮರಾ ಒಂದು ದಿನ ಮಾಡುವ ಕೆಲಸವನ್ನು ಎರಡು ದಿನ ಕೇಳುತ್ತಿತ್ತು. ಈ ಕಾರಣಕ್ಕೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಹಿಡಿಯುತ್ತಿದೆ. " ಎಂದು ಹೇಳಿದ್ದಾರೆ.

    10 ವರ್ಷಗಳ ಬಳಿಕ ಅರ್ಜುನ್-ಧ್ರುವ ಸಿನಿಮಾ

    10 ವರ್ಷಗಳ ಬಳಿಕ ಅರ್ಜುನ್-ಧ್ರುವ ಸಿನಿಮಾ

    " ಮಿಲಿಟರಿಯಿಂದ ಕಾರುಗಳನ್ನು ತರಿಸಿದ್ದಲ್ಲ. ನಮಗೆ ಹೆಂಗೆ ಬೇಕೋ ಹಂಗೆ ಮಾಡಿಸಿದ್ದು. ಹೀಗೇ ಬೇಕು ಅಂತ ಅಂದುಕೊಂಡು ನಾವೇ ಮಾಡಿಸಿರೋದು ತರಿಸಿರೋದಲ್ಲ. 10 ವರ್ಷಗಳ ಬಳಿಕ ಎ ಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಇಬ್ಬರನ್ನೂ ಒಟ್ಟಿಗೆ ಸೇರಿಸಿದ್ದೀನಿ ಅನ್ನೋ ಖುಷಿ ಇದೆ. ಪ್ರೇಕ್ಷಕರು ಒಂದೊಳ್ಳೆ ಸಿನಿಮಾವನ್ನ ಎದುರು ನೋಡಬಹುದು. " ಎಂದು ಕಾನ್ಫಿಡೆಂಟ್ ಆಗಿ ಮಾತಾಡಿದ್ದಾರೆ.

    ದುಬಾರಿ ಬಜೆಟ್ ಸಿನಿಮಾ

    ದುಬಾರಿ ಬಜೆಟ್ ಸಿನಿಮಾ

    'ಮಾರ್ಟಿನ್' ಸೆಟ್ಟೇರುವ ಮುನ್ನವೇ ಚಿತ್ರತಂಡ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದನ್ನು ಅನೌನ್ಸ್ ಮಾಡಿತ್ತು. ಆ ವೇಳೆ ಅಂದುಕೊಂಡ ಬಜೆಟ್ ಮೀರಿ ಸಿನಿಮಾ ಮುಂದಕ್ಕೆ ಹೋಗಿದೆ. ಈ ಕಾರಣಕ್ಕೆ ಈ ಕಾರಣಕ್ಕೆ 'ಮಾರ್ಟಿನ್' ದುಬಾರಿ ಸಿನಿಮಾಗಳಲ್ಲೊಂದು. ಅಲ್ಲದೆ ಜನರು ಸಿನಿಮಾ ಮೇಕಿಂಗ್ ನೋಡಿದಾಗ ಖುಷಿ ಪಡುತ್ತಾರೆ ಭರವಸೆಯಲ್ಲಿ ನಿರ್ಮಾಪಕರಿದ್ದಾರೆ.

    English summary
    Why Dhruva Sarja Starrer Martin Movie Team Took 56 Days For Climax Scene, Know More.
    Thursday, November 24, 2022, 20:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X