»   » ಅಂಬರೀಶ್ ಗೆ ಸಿಕ್ಕ ಗೌರವ ರಾಜ್ ಗೆ ಸಿಗಲಿಲ್ಲ?

ಅಂಬರೀಶ್ ಗೆ ಸಿಕ್ಕ ಗೌರವ ರಾಜ್ ಗೆ ಸಿಗಲಿಲ್ಲ?

By: ಜೀವನರಸಿಕ
Subscribe to Filmibeat Kannada

ಮಾಧ್ಯಮಗಳಲ್ಲಿ ಸುದ್ದಿ ಕೇಳಿದ್ದ ಚಿತ್ರಪ್ರೇಮಿಗಳಿಗೆ, ರಾಜ್ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಯಾಕಂದ್ರೆ ವೇದಿಕೆಯಲ್ಲಿ ಮತ್ತೆ ಅಭಿಮಾನಿಗಳ ಆಸೆಗೆ ತಣ್ಣೀರೆರೆಚಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.

ವೇದಿಕೆಯ ಮೇಲೆ ಮಾಡೆಲ್ ಗಳಂತೆ ಬಂದ ಈ ಇಬ್ಬರೂ ಸೂಪರ್ ಸ್ಟಾರ್ ಗಳು ಮತ್ತೊಮ್ಮೆ ಡಬ್ಬಿಂಗ್ ವಿರೋಧಿ ಆಂದೋಲನದಲ್ಲಿ ನಾಮ್ ಕೆ ವಾಸ್ತೇ ಬಂದು ಹೋದಂತೆ ಇಲ್ಲೂ ಬಂದು ಹೋದ್ರು. ಇದು ಅಭಿಮಾನಿಗಳಿಗೆ ನಿರಾಶೆಯ ಜೊತೆ ನೋವುಂಟುಮಾಡ್ತು. [ಅಣ್ಣಾವ್ರ ನೆನಪಲ್ಲಿ ಮನರಂಜನಾ ಮಹಾಪೂರ]

Ambi and Sumalatha

ಕೆಲವರು ಸ್ಥಳದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ರೆ ಮತ್ತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗ ಜಾಡಿಸ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಸರಿನಂತಿರೋ ರಾಜ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ನಾಲ್ಕು ಹೆಜ್ಜೆ ಹಾಕಿ ರಂಜಿಸಬಹುದಿತ್ತು. ಯಾಕಂದ್ರೆ ಇದೇ ಕಿಚ್ಚ ದಚ್ಚು ರೆಬೆಲ್ ಸ್ಟಾರ್ ಅಂಬಿಗೆ 60 ವರ್ಷವಾದ ಸಂಭ್ರಮದ ಕಾರ್ಯಕ್ರಮದಲ್ಲಿ ಕುಚಿಕೂ ಕುಚಿಕೂ ಹಾಡಿಗೆ ಕುಣಿದು ಹುಚ್ಚೆಬ್ಬಿಸಿದ್ರು.

ಪಾಪ ಅಂಬಿಗೆ ಸಿಕ್ಕ ಗೌರವ ರಾಜ್ ಗೆ ಸಿಗ್ಲಿಲ್ವಾ ಅಂತೀರಾ ಖಂಡಿತಾ ಅಲ್ಲ. ರಾಜ್ ಕಾರ್ಯಕ್ರಮದಲ್ಲಿ ಹೆಜ್ಜೆಹಾಕಿದ್ರು ಅವ್ರ ಗೌರವ ಹೆಚ್ಚಾಗ್ತಿತ್ತು. ಇವ್ರು ಕುಣಿದು ರಾಜ್ ಗೆ ಗೌರವ ಕೊಡ್ಬೇಕಾಗಿಲ್ಲ ಅಂತಿದ್ದಾರೆ ರಾಜ್ ಅಭಿಮಾನಿಗಳು.

English summary
Why Dr Rajkumar didn't get much honour as Rebel Star Ambareesh? Both Kichcdha Sudeep and Challenging Star Darshan behaviour in Dr Rajkumar Memorial Cultural Night raised an eye brow of many.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada