twitter
    For Quick Alerts
    ALLOW NOTIFICATIONS  
    For Daily Alerts

    'ನಿಮ್ಮ ಪ್ರತಿಭೆಗೆ ಯಾಕಿಲ್ಲ ರಾಜ್ಯ ಪ್ರಶಸ್ತಿ'? ಅಭಿಮಾನಿಗೆ ಜಗ್ಗೇಶ್ ಉತ್ತರಿಸಿದ್ದೇನು?

    |

    Recommended Video

    ರಾಜ್ಯ ಪ್ರಶಸ್ತಿ ಬಗ್ಗೆ ಜಗ್ಗೇಶ್ ಹೇಳಿದ ಮಾತೇನು? | FILMIBEAT KANNADA

    ಸುಮಾರು 38 ವರ್ಷದಿಂದ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುತ್ತಿದ್ದಾರೆ. ಖಳನಟನಾಗಿ, ಪೋಷಕ ನಟನಾಗಿ, ನಾಯಕ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ, ಚಿತ್ರರಂಗದ ಹಿರಿಯರಾಗಿ ಕನ್ನಡ ಇಂಡಸ್ಟ್ರಿಯಲ್ಲಿ ಕಲಾಸೇವೆ ಸಲ್ಲಿಸಿದ್ದಾರೆ.

    ಆದರೆ, ಜಗ್ಗೇಶ್ ಅವರು ಹೆಚ್ಚು ಇಷ್ಟಪಡುವ ಮತ್ತು ಆರಾಧಿಸುವ ಅಭಿಮಾನಿಗಳು ಒಂದು ವಿಚಾರದಲ್ಲಿ ಭಾರಿ ನಿರಾಸೆ ಇದೆ. ಇದುವರೆಗೂ ನವರಸ ನಾಯಕನಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಸಿಕ್ಕದೆ ಇರುವುದು ಬೇಸರ ತರಿಸಿದೆ.

    ಸರಿಯಾದ ಪಾತ್ರ ಕೊಟ್ಟರೆ ತಪ್ಪದೆ ಬಾಲ್ ಬೌಂಡರಿಗೆ ತಲುಪಿಸುವೆ: ನಟ ಜಗ್ಗೇಶ್ಸರಿಯಾದ ಪಾತ್ರ ಕೊಟ್ಟರೆ ತಪ್ಪದೆ ಬಾಲ್ ಬೌಂಡರಿಗೆ ತಲುಪಿಸುವೆ: ನಟ ಜಗ್ಗೇಶ್

    ಈ ಕುರಿತು ಸ್ವತಃ ಜಗ್ಗೇಶ್ ಅವರೇ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಯೊಬ್ಬರು ರಾಜ್ಯ ಪ್ರಶಸ್ತಿ ಸಿಗದೆ ಇರುವ ಬಗ್ಗೆ ಪ್ರಶ್ನಿಸಿದ್ದು, ಅದಕ್ಕೆ ಉತ್ತರಿಸಿದ್ದಾರೆ. ಹಾಗಾದ್ರೆ, ರಾಜ್ಯ ಪ್ರಶಸ್ತಿ ಬಗ್ಗೆ ಜಗ್ಗೇಶ್ ಏನಂದ್ರು?

    ರಾಜ್ಯ ಪ್ರಶಸ್ತಿ ಯಾಕಿಲ್ಲ?

    ರಾಜ್ಯ ಪ್ರಶಸ್ತಿ ಯಾಕಿಲ್ಲ?

    ''38 ವರ್ಷ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ನಿಮಗೆ ಸಿಗದ ರಾಜ್ಯ ಪ್ರಶಸ್ತಿ, ಇಂದು ನಿನ್ನೆ ಮೊನ್ನೆ ಬಂದವರಿಗೆ ಸಿಗುತ್ತಿದೆ ತುಂಬಾ ನೂವಿನ ವಿಷಯ, ಜಗ್ಗಣ್ಣ ಏನೆ ಇರಲಿ ನಮ್ಮ ಕನ್ನಡಿಗರು ನಿಮ್ಮ ಮೇಲೆ ಇಟ್ಟ ಪ್ರೀತಿ ಅಭಿಮಾನ ಅದೇ ನಿಮಗೆ ರಾಷ್ಟ್ರ ಪ್ರಶಸ್ತಿ'' ಎಂದು ಅಭಿಮಾನಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದರು.

    ನಾಲ್ಕು ಗೋಡೆ ಮಧ್ಯೆ ನಿರ್ಧರಿಸುವ ಪಾರಿತೋಷ ಬೇಡ

    ನಾಲ್ಕು ಗೋಡೆ ಮಧ್ಯೆ ನಿರ್ಧರಿಸುವ ಪಾರಿತೋಷ ಬೇಡ

    ''ಯಾವ ಮನುಷ್ಯ ತಾನು ಮಾಡಿದ ಕಾರ್ಯಕ್ಕೆ ಪ್ರತಿಪಲ ಅಪೇಕ್ಷೆ ಪಡುತ್ತಾನೆ ಅವನ ಸಾಧನೆ ಶೂನ್ಯವಾಗುತ್ತದೆ! ನಾವು ಮಾಡುವ ಕಾರ್ಯ ಪಲಾಫೇಕ್ಷೆ ಇಲ್ಲದೆ ಮಾಡಿದಾಗ ದೇವರಿಗೆ ಹತ್ತಿರ ಆಗುತ್ತೇವೆ ! ಜನ್ಮಾಂತರ ಪುಣ್ಯ ಅನೇಕ ಆತ್ಮಗಳ ನಗಿಸುವ ಕಾಯಕ ಕೊಟ್ಟ ದೇವರಿಗೆ! ನಾಲ್ಕು ಗೋಡೆ ಮಧ್ಯೆ ನಿರ್ಧರಿಸುವ ಪಾರಿತೋಷಕಕ್ಕಿಂತ ಆತ್ಮದಲ್ಲಿ ಹರಸುವುದೆ ಶ್ರೇಷ್ಠಪಾರಿತೋಷಕ!'' ಎಂದು ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.

    'ದಕ್ಷಿಣೆ ಪಡೆದು ಕಳಿಸುವ ಚಾಂಡಾಳ ವೃತ್ತಿಯಾಗಿದೆ ಚಿತ್ರರಂಗ': ನಟ ಜಗ್ಗೇಶ್ ಆಕ್ರೋಶ'ದಕ್ಷಿಣೆ ಪಡೆದು ಕಳಿಸುವ ಚಾಂಡಾಳ ವೃತ್ತಿಯಾಗಿದೆ ಚಿತ್ರರಂಗ': ನಟ ಜಗ್ಗೇಶ್ ಆಕ್ರೋಶ

    ರಾಜ್ಯ ಪ್ರಶಸ್ತಿ ತಿರಸ್ಕರಿಸಿದ್ದ ಜಗ್ಗೇಶ್

    ರಾಜ್ಯ ಪ್ರಶಸ್ತಿ ತಿರಸ್ಕರಿಸಿದ್ದ ಜಗ್ಗೇಶ್

    ಗುರುಪ್ರಸಾದ್ ನಿರ್ದೇಶನ ಮಾಡಿದ್ದ ಮಠ ಚಿತ್ರದ ನಟನೆಗಾಗಿ ಜಗ್ಗೇಶ್ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿತ್ತು. ಆದರೆ, ಪೋಷಕ ನಟ ವಿಭಾಗದಲ್ಲಿ ಪ್ರಶಸ್ತಿ ನೀಡಿದ್ದರಿಂದ ಜಗ್ಗೇಶ್ ಈ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ. ಯಾಕಂದ್ರೆ, ನಾಯಕ ನಟನಾಗಿ ಅಭಿನಯದ ಚಿತ್ರಕ್ಕೆ ಪೋಷಕ ನಟ ಎಂದು ಗುರುತಿಸಿದರೆ ಅದು ಗೌರವವಲ್ಲ ಎಂದು ನಿರಾಸಕರಿಸಿದ್ದರು.

    ಸಿನಿಮಾ ಸೇರಲು ಮದ್ರಾಸಿಗೆ ಹೋಗಿ ಭಿಕ್ಷುಕನಂತೆ ಅಲೆಡಾಡಿದ್ದ ಜಗ್ಗೇಶ್ ಕಥೆ ಇಲ್ಲಿದೆ.!ಸಿನಿಮಾ ಸೇರಲು ಮದ್ರಾಸಿಗೆ ಹೋಗಿ ಭಿಕ್ಷುಕನಂತೆ ಅಲೆಡಾಡಿದ್ದ ಜಗ್ಗೇಶ್ ಕಥೆ ಇಲ್ಲಿದೆ.!

    ರಾಜ್ಯ ಪ್ರಶಸ್ತಿ ನಂಬಿಕೆ ಕಳೆದುಕೊಳ್ಳುತ್ತಿದ್ಯಾ?

    ರಾಜ್ಯ ಪ್ರಶಸ್ತಿ ನಂಬಿಕೆ ಕಳೆದುಕೊಳ್ಳುತ್ತಿದ್ಯಾ?

    ಒಂದು ಸಮಯದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಅಂದ್ರೆ ಶ್ರೇಷ್ಠ ಗೌರವ ಎನ್ನುತ್ತಿದ್ದರು. ಈಗ ರಾಜ್ಯ ಪ್ರಶಸ್ತಿ ಅಂದರೆ, ಲಾಭಿ ಮಾಡಿದ್ರೆ ಸಿಗುತ್ತೆ ಬಿಡಿ ಎಂಬ ಅಭಿಪ್ರಾಯ ಮೂಡಿದೆ. ನೆನ್ನೆ ಮೊನ್ನೆ ಬಂದವರಿಗೆ, ಅರ್ಹತೆ ಇಲ್ಲದವರಿಗೆ, ಆಯ್ಕೆ ಸಮಿತಿಯಗೆ ಆತ್ಮೀಯರಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತೆ ಎಂಬ ಆಕ್ರೋಶ ಪ್ರತಿ ಸಲ ಪ್ರಶಸ್ತಿ ಘೋಷಣೆಯಾದಾಗಲೂ ಕೇಳಿ ಬರುತ್ತೆ.

    English summary
    Kannada actor Jaggesh representing kannada film industry from last 30 years. he acted more than 100 movies. but, he did not wins state award. why?
    Saturday, January 25, 2020, 14:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X