»   » ಸೆಂಚುರಿ ಸ್ಟಾರ್ 'ಶಿವ' ಬಿಡುಗಡೆ ತಡವಾಗಿದ್ದೇಕೆ ಶಿವಾ?

ಸೆಂಚುರಿ ಸ್ಟಾರ್ 'ಶಿವ' ಬಿಡುಗಡೆ ತಡವಾಗಿದ್ದೇಕೆ ಶಿವಾ?

Posted By:
Subscribe to Filmibeat Kannada

"ಶಿವ ಎರಡು ಕಣ್ಣು ತೆರೆದರೆ ಕ್ಲಾಸ್. ಮೂರನೇ ಕಣ್ಣು ತೆರೆದರೆ ಮಾಸ್. ಮೂರೂ ಕಣ್ಣು ತೆರೆದರೆ ಖಲ್ಲಾಸ್" ಇದಿಷ್ಟು ಸಾಕಲ್ಲವೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 101ನೇ ಚಿತ್ರದ ಬಗ್ಗೆ ಹೇಳಲು. ಓಂ ಪ್ರಕಾಶ್ ರಾವ್ ನಿರ್ದೇಶನದ ಪಕ್ಕಾ ಮಾಸ್ ಚಿತ್ರವಿದು.

ಶಿವರಾಜ್ ಕುಮಾರ್ ಅವರ 'ಶಿವ' ಚಿತ್ರವನ್ನು ಆಗಸ್ಟ್ 10 ರಂದು ಬಿಡುಗಡೆ ಮಾಡಬೇಕೆಂದು ಚಿತ್ರತಂಡ ಯೋಜನೆ ಹಾಕಿಕೊಂಡು ಅದಕ್ಕೆ ತಕ್ಕ ರೀತಿಯಲ್ಲಿ ಪ್ರಚಾರದ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಆದರೆ, "ಚಿತ್ರದ ತಾಂತ್ರಿಕ ಕೆಲಸಗಳಲ್ಲಿ ಆಗುತ್ತಿರುವ ವಿಳಂಬ ಹಾಗೂ ಈಗ ಮತ್ತೆ ಎರಡೂವರೆ ನಿಮಿಷಗಳ ಕಾಲ ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸ ಸೇರಿಕೊಳ್ಳಬೇಕಾಗಿ ಬಂದಿದ್ದರಿಂದ ಬಿಡುಗಡೆಗೆ ಹೊಸ ದಿನಾಂಕವನ್ನು ಪ್ರಕಟಿಸುವುದು ಅನಿವಾರ್ಯವಾಗಿದೆ" ಎಂದಿದೆ ಚಿತ್ರತಂಡ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಹಾಗೂ ಓಂ ಪ್ರಕಾಶ್ ರಾವ್ ನಿರ್ದೇಶನದ 'ಶಿವ' ಚಿತ್ರದ ಬಿಡುಗಡೆಯನ್ನು ಕೆಲವು ಅನಿವಾರ್ಯ ಕಾರಣಗಳಿಂದಾಗಿ ಎರಡು ವಾರಗಳ ಕಾಲ ಮುಂದೂಡಿ ಆಗಸ್ಟ್ 24 ರಂದು ಬಿಡುಗಡೆ ಮಾಡಬೇಕೆಂದು ನಿರ್ಧರಿಸಿಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ 'ಶಿವ' ಚಿತ್ರದ ನಿರ್ಮಾಣ ಸಂಸ್ಥೆ ಕಂಪನಿ ಎಂಟರ್ ಪ್ರೈಸಸ್, ಮಾಹಿತಿ ನೀಡಿದೆ. ಶಿವಣ್ಣರ 101ನೆಯ ಚಿತ್ರವಾಗಿರುವ ಶಿವಕ್ಕೆ ಪ್ರೇಕ್ಷಕರ ವಲಯದಲ್ಲಿ ಭಾರಿ ನಿರೀಕ್ಷೆ ವ್ಯಕ್ತವಾಗಿದೆ.

ಈ ಮೊದಲಿನ ಮಾಹಿತಿ ಪ್ರಕಾರ, ಚಿತ್ರದ ಮೊದಲ ಪ್ರತಿ ಆಗಸ್ಟ್ 01ಕ್ಕೆ ಬರಲಿದೆ ಎನ್ನಲಾಗಿತ್ತು. ಆದರೆ, ಇದೀಗ ಬಂದ ಮಾಹಿತಿ ಪ್ರಕಾರ, ಚಿತ್ರದ ಮೊದಲು ಪ್ರತಿ ಬರಲಿರುವುದು ಆಗಸ್ಟ್ 07 ಕ್ಕೆ. ನಂತರ ಆಗಸ್ಟ್ 08 ರಂದು ಚಿತ್ರವು ಸೆನ್ಸಾರ್ ಟೇಬಲ್ ಏರಲಿದೆ. ಸೆನ್ಸಾರ್ ಕಾಪಿ ಬಂದ ಮೇಲೆ ಚಿತ್ರದ ಭರ್ಜರಿ ಪ್ರಚಾರ ಕಾರ್ಯ ಆರಂಭವಾಗಲಿದ್ದು ನಂತರ ಆಗಸ್ಟ್ 24, 2012 ಕ್ಕೇ ಖಚಿತವಾಗಿ ಚಿತ್ರವನ್ನು ತೆರೆಗೆ ತರಲಾಗುವುದು ಎನ್ನಲಾಗಿದೆ.

ಕಂಪನಿ ಎಂಟರ್ ಪ್ರೈಸಸ್ ಬ್ಯಾನರ್ 'ಶಿವ' ಚಿತ್ರಕ್ಕೆ ಗ್ಲಾಮರ್ ರಾಣಿ ರಾಗಿಣಿ ನಾಯಕಿ. ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣವಿದೆ. ಓಂ ಪ್ರಕಾಶ್ ರಾವ್ ಹಾಗೂ ಸತ್ಯ ಹೆಗಡೆ ಈಗ ಚೆನ್ನೈನಲ್ಲೇ ಬೀಡು ಬಿಟ್ಟಿದ್ದು ಚಿತ್ರದ ವಿಶೇಷ ಗ್ರಾಫಿಕ್ಸ್ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ನಿರ್ಮಾಪಕ ಕೆ ಪಿ. ಶ್ರೀಕಾಂತ್, ವಿಶೇಷ ಗ್ರಾಫಿಕ್ಸ್ ಬಗ್ಗೆ ತೀರಾ ಆಸಕ್ತಿ ವಹಿಸಿ ಈಗಾಗಲೇ ಶೇ.95% ರಷ್ಟು ಗ್ರಾಫಿಕ್ಸ್ ಕೆಲಸ ಮುಗಿಸಿದ್ದಾರೆ. ಮತ್ತೆ ಎರಡೂವರೆ ನಿಮಿಷಗಳ ಗ್ರಾಫಿಕ್ಸ್ ಸೇರಿಸಲಾಗುತ್ತಿದೆ.

ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಅವರ ಬಹಳಷ್ಟು ಚಿತ್ರಗಳಿಗೆ ಕೆಲಸ ಮಾಡಿರುವ ದೊರೈ ಎನ್ನುವ ತಂತ್ರಜ್ಞರು 'ಶಿವ' ಚಿತ್ರದ ಮೇಕಿಂಗ್ ಹಾಗೂ ಗ್ರಾಫಿಕ್ಸ್ ಬಗ್ಗೆ ಪ್ರಶಂಸೆ ನೀಡಿದ್ದಾರೆ. "ಇಂತಹ ಚಿತ್ರವನ್ನು ತೆರೆಗೆ ತರುವಾಗ ಅವಸರ ಮಾಡದೇ ಎಲ್ಲಾ ಕೆಲಸಗಳನ್ನು ನಿಖರವಾಗಿ, ಸಣ್ಣ ಪುಟ್ಟ ದೋಷಗಳನ್ನು ಸರಿಪಡಿಸಿಕೊಂಡು ಅಚ್ಚುಕಟ್ಟಾಗಿ ಮಾಡಬೇಕು" ಎಂದು ಸಲಹೆ ನೀಡಿದ್ದಾರಂತೆ.

ದೊರೈ ಹಾಗೂ ಸತ್ಯಾ ಹೆಗಡೆಯವರ ಪ್ರಕಾರ "ಯಾವುದೇ ರಾಜಿ ಮಾಡಿಕೊಳ್ಳದೇ ಉತ್ತಮ ಕಂಪ್ಯೂಟರ್ ಗ್ರಾಫಿಕ್ಸ್ ಹಾಗೂ ಡಿಜಿಟಲ್ ಕೆಲಸ ಮಾಡಿ, 'ಶಿವ' ಚಿತ್ರದ ಮೊದಲ ಪ್ರತಿಯನ್ನು ಆಗಸ್ಟ್ 7 ಕ್ಕೆ ಹೊರತರಬಹುದು." ನಂತರ ಆಗಸ್ಟ್ 8 ರಂದು ಚಿತ್ರವನ್ನು ಸೆನ್ಸಾರ್ ಮಾಡಿಸಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿ ಮಾಧ್ಯಮಗಳಿಗೆ ಬಿಡುಗಡೆ ಬಗ್ಗೆ ಪಕ್ಕಾ ಮಾಹಿತಿ ನೀಡಲಾಗಿದೆ. ಹೀಗಾಗಿ, ಶಿವ ಚಿತ್ರವು ಆಗಸ್ಟ್ 24, 2012 ರಂದು ಬರುವುದು ಪಕ್ಕಾ ಆಗಿದೆ. (ಒನ್ ಇಂಡಿಯಾ ಕನ್ನಡ)

English summary
Because of graphics work Shivarajkumar lead Shiva postponed to 24th August said the producer K.P Srikanth. ‘Shiva opens two eyes it is Class, if he opens his third eye it is Mass, when he opens all the three eyes it is Kallas’. This is enough to describe that the film has the mass appeal.
Please Wait while comments are loading...