For Quick Alerts
  ALLOW NOTIFICATIONS  
  For Daily Alerts

  ಕನ್ನಡ ಸಿನಿಮಾ ನಿರ್ಲಕ್ಷ್ಯ ಮಾಡಿದ ರಶ್ಮಿಕಾ: 'ಪೊಗರು' ಪ್ರೊಮೋಷನ್ ನಿಂದ ದೂರ ಉಳಿದಿದ್ದೇಕೆ?

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಕೂಡ ಒಂದು. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಪೊಗರು ಸಿನಿಮಾ ಕೊನೆಗೂ ಚಿತ್ರಮಂದಿರದ ಅಂಗಳಕ್ಕೆ ಕಾಲಿಡುತ್ತಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವ ಮೂಲಕ ಪೊಗರು ಸಿನಿಮಾದ ರಿಲೀಸ್ ಡೇಟ್ ಬಹಿರಂಗ ಪಡಿಸಿದ್ದಾರೆ.

  ಪೊಗರು ಸಿನಿಮಾದಿಂದ ದೂರ ಉಳಿದ ರಶ್ಮಿಕಾ ಮಂದಣ್ಣ | Filmibeat Kannada

  ಪೊಗರು ಸಿನಿಮಾ ಫೆಬ್ರವರಿ 19 ರಥಸಪ್ತಮಿ ದಿನ ರಿಲೀಸ್ ಆಗುತ್ತಿದೆ. ಲಾಕ್ ಡೌನ್ ಬಳಿಕ ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಬಿಗ್ ಸಿನಿಮಾ ಇದಾಗಿದೆ. ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಪ್ರೊಮೋಷನ್ ಚಟುವಟಿಕೆಯಲ್ಲಿ ಸಿನಿಮಾತಂಡ ನಿರತವಾಗಿದೆ. ಆದರೆ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಮಾತ್ರ ಪೊಗರು ಸಿನಿಮಾದ ಬಗ್ಗೆ ಎಲ್ಲೂ ಉಸಿರೆತ್ತುತ್ತಿಲ್ಲ. ಕನ್ನಡ ಸಿನಿಮಾರಂಗದಿಂದ ದೂರ ಸರಿದಿರುವ ರಶ್ಮಿಕಾ, ತನ್ನದೆ ಸಿನಿಮಾದ ಬಗ್ಗೆಯೂ ಮಾತನಾಡದೆ ಇರುವುದು ಕನ್ನಡ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದೆ ಓದಿ..

  'ಪೊಗರು' ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ಧೃವ ಸರ್ಜಾ

  ಪೊಗರು ಸಿನಿಮಾದ ಪ್ರಮೋಷನ್ ನಿಂದ ದೂರ ಸರಿದ ರಶ್ಮಿಕಾ

  ಪೊಗರು ಸಿನಿಮಾದ ಪ್ರಮೋಷನ್ ನಿಂದ ದೂರ ಸರಿದ ರಶ್ಮಿಕಾ

  ರಶ್ಮಿಕಾ ಕೈಯಲ್ಲಿ ಇರುವುದು ಕನ್ನಡದ ಏಕೈಕ ಸಿನಿಮಾ ಪೊಗರು. ಕನ್ನಡ ಸಿನಿಮಾರಂಗದಿಂದ, ಕನ್ನಡ ಸಿನಿಮಾಗಳಿಂದ ರಶ್ಮಿಕಾ ಬಹು ದೂರ ಸರಿದಿದ್ದಾರೆ. ಪೊಗರು ಸಿನಿಮಾ ಬಳಿಕ ರಶ್ಮಿಕಾ ಕನ್ನಡದ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ, ಆದರೆ ಒಪ್ಪಿಕೊಂಡ ಸಿನಿಮಾಗೂ ಸರಿಯಾದ ನ್ಯಾಯ ಸಲ್ಲಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.

  ತನ್ನದೆ ಕನ್ನಡ ಸಿನಿಮಾದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ರಶ್ಮಿಕಾ?

  ತನ್ನದೆ ಕನ್ನಡ ಸಿನಿಮಾದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ರಶ್ಮಿಕಾ?

  ಪೊಗರು ಸಿನಿಮಾದ ಪ್ರಮೋಷನ್ ನಿಂದ ದೂರ ಉಳಿದಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಅವರ ಸಾಮಾಜಿಕ ಜಾಲತಾಣ. ಹೌದು, ಬೇರೆ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವ ರಶ್ಮಿಕಾ ಕನ್ನಡದ ಪೊಗರು ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನು ಶೇರ್ ಮಾಡಿಲ್ಲ. ಸಿನಿಮಾದ ಹಾಡು ಮತ್ತು ಟ್ರೇಲರ್ ದೊಡ್ಡ ಮಟ್ಟದಲ್ಲಿ ಹಿಟ್ ಆದರೂ ಸಹ ರಶ್ಮಿಕಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಪೊಗರು ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆದರೂ ಸಹ ಒಂದು ಪೋಸ್ಟರ್ ಅನ್ನು ಹಂಚಿಕೊಂಡಿಲ್ಲ.

  ಬೇರೆ ಭಾಷೆಯ ಚಿತ್ರಗಳನ್ನು ಪ್ರಮೋಟ್ ಮಾಡುವ ರಶ್ಮಿಕಾ

  ಬೇರೆ ಭಾಷೆಯ ಚಿತ್ರಗಳನ್ನು ಪ್ರಮೋಟ್ ಮಾಡುವ ರಶ್ಮಿಕಾ

  ಬೇರೆ ಭಾಷೆಯ ಕಲಾವಿದರ ಬಗ್ಗೆ, ಅವರ ಹುಟ್ಟುಹಬ್ಬಕ್ಕೆ ವಿಶ್ ಹಾಗೂ ಸಿನಿಮಾಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುವ ರಶ್ಮಿಕಾ ಕನ್ನಡ ಎಂದರೆ ಯಾಕಿಷ್ಟು ಅಸಡ್ಡೆ ಮಾಡುತ್ತಿದ್ದಾರೆ ಎನ್ನುವುದು ಕನ್ನಡ ಪ್ರೇಕ್ಷಕರ ಅಸಮಾಧಾನ. ಕನ್ನಡದ ಯಾವುದೇ ಸಿನಿಮಾಗಳ ಬಗ್ಗೆ ಅಥವಾ ಕಲಾವಿದರ ಬಗ್ಗೆ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಮಾಹಿತಿ ಶೇರ್ ಮಾಡುವುದಿಲ್ಲ. ಆದರೆ ತನ್ನದೆ ಸಿನಿಮಾವನ್ನು ಸಹ ಪ್ರಮೋಟ್ ಮಾಡದೆ ಇರುವುದು ಬೇಸರಕ್ಕೆ ಕಾರಣವಾಗಿದೆ.

  'ಜ್ವರ ಬಂದಿದ್ದರೂ ಕುಣಿಬೇಕು ಅನಿಸುತ್ತೆ': ಖರಾಬು ಹಾಡಿನ ಬಗ್ಗೆ ತಮಿಳು ಅಭಿಮಾನಿ ಮಾತು

  ರಶ್ಮಿಕಾ ಪೊಗರು ಸಿನಿಮಾದಿಂದ ದೂರ ಉಳಿದಿದ್ದೇಕೆ?

  ರಶ್ಮಿಕಾ ಪೊಗರು ಸಿನಿಮಾದಿಂದ ದೂರ ಉಳಿದಿದ್ದೇಕೆ?

  ಪೊಗರು ಸಿನಿಮಾಗೆ ಇದು ತುಂಬಾ ಮಹತ್ವದ ಘಟ್ಟ. ರಿಲೀಸ್ ಗೆ ಇದೊಂದೆ ತಿಂಗಳಿರುವುದು. ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರಲು ಹರಸಾಹಸ ಪಡಬೇಕು. ಇಡೀ ಸಿನಿಮಾತಂಡ ಚಿತ್ರದ ರಿಲೀಸ್ ನಲ್ಲಿ ನಿರತವಾಗಿದೆ. ಇಂಥ ಸಮಯದಲ್ಲಿ ಚಿತ್ರದ ನಾಯಕಿ ಪ್ರಮೋಷನ್ ಚಟುವಟಿಕೆಯಿಂದ ದೂರ ಉಳಿಯುವುದು ಚಿತ್ರತಂಡಕ್ಕೆ ದೊಡ್ಡ ಹೊಡೆತ. ರಶ್ಮಿಕಾ ಯಾಕೆ ಕನ್ನಡ ಸಿನಿಮಾದಿಂದ ದೂರ ಉಳಿದಿದ್ದಾರೆ, ತನ್ನದೆ ಸಿನಿಮಾ ಪೊಗರು ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎನ್ನುವುದು ಕನ್ನಡ ಪ್ರೇಕ್ಷಕರ ಪ್ರಶ್ನೆ.

  English summary
  Why Rashmika Mandanna Stay away from Pogaru Movie Promotions?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X